2008 ರಲ್ಲಿ ನಡೆದ ಮಾಲೆ ಗಾಂವ್ ಬಾಂಬ್ ಸ್ಪೋಟ ಕೇಸಿನಲ್ಲಿ ಯಾವುದೇ ತಪ್ಪು ಮಾಡದೆ ಶಿಕ್ಷೆ ಅನುಭವಿಸುತ್ತಿರುವ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ರ ಜಾಮೀನು ಅರ್ಜಿಯ ವಿಚಾರಣೆ ವೇಳೆ ಮುಂಬೈ ಹೈಕೋರ್ಟ್, ಏನೂ ತಪ್ಪುಮಾಡದ ಸಾಧ್ವಿಯನ್ನು ಜೈಲಿನಲ್ಲಿ ಇಟ್ಟಿರೋದು ಏಕೆ ಎಂದು ಕೇಳಿದ್ದಾರೆ.
ದಂಡಾಧಿಕಾರಿಯ ಕಛೇರಿಯವರೇ ಆಕೆಯ ಮೇಲೆ ಯಾವುದೇ ಆರೋಪ ಇಲ್ಲವೆಂದ ಮೇಲೂ ಆಕೆಯನ್ನು ಜೈಲಿನಲ್ಲಿರಿಸಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ.
ನಮ್ಮ ಪೇಸ್ಬುಕ್ ಪೇಜ್ http://m.facebook.com/veerakesari.in
ಈ ಹಿಂದೆ ಜೂನ್ 28ರಂದು ಮಹಾರಾಷ್ಟ್ರದ ವಿಶೇಷ ನ್ಯಾಯಾಲಯದಲ್ಲಿ ನಡೆದ ಜಾಮೀನು ಅರ್ಜಿ ವಿಚಾರಣೆ ವೇಳೆ ಸಾದ್ವಿಗೆ ಜಾಮೀನು ನಿರಾಕರಿಸಲಾಗಿತ್ತು. ಇದರಿಂದ ಆಕೆ ಹೈಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು.
ಇದೊಂದು ವಿಚಿತ್ರ ಪ್ರಕರಣವಾಗಿದ್ದು ಇಲ್ಲಿ ದಂಡಾಧಿಕಾರಿಯವರೇ ಆಕೆಯ ಮೇಲೆ ಯಾವುದೇ ಆರೋಪವಿಲ್ಲ ಎಂದ ಮೇಲೆ ಆಕೆಗೆ ಜಾಮೀನು ನಿರಾಕರಿಸಲು ,ಆಕೆಯನ್ನು ಕಂಬಿ ಹಿಂದೆ ಬಂಧಿಸಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ. ಇದರೊಂದಿಗೆ ಈ ಕೇಸ್ ನಲ್ಲಿ ಕಾಣದ ಕೈಗಳ ಕೈವಾಡವಿರುವುದು ಮತ್ತೊಮ್ಮೆ ಸಾಬೀತಾಗಿದೆ.
ಸಾಧ್ವಿ ಪ್ರಜ್ಞಾ ಸಿಂಗ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಮಹತ್ವದ ತೀರ್ಪು ಆದಷ್ಟು ಬೇಗನೆ ಹೊರಬೀಳಲಿದೆ.
Post a Comment