Veerakesari 06:52

loading...
ಹಲವಾರು ಶತಮಾನಗಳಿಂದ ತಿಳಿದು ಬಂದ ಒಂದು ಕಥೆಯ ಪ್ರಕಾರ, ಒಮ್ಮೆ ಗುಹಾ ಎಂಬ ಅಸುರನು ತಪಸ್ಸು ಕೈಗೊಂಡು ಬ್ರಹ್ಮ ದೇವನಿಂದ ಆತನು ವರ ಒಂದನ್ನು ಪಡೆಯುತ್ತಾನೆ. ಆತನನ್ನು ಬ್ರಹ್ಮ, ವಿಷ್ಣು, ಶಿವ ಅಥವಾ ಯಾವುದೇ ದೇವಾನುದೇವತೆಗಳು ಸಾಯಿಸಲು ಆಗಬಾರದು ಎಂಬ ವರ. ಬ್ರಹ್ಮನಿಂದ ವರವನ್ನು ಪಡೆದ ನಂತರ  ಜನರಿಗೆ ಮತ್ತು ದೇವರುಗಳಿಗೂ ತೊಂದರೆಯನ್ನು ಉಂಟು ಮಾಡಲು ಆರಂಭಿಸಿದ. ಇದನ್ನು ಕೊನೆಗಾಣಿಸಲು, ವಿಷ್ಣು (ಹರಿ) ಮತ್ತು ಶಿವ (ಹರ) ಒಟ್ಟಿಗೆ 'ಹರಿಹರ' ರೂಪದಲ್ಲಿ ರಾಕ್ಷಸನನ್ನು ಕೊಂದರು.

ಸಾಯುವ ಸಂದರ್ಭದಲ್ಲಿ, ರಾಕ್ಷಸ ಗುಹಾ, ಆತನಿದ್ದ ಕ್ಷೇತ್ರವನ್ನು ಗುಹಾರಣ್ಯ (ಹರಿಹರ ಊರಿನ ಹಳೆಯ ಹೆಸರು) ಎಂದು ಕರೆಯಲು ವಿನಂತಿಸಿಕೊಂಡನು. ಕಾಲ ಕಳೆದಂತೆ ಶಿವ ಮತ್ತು ವಿಷ್ಣು ಇಬ್ಬರೂ ದೇವರುಗಳು ಒಂದಾಗಿ ಬಂದ ಸ್ಥಳ, ಈಗಿರುವ ಹರಿಹರ ಎಂದು ಹೆಸರನ್ನು ಪಡೆದುಕೊಂಡಿದೆ. ಈ ಪ್ರದೇಶದಲ್ಲಿ ಶ್ರೀ ಹರಿಹರೇಶ್ವರ ದೇವಾಲಯ ಈ ಸ್ವರೂಪದ ದೇವರಿಗೆ ಸಮರ್ಪಿಸಲಾಗಿದೆ.


Source - mytempleapp.com
loading...

Post a Comment

Powered by Blogger.