loading...
ಚತ್ತೀಸಗಡದ ದೋಲ್ಕಲ್ ಬೆಟ್ಟದ ಮೇಲಿದ್ದ ಸಾವಿರ ವರ್ಷಕ್ಕಿಂತ ಹಳೆಯ ಗಣಪತಿ ವಿಗ್ರಹವನ್ನು ಮಾವೋವಾದಿ ಕೆಂಪು ಉಗ್ರರು ಧ್ವಂಸ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಮಾವೋವಾದಿಗಳು ತುಂಡರಿಸಿದ್ದಾರೆ ಎನ್ನಲಾದ ಗಣಪತಿ ವಿಗ್ರಹದ ಅವಶೇಷಗಳು ಬೆಟ್ಟದ ಬುಡದಲ್ಲಿ ಪತ್ತೆಯಾಗಿದೆ.
ಈ ಗಣಪತಿ ವಿಗ್ರಹ ದಾಂತೇವಾಡದ ದಟ್ಟ ಅರಣ್ಯದ ಮದ್ಯದಲ್ಲಿದ್ದರೂ ಪ್ರೇಕ್ಷಣೀಯ ಸ್ಥಳವಾಗಿತ್ತು. ಅನೇಕ ಭಕ್ತಾದಿಗಳನ್ನು, ಪ್ರವಾಸಿಗರನ್ನು ಸೆಳೆದಿತ್ತು. ಕಾಡು ಮಧ್ಯೆ ಜನರ ಓಡಾಟ ಹೆಚ್ಚಾಗಿದ್ದ ಕಾರಣ ಕೆಂಪು ಉಗ್ರರಿಗೆ ಈ ವಿಗ್ರಹ ಕಣ್ಣು ಕುಕ್ಕುತ್ತಿತ್ತು. ಕಾಡಿನ ಮಧ್ಯೆ ಜನರ ಓಡಾಟ ನಿಲ್ಲಿಸಲು ಮಾವೋವಾದಿಗಳು ಗಣಪತಿ ವಿಗ್ರಹ ಧ್ವಂಸ ಮಾಡಿರಬಹುದು ಎಂದು ಶಂಕಿಸಲಾಗಿದೆ.
ದಾಂತೇವಾಡ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು. ಸ್ಥಳೀಯರು ಹಲವು ದಿನಗಳಿಂದ ಈ ಭಾಗದಲ್ಲಿ ಮಾವೋವಾದಿಗಳ ಓಡಾಟದ ಬಗ್ಗೆ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಗಣಪತಿ ಮೂರ್ತಿ ಪುನರ್ ನಿರ್ಮಾಣ ಮಾಡಿ ಅದೇ ಸ್ಥಳದಲ್ಲಿ ಪ್ರತಿಷ್ಠಾಪಿಸಲು ಕ್ರಮ ಕೈಗೊಳ್ಳಲಾಗಿದೆ.

Post a Comment