loading...
ಆಸ್ಟ್ರೇಲಿಯಾ ಮೂಲದ ಮಹಿಳೆಯೊಬ್ಬರು ಲಿಂಗ ದೀಕ್ಷೆ ಪಡೆಯುವ ಮೂಲಕ ಸನಾತನ ಧರ್ಮವನ್ನು ಸ್ವೀಕಾರ ಮಾಡಿದ್ದಾರೆ. ಆಸ್ಟ್ರೇಲಿಯಾದ ಕರಿಯಾನ್ ಎಂಬ ಮಹಿಳೆ ರಾಧಾಕೃಷ್ಣ ನಗರದ ಬಸವರಾಜ್ ಹಡಗಲಿ ಎಂಬುವವರ ಮನೆಯಲ್ಲಿ ಲಿಂಗ ದೀಕ್ಷೆ ಪಡೆಯುವ ಮೂಲಕ ಸನಾತನ ಧರ್ಮ ಸ್ವೀಕರಿಸಿದರು.
ಕಾಶಿ ಜಗದ್ಗುರುಗಳ ನೇತೃತ್ವದಲ್ಲಿ ಅವರು ಕ್ರಿಶ್ಚಿಯನ್ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡರು. ಕಾಶಿ ಜಗದ್ಗುರುಗಳ ಸಲಹೆಯಂತೆ ತಮ್ಮ ಹೆಸರನ್ನು ಗಂಗಾ ಎಂದೂ ಮರುನಾಮಕರಣ ಮಾಡಿದರು.
ಪತಿಯಿಂದ ದೂರವಾಗಿರುವ ಗಂಗಾ (ಕರಿಯಾನ್) ಸದ್ಯ ತಮ್ಮ ಮಕ್ಕಳೊಂದಿಗೆ ಹಾಲೆಂಡ್ ನಲ್ಲಿ ವಾಸವಾಗಿದ್ದಾರೆ. ಈಗ ಮಾಂಸಹಾರ ತ್ಯಜಿಸಿ ಸಸ್ಯಾಹಾರಿಯಾಗಿ ಬದಲಾಗಿರೋದಾಗಿ ಹೇಳಿದರು.
ಸರ್ವೇ ಜನಃ ಸುಖಿನೋಭವಂತು
loading...
Post a Comment