ಲಕ್ನೋ : ದೇಶದೆಲ್ಲೆಡೆ ಸಮಾನ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಚರ್ಚೆಯಾಗುತ್ತಿದ್ದರೆ ಲಕ್ನೋದಲ್ಲಿ ವ್ಯಕ್ತಿಯೋರ್ವ ವಿದೇಶದಿಂದಲೇ ತನ್ನ ಪತ್ನಿಗೆ ದೂರವಾಣಿ ಮೂಲಕ ವಿಚ್ಚೇದನ (ತಲಾಕ್) ನೀಡಿದ್ದಾನೆ.
ಉತ್ತರಪ್ರದೇಶದ ಸಹರನ್ಪುರ ಜಿಲ್ಲೆಯಿಂದ 500 ಕಿಮೀ ದೂರದಲ್ಲಿರುವ ಗ್ರಾಮದಲ್ಲಿ ಶಹನವಾಜ್ ಎಂಬಾತ ತನ್ನ ಪತ್ನಿಗೆ ವಿದೇಶದಿಂದ ಕರೆಮಾಡಿ ಕೇವಲ ಮೂರು ಬಾರಿ “ತಲಾಕ್” ಹೇಳಿ ನಂತರ ನಿನ್ನ ಜೊತೆ ಹೊಂದಿರುವ ಎಲ್ಲಾ ಸಂಬಂಧ ಕಡಿದುಕೊಂಡಿದ್ದೇನೆ ಎಂದಿದ್ದಾನೆ.ಇದರಿಂದ ಮಹಿಳೆ ಆಘಾತಗೊಂಡಿದ್ದಾಳೆ.
ಮಹಿಳೆಯ ಪ್ರಕಾರ “ವಿದೇಶದಲ್ಲಿ ನೆಲೆಸಿರುವ ನನ್ನ ಗಂಡ ದೂರವಾಣಿ ಮೂಲಕ ಕರೆ ಮಾಡಿದ್ದರು, ನಾನು ಗೌರವದಿಂದ “ಸಲಾಮ್” ಎಂದೆ ಆದರೆ ಅವರು ನನ್ನನ್ನು ನಿಂದಿಸಲು ಶುರು ಮಾಡಿದರು.ನಂತರ ಒಮ್ಮೆಲೇ “ತಲಾಕ್” ಎಂದು ಮೂರು ಬಾರಿ ಉಚ್ಚರಿಸಿದರು.ನಂತರ “ನಿನಗೆ ಸ್ವಾತಂತ್ರ್ಯವನ್ನು ನೀಡಿದ್ದೇನೆ” ಎಂದು ಕರೆ ಕಟ್ ಮಾಡಿದ್ದಾರೆ..
ಮುಜಾಫರ್ ನಗರದವಳಾದ ಸುಲೈಮಾಳನ್ನು (ಹೆಸರು ಬದಲಿಸಲಾಗಿದೆ) ಎರಡು ವರ್ಷದ ಹಿಂದೆ ಶಹನವಾಜ್ ಎಂಬ ವ್ಯಕ್ತಿಗೆ ಮದುವೆ ಮಾಡಿಕೊಡಲಾಗಿತ್ತು. ಇವರಿಬ್ಬರಿಗೆ ಒಂದು ಹೆಣ್ಣುಮಗುವೂ ಇದೆ
ಮದುವೆಯಾದ ನಂತರ ಎಲ್ಲವೂ ಸರಿಯಾಗಿತ್ತು ಆದರೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದೇ ತಡ ಗಂಡ ಹಾಗೂ ಆತನ ಮನೆಯವರ ನಡವಳಿಕೆ ಬದಲಾಯಿತು. ಈಗ “ತಲಾಕ್” ನೀಡುವ ಮೂಲಕ ನನ್ನನ್ನು ಹಾಗೂ ಮಗುವನ್ನು ಬೀದಿಗೆ ತಳ್ಳಿದ್ದಾರೆ ನಮ್ಮ ಮುಂದಿನ ಭವಿಷ್ಯದ ಬಗ್ಗೆ ಚಿಂತೆಯಾಗಿದೆ ಎಂದು ಹೇಳುವಾಗ ಮಹಿಳೆಯ ಕಣ್ಣಂಚಲ್ಲಿ ಕಣ್ಣೀರು ಜಿನುಗಿತ್ತು.
“ಮುಸಲ್ಮಾನ ಮಹಿಳೆಯರೇ ಎದ್ದೇಳಿ, ನಿಮ್ಮ ಹಕ್ಕಿಗಾಗಿ ಹೋರಾಡಿ. ಹೆಣ್ಣು ಬೋಗದ ವಸ್ತುವಲ್ಲ. ಅವಳಿಗೂ ತನ್ನ ಇಚ್ಛೆಯಂತೆ ಬದುಕೋ ಹಕ್ಕಿದೆ ಎಂದು ಸಾಧಿಸಿ ತೋರಿಸಿ”
#WeWantUniformCivilcode #OneNationOneLaw #IndiaRising
Post a Comment