Veerakesari 06:58
ಬಳ್ಳಾರಿ :  ರೈತರೊಬ್ಬರು ತಾನು ಕಷ್ಟಪಟ್ಟು ಬೆಳೆದಿದ್ದ ಮೆಣಸಿನಕಾಯಿ ಬೆಳೆ ಒಣಗಿ ನಾಶಗೊಂಡದ್ದು ಕಂಡು ಮನನೊಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ನಂತರ ಕುಟುಂಬದ ಸದಸ್ಯರು ತಡೆದಕಾರಣ ಮನಸ್ಸು ಬದಲಾಯಿಸಿ ಸುಮ್ಮನಾಗಿದ್ದರು.
ಘಟನೆ ಬಗ್ಗೆ ವಿಷಯ ತಿಳಿದು ಸ್ಥಳಕ್ಕೆ ದಾವಿಸಿದ ರೈತ ಮುಖಂಡರು, ಸ್ಥಳೀಯರು ಹಾಗೂ ಸುದ್ದಿವಾಹಿನಿಗಳ ಸೂಚನೆ ಮೇರೆಗೆ ಆ ರೈತ ಮತ್ತೆ ಆತ್ಮಹತ್ಯೆ ಮಾಡಿದಂತೆ ನಟಿಸಿದ ಘಟನೆ ಬಳ್ಳಾರಿ ಜಿಲ್ಲೆಯ ಕೊರ್ಲಗುಂದಿ ಗ್ರಾಮದಲ್ಲಿ ನಿನ್ನೆ (ಬುಧವಾರ) ನಡೆಯಿತು.
ತಾನು ಬೆಳೆದಿದ್ದ ಮೆಣಸಿನ ಕಾಯಿ ಬೆಳೆ ಒಣಗಿ ನಾಶಗೊಂಡಿದ್ದ ಕಾರಣ ಮನನೊಂದಿದ್ದ ರೈತ ಕುರುಬರ ಕುಮಾರೆಪ್ಪ ಆತ್ಮಹತ್ಯೆ ಮಾಡಿಕೊಳ್ಳಲು ಕ್ರಿಮಿನಾಶಕ ಸೇವಿಸಲು ಯತ್ನಿಸಿದ್ದರಿಂದ.ಆದರೆ ಸ್ಥಳದಲ್ಲಿದ್ದ ಕುಟುಂಬದ ಸದಸ್ಯರು ಅನಾಹುತ ತಡೆದಿದ್ದರು, ನಂತರ ಟ್ರ್ಯಾಕ್ಟರ್ ಬಳಸಿ ಒಣಗಿದ್ದ ಮೆಣಸಿನ ಬೆಳೆಯನ್ನು ಕೀಳಲಾಗಿತ್ತು.
ಘಟನೆ ತಿಳಿದು ಸ್ಥಳಕ್ಕೆ ಧಾವಿಸಿದ ಟಿವಿ ಮಾಧ್ಯಮದವರು ಆತ್ಮಹತ್ಯೆ ಮಾಡಿಕೊಳ್ಳೋ ರೀತಿ ಮತ್ತೊಮ್ಮೆ ನಟಿಸಿ ತೋರಿಸುವಂತೆ ರೈತನಲ್ಲಿ ಒತ್ತಾಯಮಾಡಿ ಕೇಳಿಕೊಂಡಿದ್ದಾರೆ. ರೈತನಿಗೆ ಕ್ರಿಮಿನಾಶಕದ ಕಾಲಿ ಬಾಟಲ್ ನೀಡಿ ವಿಷ ಕುಡಿಯುವಂತೆ ನಟಿಸಲು ಹೇಳುತ್ತಾರೆ. ಒಮ್ಮೆ ರೈತ ನಟಿಸಿದ ನಂತರ ಅದು ಸರಿಯಾಗಿಲ್ಲವೆಂದು ಮತ್ತೊಮ್ಮೆ ನಟಿಸಲು ಹೇಳಿದ್ದಾರೆ.
ರೈತನ ಕಷ್ಟವನ್ನು ಮರೆತು “ಟಿ ಆರ್ ಪಿ” ಗಾಗಿ ಮಾಧ್ಯಮಗಳು ಬೆತ್ತಲಾಗಿದ್ದು  ವಿಪರ್ಯಾಸವೇ ಸರಿ. ನಮ್ಮ ಬೇಡಿಕೆ ರೈತನಿಗೆ ನ್ಯಾಯ ಸಿಗಲಿ ಸರ್ಕಾರ ಇದಕ್ಕೆ ಕೂಡಲೆ ಸ್ಪಂದಿಸಲಿ. ರೈತನಿಗೆ ಪರಿಹಾರ ಸಿಗಲಿ.  
ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಿ ನಮ್ಮನ್ನು ಬೆಂಬಲಿಸಿ – http://m.facebook.com/veerakesari.in

Post a Comment

Powered by Blogger.