Veerakesari 07:33
ಮಂಗಳೂರು :​ ಲಕ್ಷಾಂತರ ಭಗವದ್ಭಕ್ತರನ್ನು ಹೊಂದಿರುವ ಶ್ರೀ ಕ್ಷೇತ್ರ ಕಟೀಲು ಅಮ್ಮನವರನ್ನು ಪೇಸ್ಬುಕ್ ನಲ್ಲಿ ಅವಹೇಳನ ಮಾಡಿದ ಬಹರೈನ್ ನಲ್ಲಿ ಉದ್ಯೋಗಿಯಾಗಿದ್ದ ಸುಳ್ಯ ಮೂಲದ ಮುಸ್ಲಿಂ ಯುವಕ ಶಾಫಿ ಬೆಳ್ಳಾರೆಯನ್ನು ಪೋಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ,
ಮೊದಲೇ ಈತನ ಮೇಲೆ ಲುಕ್ ಔಟ್ ನೋಟೀಸ್ ಜಾರಿಮಾಡಲಾಗಿತ್ತು.
ರವಿವಾರ ಬಹರೈನ್ ನಿಂದ ಮಂಗಳೂರಿಗೆ ಬರುವ ಖಚಿತ ಮಾಹಿತಿ ಮೇರೆಗೆ  ಪೋಲಿಸ್ ಸಿಬ್ಬಂದಿಗಳು ಶಾಫಿ ವಿಮಾನ ನಿಲ್ದಾಣದಿಂದ ಹೊರ ಬರುತ್ತಿದ್ದಂತೆ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆಂದು ಬಂದರು ಪೋಲಿಸ್ ಠಾಣೆಯ ಇನ್ಸ್‌ಪೆಕ್ಟರ್ ಶಾಂತರಾಮ್ ತಿಳಿಸಿದ್ದಾರೆ.
ಈತನ ಮೇಲೆ ಹಲವಾರು ಠಾಣೆಗಳಲ್ಲಿ ಮೊಕದ್ದಮೆಗಳಿದ್ದು ,ಇತ್ತೀಚೆಗೆ ಬೆಳ್ಳಾರೆಯ ಯುವತಿಯೊಬ್ಬಳ ಬಗ್ಗೆ  ಅಶ್ಲೀಲವಾಗಿ ತನ್ನ ಪೇಸ್ಬುಕ್ ವಾಲ್ ನಲ್ಲಿ ಹಾಕಿಕೊಂಡಿದ್ದ.

Post a Comment

Powered by Blogger.