Veerakesari 06:53
ಮಂತ್ರಗಳಲ್ಲೇ ಶ್ರೇಷ್ಠ ವಾದ ಗಾಯತ್ರಿ ಮಂತ್ರ ರಚಿಸಿದ ವಿಶ್ವಾಮಿತ್ರ ಬ್ರಾಹ್ಮಣ್ಣರಲ್ಲ.. !!
ರಾಮಾಯಣ ರಚಿಸಿದ ವಾಲ್ಮಿಕಿ ಬೇಡನಾಗಿದ್ದರು..!!
ಮಹಾಭಾರತ ರಚಿಸಿದ ವ್ಯಾಸರು ಮೀನುಗಾರರು..!!
ನಾವು ಪೂಜಿಸುವ ರಾಮ, ಕೃಷ್ಣ ಕೂಡಾ ಬ್ರಾಹ್ಮಣ ಕುಲದಲ್ಲಿ ಹುಟ್ಟಿದವರಲ್ಲ..!!
ಆದರೂ ಈ ಮಾನವ ಜಗತ್ತಿನಲ್ಲಿ ಅವರೆಲ್ಲರೂ ಶ್ರೇಷ್ಠರಾದದ್ದು ಜ್ಞಾನದಿಂದ..
ಜ್ಞಾನವನ್ನು ಜಗತ್ತು ಎಂದೆಂದೂ ಗೌರವಿಸುತ್ತಾ ಬಂದಿದೆ
ಇದಕ್ಕೆ ಶ್ವೇತೋಪನಿಷತ್ತಿನ ಈ ಶ್ಲೋಕವನ್ನು ಕೂಡಾ ಉದಾಹರಣೆಯನ್ನಾಗಿ ನೀಡಬಹುದು
” ಅ ನೋ ಭದ್ರಾ ಕೃತವೋ ಯಂತು ವಿಶ್ವತ: ”
ಅಂದರೆ,
ಶ್ರೇಷ್ಟ ವಿಚಾರಗಳು ಜಗತ್ತಿನ ಯಾವ ಮೂಲೆಯಲ್ಲಿದ್ದರೂ ನಮಗೆ ಬರಲಿ ಎನ್ನುವ ಶ್ರೇಷ್ಟತೆಯನ್ನು ಸಾರುವ ಶ್ರೇಷ್ಟ ಧರ್ಮ ನಮ್ಮದು
ಅಂಬೇಡ್ಕರ್ ಅವರನ್ನು ನಾವು ಗೌರವಿಸುವುದೂ ಕೂಡಾ ಅವರ ಜ್ಞಾನ ಸಾಧನೆಗಾಗಿಯೆ.
ಇಂದು ಸರ್ವರಿಗೂ ಸಮಾನತೆ ನೀಡಿರುವ ಸಂವಿಧಾನವಿದೆ ದಲಿತರು ಹಿಂದುಳಿದವರೆಂಬ ಹೆಸರಿನಲ್ಲಿ ಮೀಸಲಾತಿ ಸೌಲಭ್ಯಗಳಿವೆ
ಇವುಗಳನ್ನು ಬಳಸಿಕೊಂಡು ಜ್ಞಾನ ಗಳಿಸಿ ದೇಶದ ಉತ್ತಮ ಪ್ರಜೆಯಾಗುವುದನ್ನು ಬಿಟ್ಟು ಮೇಲ್ವರ್ಗದವರು ತುಳಿಯುತ್ತಿದ್ದಾರೆ ಎಂದು ದೂರುತ್ತ ಕುಳಿತರೆ ಉದ್ದಾರವಾಗಲು ಸಾಧ್ಯವೇ..?
ಕೆಲ ಕಿಡಿಗೇಡಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ವರ್ಗ ಗಳ ವಿರುದ್ದ ಎತ್ತಿಕಟ್ಟಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ
ಅವರ ಹಿಂದೆ ಹೋದರೆ ದಲಿತೋದ್ಧಾರ ಸಾಧ್ಯವೇ..?
ನೀ ದಲಿತನೇ..? ವಾಲ್ಮಿಕಿಯಾಗು.. !!
ನೀ ದಲಿತನೇ..? ವ್ಯಾಸನಾಗು.. !!
ನೀ ದಲಿತನೇ..? ಅಂಬೇಡ್ಕರರಾಗು.. !!
ನಾವು ಬೆಳೆಯುವುದರ ಬಗ್ಗೆ ಚಿಂತಿಸಬೇಕೆ ಹೊರತು ಇನ್ನೊಂದು ವರ್ಗವನ್ನು ತುಳಿಯುವುದರ ಬಗ್ಗೆ ಅಲ್ಲ
ಇದು ಎಲ್ಲರಿಗೂ ಅನ್ವಯವಾಗುವಂಥದ್ದು
ಇನ್ನೊಬ್ಬನನ್ನು ತುಳಿಯುವುದನ್ನು ಹೇಳಿ ಪ್ರಚೋದಿಸುತ್ತಿರುವ ನಕಲಿ ದಲಿತ ನಾಯಕರು ದಲಿತೋದ್ಧಾರ ಮಾಡಲು ಸಾಧ್ಯವೇ..?.
ನಮ್ಮ ಶಕ್ತಿ ಗೆಲುವಿನ ಕಡೆಗಿರಲಿ,
ವರ್ಗ ಸಂಘರ್ಷದ ಕಡೆಗಲ್ಲ.
ಇಷ್ಟಕ್ಕೂ ನಿಮಗಿದು ತಿಳಿದಿದೆಯೇ..?
ದಲಿತರ ದಮನಿತರ ಹಿಂದುಳಿದವರ ಪರ ಹೋರಾಟ ಮಾಡೋಣ ಅಂತ ಚಲೋ ಉಡುಪಿ ಕಾರ್ಯಕ್ರಮವನ್ನು ಆಯೋಜಿಸಿ ಆ ಮೂಲಕ ಮತಾಂಧ ಮುಸ್ಲಿಂ ಭಯೋತ್ಫಾದಕರ ಬೆಂಬಲಿಗರು ಬೇಳೆ ಬೇಯಿಸಿಕೋಂಡರು ಎನ್ನುವುದನ್ನು..?
ಇದೆಲ್ಲಾ ನಿಮಗೆ ಹೇಗೆ ತಿಳಿಯಲು ಸಾಧ್ಯ..?
ಬೇರೆಯವರನ್ನು ತೆಗಳುವ ಬರದಲ್ಲಿ ನಿಮ್ಮನ್ನೇ ನೀವು ಮರೆತಿದ್ದಿರಬಹುದು
ಈಗಲು ಕಾಲ ಮಿಂಚಿಲ್ಲ,
ಸಮಯವಿದ್ದರೆ ಚಲೋ ಉಡುಪಿ ಕಾರ್ಯಕ್ರಮದ ಸಂಪೂರ್ಣ ವೀಡಿಯೋ ನೋಡಿ
ಆಮೇಲೆ ನಿಮಗೇ ತಿಳಿಯುತ್ತದೆ
ನೀವೆಂಥಾ ತಪ್ಪು ಮಾಡುತ್ತಿದ್ದೀರಿ ಅಂತ.
ಇಷ್ಟಕ್ಕೂ ನಾನೇನು ಮೇಲ್ವರ್ಗದವನಲ್ಲ
ನಮ್ಮ ಸಂವಿದಾನದ ಪ್ರಕಾರ ನಾನೂ ಹಿಂದುಳಿದ ವರ್ಗದವನು
ಆದರೆ ನನಗೆ ಇನ್ನೋಂದು ವರ್ಗದವರನ್ನು ತುಳಿಯುವ ಚಿಂತೆ ಇಲ್ಲ
ನನ್ನನ್ನು ತುಳಿಯಲು ಬಯಸುವವರ ಬಗ್ಗೆಯೂ ನನಗೆ ಚಿಂತೆಯಿಲ್ಲ.
ಯಾಕೆಂದರೆ,
ಬೇರೆಯವರನ್ನು ತುಳಿದು ತಾನು ಮೇಲಕ್ಕೇರಲು ಬಯಸುವವನು ಮೇಲಕ್ಕೇರಿದ್ದು ನಮ್ಮ ದೇಶದ ಇತಿಹಾಸದಲ್ಲೇ ಇಲ್ಲ.
ಶ್ರೀ ಕೃಷ್ಣ ಪರಮಾತ್ಮ ಗೀತೆಯಲ್ಲಿ ಸುಮ್ಮನೇ ಹೇಳಿದಲ್ಲ,
ಶಿಷ್ಟರ ರಕ್ಷಣೆಗಾಗಿ ದುಷ್ಟರ ಧಮನಕ್ಕಾಗಿ ನಾನು ಯುಗ ಯುಗಗಳಲ್ಲಿಯೂ ಅವತಾರ ಎತ್ತಿ ಬರುತ್ತೇನೆ ಅಂತ.
ನನಗೆ ನನ್ನ ಧರ್ಮದ ಮೇಲೆ ನಂಬಿಕೆಯಿದೆಯೇ ವಿನ: ಡೋಂಗಿ ದಲಿತ ಮತ್ತು ಹಿಂದುಳಿದ ವರ್ಗಗಳ ಹೋರಾಟಗಾರರ ಮೇಲೆ ಅಲ್ಲ.
ಜೈ ಸನಾತನ ಹಿಂದೂ ಧರ್ಮ
✍  ಶಂಕರ್ ನೈಕ್ ಭಟ್ಕಳ್
ನಮ್ಮನ್ನು ಬೆಂಬಲಿಸಿ , ನಮ್ಮ ಪೇಜ್ ಲೈಕ್ ಮಾಡಿ –  http://m.facebook.com/veerakesari.in

Post a Comment

Powered by Blogger.