ದಲಿತರ ನೋವು ಇವರು ಬರೆಯುವ ಕಥೆ ಕವನಗಳಿಗೆ ಕೇವಲ ಕಥಾವಸ್ತು! ದಲಿತರ ಹೆಣ ಬಿದ್ದರೆ ಇವರಿಗೆ ಮೈಲೇಜ್ ತೆಗೆದುಕೊಳ್ಳಲೊಂದು ಅವಕಾಶ! ದಲಿತ ಚಿಂತಕ ಸಾಹಿತಿ ವಿಚಾರವಾದಿ ಅಂತ ಪ್ರಶಸ್ತಿಗಳು ಸರ್ಕಾರಿ ಸವಲತ್ತುಗಳು! ದಲಿತರು ಇನ್ನೂ ಶೋಷಣೆಗೊಳಪಡುತ್ತಲೇ ಇದ್ದಾರೆ. ಇವರು ಮಾತ್ರ ದಲಿತರ ಹೆಸರಲ್ಲಿ ರಾಜಕೀಯ ಮಾಡುತ್ತಾ ಮಜಾ ಮಾಡುತ್ತಿದ್ದಾರೆ!
ಆದರೆ ಈಗ ಕಾಲ ಬಂದಿದೆ! ನಿಜವಾಗಿ ದಲಿತರಿಗಾಗಿ ಕೆಲಸ ಮಾಡಿದವರು, ದಲಿತರಿಗಾಗಿ ಜೀವನ ಮೀಸಲಿಟ್ಟವರು, ದಲಿತರ ಏಳಿಗೆಗಾಗಿ ನಿಸ್ವಾರ್ಥವಾಗಿ ಎಲೆಮರೆಕಾಯಿಗಳಂತೆ ಕೆಲಸ ಮಾಡಿದ ನಿಜವಾದ ದಲಿತ ನಾಯಕರು ನಮ್ಮನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕನಕ ನಡೆಯಲ್ಲಿ ತಮ್ಮ ಮನದಾಳದ ಬೇಗುದಿಯನ್ನು ಬಿಚ್ಚಿಟ್ಟು ದಲಿತರ ನಿಜವಾದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಲಿದ್ದಾರೆ. ಅಕ್ಟೋಬರ್ 23 ರ ಸಂಜೆ ಉಡುಪಿಯಲ್ಲಿ ನಡೆಯಲಿರುವ ಬಹಿರಂಗ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ.
ಈ ಕಾರ್ಯಕ್ರಮದಲ್ಲಿ ವಿಚಾರ ಮಂಡಿಸಲು ಆಗಮಿಸುತ್ತಿರುವ ದಲಿತರಿಗಾಗಿ ಪ್ರಾಮಾಣಿಕ ಕೆಲಸ ಮಾಡಿರುವ ನಿಜವಾದ ದಲಿತ ನಾಯಕರಿಗೆ ಹೃದಯಪೂರ್ವಕ ಸ್ವಾಗತ ಕೋರುತ್ತಿದ್ದೇವೆ.
- ಈ ಕನಕ ನಡೆಯ ವಿಕಾಸ ಪರ್ವಕ್ಕೆ ಸಾರ್ವಜನಿಕರು ಬನ್ನಿ! ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬನ್ನಿ! ಹಿಂದು ಸಮಾಜಕ್ಕಂಟಿದ ಈ ಜಾತಿ ತಾರತಮ್ಯದ ಕಳಂಕವನ್ನು ಕಿತ್ತೊಗೆಯೋಣ!
Post a Comment