ಕೇರಳದ ಕಣ್ಣೂರಿನ ಸದಾನಂದ ಮಾಸ್ಟರ್ ರವರು ಸಂಘದ ಗಣವೇಶದ ಬದಲಾವಣೆ ಯಿಂದ 22 ವರುಷಗಳ ನಂತರ ಗಣವೇಶ ತೊಟ್ಟಿದ್ದಾರೆ.
22 ವರ್ಷದ ಹಿಂದೆ ಕೇರಳ ಸಂಘಟನೆಯೊಂದರ ಕಾರ್ಯಕರ್ತರು ಇವರ ಎರಡು ಕಾಲುಗಳನ್ನು ಕತ್ತರಿಸಿದ್ದರು, ಕಾಲು ಕಳೆದುಕೊಂಡ ಅವರು 22 ವರುಷಗಳ ಕಾಲ ಸಂಘದ ಗಣವೇಶ ತೊಟ್ಟಿರಲಿಲ್ಲ.
ನಮ್ಮ ಪೇಸ್ಬುಕ್ ಪೇಜ್ ಲೈಕ್ ಮಾಡಿ*http://m.facebook.com/veerakesari.in
ಇತ್ತೀಚೆಗೆ ಸಂಘ ತನ್ನ ಗಣವೇಶದಲ್ಲಿ ಖಾಕಿ ಚಡ್ಡಿ ಬದಲಿಗೆ ಖಾಕಿ ಪ್ಯಾಂಟ್ ಅನ್ನು ಬದಲಾಯಿಸಿದೆ ಇದರಿಂದಾಗಿ ಸದಾನಂದ ಮಾಸ್ಟರ್ ಮತ್ತೆ ಗಣವೇಶ ಧರಿಸಿ ನಿನ್ನೆಯ ವಿಜಯದಶಮಿಯ ಪಥಸಂಚಲನದಲ್ಲಿ ಕಂಡುಬರಲು ಸಾಧ್ಯವಾಗಿದೆ.
ಆರ್ ಎಸ್ ಎಸ್ (ಸಂಘ) ನ ಸಹ ಪ್ರಚಾರ್ ಪ್ರಮುಖ್ ನಂದ್ ಕುಮಾರ್ ರವರು ಟ್ವಿಟರ್ ನಲ್ಲಿ ಸದಾನಂದ್ ಮಾಸ್ಟರ್ ರವರ ಫೋಟೋ ವನ್ನು ಜೊತೆಗೆ ಸದಾನಂದ್ ರ ಕೆಲ ಹೇಳಿಕೆ ಗಳನ್ನು ಟ್ವೀಟ್ ಮಾಡಿದ್ದಾರೆ.
1994 ಜನವರಿ ಇಪ್ಪತ್ತೈದರಂದು ಅವರ ಸಹೋದರಿಯ ಮದುವೆ ನಡೆಯಬೇಕಿತ್ತು ಅದರೆ ಅದರ ಕೆಲ ದಿನಗಳ ಹಿಂದೆ ತನ್ನ ಕುಟುಂಬಿಕರ ಮನೆಗೆ ತೆರಳಿ ಹಿಂತಿರುಗುವಾಗ ಮಾಸ್ಟರ್ ರವರನ್ನು ಅಡ್ಡಗಟ್ಟಿದ ಕಿಡಿಗೇಡಿಗಳು ಅವರ ಎರೆಡು ಕಾಲುಗಳನ್ನೆ ಕತ್ತರಿಸಿಬಿಟ್ಡಿದ್ದರು.
ಮಾಸ್ಟರ್ ರವರು ಕಾಲೇಜು ದಿನಗಳಲ್ಲಿ ಸಮಾಜವಾದಿ ಗುಂಪೊಂದರ ಕಾರ್ಯಕರ್ತರಾಗಿದ್ದರು .
ಸಂಘದ ಸಂಸ್ಕೃತಿ ರಾಷ್ಟ್ರವಾದ ದೇಶಪ್ರೇಮ ಕಂಡು ಸಂಘ ದ ಕಡೆ ಪ್ರಭಾವಿತರಾದವರು .
ಮಾತ್ರಭೂಮಿ ಎಂಬ ಪತ್ರಿಕೆಯೊಂದರಲ್ಲಿ ಪ್ರಕಟವಾದ ಲೇಖನದಿಂದ ಪ್ರೇರಿತವಾಗಿ ಸಂಘದ ಸ್ವಯಂ ಸೇವಕರಾಗಿ ತಮ್ಮನ್ನು ತೊಡಗಿಸಿಕೊಂಡವರು.
ತಮ್ಮ ಎರಡು ಕಾಲುಗಳನ್ನು ಕಳೆದುಕೊಂಡರು ಸಂಘದ ಮೇಲಿನ ಉತ್ಸಾಹ ಅವರಿಗಿನ್ನು ಕಮ್ಮಿಯಾಗಿಲ್ಲ.
ನೆನ್ನೆ ನಡೆದ ವಿಜಯ ದಶಮಿಯ ದಿನದಂದು ಪೂರ್ಣ ಗಣವೇಶ ತೊಟ್ಟು ಯುವಕರಂತೆ ಉತ್ಸಾಹದಿಂದ ಪಥಸಂಚಲನದಲ್ಲಿ ಭಾಗವಹಿಸಿದ್ದರು ..
ಸದಾನಂದ ಮಾಸ್ಟರ್ ರವರು ನಮ್ಮೆಲ್ಲರ ಮಾದರಿಯಾಗಲಿ ಎಂಬ ಆಶಯದೊಂದಿಗೆ.
#ಭಗವಪ್ರೀಯಾ
Post a Comment