loading...
ವಿಶ್ವದಲ್ಲಿರುವ ಪ್ರಮುಖ ಎಂಟು ಶಕ್ತಿ ಶಾಲಿ ರಾಷ್ಟ್ರಗಳಲ್ಲಿ ಆರನೇ ಸ್ಥಾನವನ್ನು ಪಡೆದಿದೆ. ಅಮೆರಿಕದ "ದಿ ಅಮೆರಿಕನ್ ಇಂಟರೆಸ್ಟ್" ಮ್ಯಾಗಜಿನ್ ಈ ಪಟ್ಟಿ ಬಿಡುಗಡೆ ಮಾಡಿದ್ದು
ವಿಶ್ವದ ಎಂಟು ಅಂತ್ಯಂತ ಪ್ರಬಲ ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿ ಈ ಕೆಳಗಿನಂತೆ ಇದೆ.
1) ಅಮೇರಿಕಾ, 2) ಚೀನಾ ,3)ಜಪಾನ್, 4)ರಷ್ಯಾ, 5)ಜರ್ಮನಿ, 6)ಭಾರತ, 7)ಇರಾನ್ ಹಾಗೂ 8) ಇಸ್ರೇಲ್
ಇನ್ನು ಜಪಾನ್ ನಂತೆಯೇ ಭಾರತವನ್ನು ವಿಶ್ವದ ಪ್ರಬಲ ಶಕ್ತಿಗಳ ಪಟ್ಟಿಯಲ್ಲಿ ಆಗಾಗ್ಗೇ ಕಡೆಗಣಿಸಲಾಗುತ್ತದೆ. ಆದರೆ ಭಾರತ ಅಪರೂಪದ ಹಾಗೂ ಅಪೇಕ್ಷಣೀಯ ಸ್ಥಾನವನ್ನು ಜಾಗತಿಕ ಮಟ್ಟದಲ್ಲಿ ಪಡೆದುಕೊಂಡಿದೆ ಎಂದು ಮ್ಯಾಗಜಿನ್ ಹೇಳಿದೆ.
ಭಾರತ ವಿಶ್ವದ ಅತೀ ದೊಡ್ಡ ಪ್ರಜಾಪ್ರಭತ್ವ ರಾಷ್ಟ್ರವಾಗಿದ್ದು, ವಿಶ್ವದಲ್ಲೇ ಇಂಗ್ಲೀಷ್ ಮಾತನಾಡುವ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ರಾಷ್ಟ್ರವಾಗಿದೆ. ಭಾರತ ತುಂಬಾ ವಿಸ್ತಾರವಾದ ಮತ್ತು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು ಹೊಂದಿದೆ. ಏಷ್ಯಾದಲ್ಲೇ ಭಾರತ ಅತೀದೊಡ್ಡ ಮಾರುಕಟ್ಟೆ ಕೇಂದ್ರಿತ ದೇಶವಾಗಿದ್ದು, ಇದೇ ಕಾರಣಕ್ಕೆ ಚೀನಾ, ಜಪಾನ್ ಮತ್ತು ಅಮೆರಿಕ ಸೇರಿದಂತೆ ವಿವಿಧ ದೇಶಗಳು ಭಾರತದೊಂದಿಗಿನ ವಹಿವಾಟು ಒಪ್ಪಂದ ಮಾಡಿಕೊಳ್ಳಲು ಸದಾ ಮುಂದಿರುತ್ತವೆ. ಇದೇ ಕಾರಣಕ್ಕೆ ಈ ಹಿಂದೆ ರಷ್ಟಾ ಮತ್ತು ಯೂರೋಪಿಯನ್ ದೇಶಗಳು ಕೂಡ ಭಾರತದೊಂದಿಗೆ ಹಲವು ರಕ್ಷಣಾ ಒಪ್ಪಂದಗಳು ಮಾಡಿಕೊಂಡಿವೆ ಎಂದು ಮ್ಯಾಗಜಿನ್ ಅಭಿಪ್ರಾಯಪಟ್ಟಿದೆ.
loading...
Post a Comment