“ಯುವ ತೇಜಸ್ಸು ” ಇದೊಂದು ಸಮಾನ ಮನಸ್ಕರು ಆದರ್ಶ ಸಮಾಜದ ಕಲ್ಪನೆಯೊಂದಿಗೆ ಬಡಜನರ ಸೇವೆಗಾಗಿ ಒಂದಾಗುವ ಕನಸು ಕಂಡು ಅದನ್ನು ನನಸಾಗಿಸಲು ಶ್ರಮಪಟ್ಟು ಪ್ರಾರಂಭಿಸಿದ್ದು ಈಗ್ಗೆ ಕೆಲವೇ ತಿಂಗಳುಗಳ ಹಿಂದೆಯಷ್ಟೇ ಆದರೂ ಅದು ಬೆಳೆದ ರೀತಿ ಮಾತ್ರ ರೋಚಕ..!
ಆ ಆರಂಭದ ದಿನಗಳಲ್ಲಿ ಟ್ರಸ್ಟ್’ನ ಮುಂದಿನ ನಡೆಗಳ ಬಗೆಗೆ ಅವರಾರಿಗೂ ಸಂಪೂರ್ಣ ಅರಿವಿರದಿದ್ದರೂ, ಸಮಾಜ ಸೇವೆಗಾಗಿನ ತುಡಿತ ಅವರಲ್ಲಿ ಆತ್ಮವಿಶ್ವಾಸ ತುಂಬಿತ್ತು, ಒಂದುಗೂಡಿಸಿತ್ತು. ಆ ಬೆರಳೆಣಿಕೆಯ ಯುವಕರ ಜೊತೆಗೆ ಒಂದಿಬ್ಬರು ಹೆಣ್ಣುಮಕ್ಕಳು ಸಹ ಜೊತೆ ನೀಡಿ ಇನ್ನಷ್ಟು ಪ್ರೋತ್ಸಾಹ ಹಾಗೂ ಹುರುಪು ತುಂಬುವ ಕೆಲಸ ಮಾಡಿದ್ದರು. ಆಗಲೇ ನೋಡಿ, ಯುವ ತೇಜಸ್ಸು ಟ್ರಸ್ಟ್ ನ ಉದಯಕಾಲ.
ಆ ಆರಂಭದ ದಿನಗಳಲ್ಲಿ ಟ್ರಸ್ಟ್’ನ ಮುಂದಿನ ನಡೆಗಳ ಬಗೆಗೆ ಅವರಾರಿಗೂ ಸಂಪೂರ್ಣ ಅರಿವಿರದಿದ್ದರೂ, ಸಮಾಜ ಸೇವೆಗಾಗಿನ ತುಡಿತ ಅವರಲ್ಲಿ ಆತ್ಮವಿಶ್ವಾಸ ತುಂಬಿತ್ತು, ಒಂದುಗೂಡಿಸಿತ್ತು. ಆ ಬೆರಳೆಣಿಕೆಯ ಯುವಕರ ಜೊತೆಗೆ ಒಂದಿಬ್ಬರು ಹೆಣ್ಣುಮಕ್ಕಳು ಸಹ ಜೊತೆ ನೀಡಿ ಇನ್ನಷ್ಟು ಪ್ರೋತ್ಸಾಹ ಹಾಗೂ ಹುರುಪು ತುಂಬುವ ಕೆಲಸ ಮಾಡಿದ್ದರು. ಆಗಲೇ ನೋಡಿ, ಯುವ ತೇಜಸ್ಸು ಟ್ರಸ್ಟ್ ನ ಉದಯಕಾಲ.
*ಸಮಾಜಸೇವೆಯೇ ನಮ್ಮ ಧ್ಯೇಯ* ಎಂದು ದೃಢವಾಗಿ ಎದ್ದು ನಿಂತ ಆ ಹುಡುಗರಿಗೆ ದಾರಿದೀಪವಾಗಿ ಏನಾದರೊಂದು ಸಲಹೆ ನೀಡುವ ಹಿರಿಯರಾರೂ ಇರಲಿಲ್ಲ. ಜೊತೆಗೆ ತಮಗೆ ತಾವೇ ಒಂದು ಸರಿದಾರಿಯನ್ನು ಹುಡುಕಿಕೊಳ್ಳಬೇಕಾಗಿತ್ತು. ಯಾವುದೇ ರಾಜಕೀಯ ಅಥವಾ ರಾಜಕೀಯೇತರ ಗಣ್ಯರ ಕಡೆಗಂತೂ ದೀನ ದೃಷ್ಟಿ ಬೀರುವ ಮಾತಂತೂ ಆ ಯುವಕರ ಮನದಲ್ಲಿ ಸುಳಿಯಲೇ ಇಲ್ಲ..!
ಅದಕ್ಕೂ ಕಾರಣವೊಂದಿತ್ತು,, ಅದೇನೆಂದರೆ, ಯಾವುದೇ ರಾಜಕೀಯ ವ್ಯಕ್ತಿ ಆಗಲಿ, ಯಾವುದೇ ಗಣ್ಯ ವ್ಯಕ್ತಿಗಾಗಲಿ ಆ ತಂಡದ ಜವಾಬ್ದಾರಿ ಕೊಡದಿರುವ ಬಗ್ಗೆ ಆ ಯುವಕರ ನಡುವೆ ಅದಾಗಲೇ ಮಾತುಕತೆಯಾಗಿತ್ತು ಹಾಗೂ ಮಾಡುವ ಸೇವಾಕಾರ್ಯವನ್ನು ಪ್ರಚಾರಕ್ಕೊಳಪಡಿಸುವುದು ಅಥವಾ ಅದರಿಂದ ಯಾವುದೇ ಫಲಾಪೇಕ್ಷೆ ಅಲ್ಲಿನ ಯಾರಿಗೂ ಬೇಕಿರಲಿಲ್ಲ. ಆದರೆ ಅಲ್ಲಿ ಅವರೆಲ್ಲರ ಒಕ್ಕೊರಲಿನ ಒಗ್ಗಟ್ಟಿನ ಮಂತ್ರವಿತ್ತು, ಏನಾದರೊಂದು ಸಮಾಜಕ್ಕೆ ಉಪಕಾರ ಮಾಡಬೇಕೆಂಬ ಹಂಬಲವೂ ಬಲವಾಗಿತ್ತು. ಅವರಿಗೆ ಮಾನ ಸಮ್ಮಾನಗಳೂ ಬೇಕಿರಲಿಲ್ಲ..
ಕಾರಣವಿಷ್ಟೇ..ಅಲ್ಲಿ ಯಾರೂ ನಾಯಕನಿರಲಿಲ್ಲ, ಬದಲಾಗಿ ಪ್ರತಿಯೊಬ್ಬನೂ ನಾಯಕನಾಗಿದ್ದ..!! ಆ ಪುಟ್ಟ ತಂಡದ ಪ್ರತಿಯೊಬ್ಬನಿಗೂ ತನ್ನ ಅಭಿಪ್ರಾಯ ಮಂಡಿಸುವ ಹಕ್ಕಿತ್ತು ಹಾಗೂ ಒಬ್ಬನ ಮಾತಿಗೆ ಕಿವಿಗೊಡುವ ತಾಳ್ಮೆ ಪ್ರತಿಯೊಬ್ಬನಿಗೂ ಅದಾಗಲೇ ಮೂಡಿತ್ತು.. ಅದೇ ಆ ಯುವಕರ ಸಂಸ್ಥೆಯ ಯಶಸ್ಸಿನ ಗುಟ್ಟಾಗಿತ್ತು.. ಅದರ ಜೊತೆ ಜೊತೆಗೆ ಸಂಸ್ಥೆಯ ಬೆಳವಣಿಗೆಯ ಬಗೆಗೆ ಕಾಳಜಿಯೂ ಇತ್ತು.
ಈ ರೀತಿಯಾಗಿ ಜನ್ಮ ತಾಳಿದ *ಯುವ ತೇಜಸ್ಸು ಸಂಸ್ಥೆ* ಈಗಾಗಲೇ ತನ್ನ ಸಮಸ್ತ ದಾನಿಗಳ ನೆರವಿನಿಂದ ಹತ್ತು ಹಲವು ಅಸಹಾಯಕರ ಕಣ್ಣೊರೆಸುವ ಪ್ರಯತ್ನ ಮಾಡಿದೆ. 16 ಯೋಜನೆಗಳ ಸೇವಾ ಕೈಂಕರ್ಯವನ್ನು ಯಶಸ್ವಿ ಯಾಗಿ ಪೂರ್ಣಗೊಳಿಸಿದೆ. ಹೀಗೆ ಗೆಳೆಯರ ಗುಂಪೊಂದು ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಸಮಯ ಪೋಲು ಮಾಡುವುದಷ್ಟೇ ಅಲ್ಲದೇ, ಸಮಾಜಮುಖಿ ಕಾರ್ಯಗಳನ್ನು ಕೂಡ ಮಾಡಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದೆ.
ಹಲವು ಸೇವಾ ಸಂಸ್ಥೆಗಳ ಮಧ್ಯೆ *ಯುವ ತೇಜಸ್ಸು* ವಿಭಿನ್ನ ಅನಿಸಿಕೊಂಡಿದ್ದು ಅದರ ಔಚಿತ್ಯ ಹಾಗೂ ಪಾರದರ್ಶಕ ಗುಣಗಳಿಂದ ಅಂದರೆ ತಪ್ಪಲ್ಲ. ದಾನಿಗಳ ನೆರವನ್ನು ಸ್ಮರಿಸುತ್ತ, ತನ್ನ ಖಾತೆಗೆ ಹಣ ಜಮಾ ಆಗುವ ಹಾಗೂ ಫಲಾನುಭವಿಗಳಿಗೆ ನೀಡಿದ ಧನ ಸಹಾಯದ ಪ್ರತಿ ಹಣದ ವ್ಯವಹಾರ ಚಾಚೂತಪ್ಪದೇ ತನ್ನ ಫೇಸ್ ಬುಕ್ ಪೇಜ್ ಹಾಗೂ ವಾಟ್ಸಪ್ ಗ್ರೂಪ್ ಗಳಲ್ಲಿ ಪ್ರಕಟಿಸುವ ಸಂಸ್ಥೆಯು ದಾನಿಗಳಲ್ಲಿ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ರೀತಿಯಾಗಿ ಸಂಸ್ಥೆಯು ಬಡವರ ಪಾಲಿಗೆ ಒಂದು ಆಶಾದಾಯಕ ಶಕ್ತಿಯಾಗಿ ಗೋಚರಿಸಿರುವುದು ಸುಳ್ಳಲ್ಲ. ಈ ಸಂಸ್ಥೆಯಿಂದ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳು ನಡೆಯಲೆಂದು ವೀರಕೇಸರಿ ಫೇಸ್’ಬುಕ್ ಪೇಜ್ ನ ಅಡ್ಮಿನ್ ಬಳಗ ತನ್ನ ಹಿಂಬಾಲಕರ ಜೊತೆಗೂಡಿ ಶುಭಹಾರೈಸುತ್ತದೆ.
ಈ ಸಂಸ್ಥೆಯ ಮುಂದಿನ ಯಶಸ್ಸಿಗೆ ಧೈರ್ಯ ತುಂಬುವ ಜೊತೆಗೆ ತನುಮನಧನ ಸಹಾಯ ಮಾಡಲಿಚ್ಚಿಸುವವರು ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಅಥವಾ ವಾಟ್ಸಪ್ ನಲ್ಲಿ ಸಂದೇಶ ಕಳುಹಿಸಬಹುದು.
1. +919481975376
2. +919980695627
3. +919900957906
“ಯುವ ತೇಜಸ್ಸು” ಸಂಸ್ಥೆಯ ಸಮಾಜಮುಖಿ ಕಾರ್ಯಗಳ ಕೆಲ ಫೋಟೋಗಳು :
Post a Comment