Veerakesari 04:09
ಮಂಗಳೂರು : ಸಾಮಾಜಿಕ ಜಾಲತಾಣ, ಅಂತರ್ಜಾಲಗಳ ಮೂಲಕ ಬರೋ ಅಪರಿಚಿತ ವ್ಯಾಟ್ಸಪ್ ಲಿಂಕ್ ಗಳ ಮೂಲಕ ಗ್ರೂಪ್ ಗಳಿಗೆ ಸೇರುವವರು ಜಾಗೃತೆ ವಹಿಸುವಂತೆ ಭಜರಂಗದಳದ ಮಂಗಳೂರು ಗ್ರಾಮಾಂತರ ಜಿಲ್ಲಾ ಘಟಕವು ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದೆ.
ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಮತ್ತು ವ್ಯಾಟ್ಸಪ್ ಗಳಲ್ಲಿ ನಕಲಿ ಗ್ರೂಪ್ ಗಳ ಹಾವಳಿ ಹೆಚ್ಚಾಗಿದೆ. ಇದರ ಲಿಂಕ್ ಗಳನ್ನು  ಬಳಸಿ ಗ್ರೂಪ್ ಗಳಿಗೆ ಸೇರಿದ ಅನೇಕರು ಈಗ ತೊಂದರೆಗೀಡಾಗುತ್ತಿದ್ದಾರೆ. ಈ ಎಲ್ಲಾ ನಕಲಿ ಗ್ರೂಪ್ಗಳ ಹಿಂದೆ ಮತಾಂದರು ಹಾಗೂ ದೇಶದ್ರೋಹಿಗಳ ಕೈವಾಡವಿದೆ.
ಹೀಗೆ ಅಪರಿಚಿತ ವ್ಯಾಟ್ಸಪ್ ಲಿಂಕ್ ಗಳ ಮೂಲಕ ಗ್ರೂಪ್ ಗಳಿಗೆ ಸೇರಿದ ಉಳ್ಳಾಲ ನಿವಾಸಿ ಸಂತೋಷ್ ಈಗ ಇಂತಹುದೇ ಸಂಚಿಗೆ ಸಿಲುಕಿ ಮಂಜೇಶ್ವರ ಪೋಲೀಸರ ಅತಿಥಿಯಾಗಿದ್ದಾನೆ.
ಈತ “ಮೋದಿ ಪ್ಯಾನ್ಸ್” ಎಂಬ ನಕಲಿ ವ್ಯಾಟ್ಸಪ್ ಗ್ರೂಪ್ ಗೆ ಸೇರಿದ್ದೇ ಇದಕ್ಕೆ ಕಾರಣ. ಇದು ನಕಲಿ ಮೋದಿ ಅಭಿಮಾನಿಗಳು ತಯಾರಿಸೋ ಗ್ರೂಪ್, ಇದರಲ್ಲಿ ಮೋದಿಯನ್ನು ಹೊಗಳೋದಕ್ಕಿಂತ ಜಾಸ್ತಿ ತೆಗಳುವವರೇ ಇರುತ್ತಾರೆ . ಅದಲ್ಲದೆ ಕೆಲವು ಗ್ರೂಪ್ಗಳಲ್ಲಿ ಹಿಂದೂ ಧರ್ಮ, ದೇವರುಗಳ, ಸಂಸ್ಕಾರ, ಆಚರಣೆ, ಸ್ವಾಮೀಜಿಗಳ ವಿರುದ್ಧ ಉದ್ದೇಶಪೂರ್ವಕವಾಗಿ ಅವಹೇಳನಕಾರಿ ಪೋಸ್ಟ್ ಗಳನ್ನು ಹಾಕಲಾಗುತ್ತದೆ.
ನಮ್ಮ ಪೇಜ್ ಲೈಕ್ ಮಾಡಿ – http://fb.com/veerakesari.in
ಇದನ್ನು ಕಂಡು ಸಹಿಸಲಾರದೆ ನೀವೇನಾದರು ಖಾರವಾಗಿ ಪ್ರತಿಕ್ರಿಯೆ ನೀಡಿದರೆ ಗ್ರೂಪ್ ನಲ್ಲಿರುವ ಅಷ್ಟೂ ಮಂದಿ ನಿಮ್ಮ ವಿರುದ್ಧ ಪೋಲೀಸ್ ಠಾಣೆಗಳಲ್ಲಿ ದೂರುಗಳನ್ನು ನೀಡುತ್ತಾರೆ. ಹೀಗೆ ಏನೂ ತಪ್ಪು ಮಾಡದೆ ಸಂಚಿಗೆ ಬಲಿಯಾಗುತ್ತೀರ.
ಹೀಗಾಗಿ ಇಂತಹ ನಕಲಿಗ್ರೂಪ್ ಗಳ ಹಾವಳಿಗೆ ಯಾರೂ ಬಲಿಯಾಗ ಬೇಡಿ. ಈಗ ನೀವು ಯಾವುದೇ ಹಿಂದುತ್ವ , ಸಂಘಟನೆ ಕುರಿತಾದ ಗ್ರೂಪ್ ಗಳಲ್ಲಿ ಇದ್ದರೆ ತಕ್ಷಣ ಅದರಿಂದ ನಿರ್ಗಮಿಸೋದು ಉತ್ತಮ ಅಥವಾ ಅದರಲ್ಲಿರುವ ಅಡ್ಮಿನ್ ಎಲ್ಲಾ ಸದಸ್ಯರ ಬಗ್ಗೆ ಒಮ್ಮೆ ನಿಗಾವಹಿಸೋಕೆ ಹೇಳಿ.
ಹಿಂದುತ್ವ ಅಥವಾ ಹಿಂದೂ ಸಂಘಟನೆ ಪರವಾಗಿರುವ ಗ್ರೂಪ್ ಗಳ ಅಡ್ಮಿನ್ ಗಳು ಯಾರನ್ನೂ ಲಿಂಕ್ ಮುಖಾತರ ಗ್ರೂಪ್ ಗೆ ಸೇರಿಸಿಕೊಳ್ಳಬೇಡಿ. ಇಷ್ಟೇ ಅಲ್ಲದೆ ಎಲ್ಲರಿಗು ಈ ಬಗ್ಗೆ ಜಾಗೃತಿ ಮೂಡಿಸಿ ಎಚ್ಚರಿಕೆಯಿಂದ ಇರಲು ತಿಳುವಳಿಕೆ ನೀಡಿ ಎಂದು ಭಜರಂಗದಳದ ಜಿಲ್ಲಾ ಸಂಚಾಲಕ ಸುರೇಶ್ ಶೆಟ್ಟಿ ಪರಂಕಿಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
#veerakesari

Post a Comment

Powered by Blogger.