loading...
ಮಂಗಳೂರಿನ ಕೂಳೂರಿನಲ್ಲಿ ನಡೆಯುತ್ತಿರುವ ಗೋ ಮಹಾಮಂಗಳ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ರಾಜ್ಯ ಸಭಾ ಸದಸ್ಯ ಡಾ.ಸುಬ್ರಹ್ಮಣ್ಯ ಸ್ವಾಮಿ ಗೋವಿನ ರಕ್ಷಣೆಗಾಗಿ ಸಂಸತ್ತಿನಲ್ಲಿ ಕಾನೂನು ರೂಪಿಸುವ ಅವಶ್ಯಕತೆ ಇದ್ದು ಗೋ ರಕ್ಷಣೆ ಹಾಗೂ ಗೋ ಸಂಸ್ಕೃತಿ ಪುನರುತ್ಥಾನದಿಂದ ಹಾಗೂ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡುವುದರಿಂದ ಮಾತ್ರ ಅಭಿವೃದ್ಧಿ ಸಾಧ್ಯ . ಗೋ ಕಳ್ಳರಿಗೆ ಮರಣದಂಡನೆ ಶಿಕ್ಷೆಯಾಗಬೇಕು ಎಂದು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಸ್ಲಿಂ ದೊರೆಯಾಗಿದ್ದ ಬಹದ್ದೂರ್ ಶಾ ಜಫರ್ ಗೋಕಳ್ಳತನ ಮಾಡುವವರಿಗೆ ಮರಣದಂಡನೆ ಶಿಕ್ಷೆ ನೀಡುವುದಾಗಿ ಎಚ್ಚರಿಸಿದರು. ಗೋವಿನ ಹಾಲು, ಗೋಮೂತ್ರ ಆರೋಗ್ಯಕ್ಕೆ ಉತ್ತಮ. ಹಿಂದೂ ಧರ್ಮದಲ್ಲಿ ಗೋವಿಗೆ ವಿಶೇಷ ಸ್ಥಾನಮಾನಗಳಿಗೆ ಹಾಗಾಗಿ ಗೋ ರಕ್ಷಣೆ ಅತ್ಯಗತ್ಯ ಎಂದು ಹೇಳಿದರು. ಮಂಗಳೂರಿನ ಕೂಳೂರಿನಲ್ಲಿ ನಡೆಯುತ್ತಿರುವ ಗೋ ಮಹಾಮಂಗಳ ಸಮಾವೇಶದಲ್ಲಿ ದೇಶದ ವಿವಿಧೆಡೆಯಿಂದ 1200ಕ್ಕೂ ಹೆಚ್ಚು ಸಂತರು ಭಾಗಿಯಾಗಿದ್ದಾರೆ.
loading...
Post a Comment