loading...
ಜಿಹಾದಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನ್ ವಾನಿಯನ್ನು ಹೊಡೆದುರುಳಿಸಿದ್ದ ಭಾರತೀಯ ಸೇನೆಯ ಮೂವರು ಯೋಧರಿಗೆ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಘೋಷಿಸಿದ್ದ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.
![]() |
ಸೈನಿಕರಿಂದ ಹತರಾದ ಜಿಹಾದಿಗಳು |
ಭಾರತೀಯ ಸೇನೆಯ ರಾಷ್ಟ್ರೀಯ ರೈಫಲ್ಸ್ ಘಟಕದ ಮೇಜರ್ ಕುಮಾರ್, ಕ್ಯಾಪ್ಟನ್ ಮಾಣಿಕ್ ಶರ್ಮಾ ಹಾಗೂ ನಾಯಕ್ ಅರವಿಂದ್ ಸಿಂಗ್ ಚೌಹಾಣ್ ಅವರಿಗೆ ಕೇಂದ್ರ ಸರ್ಕಾರ ಗಣರಾಜ್ಯೋತ್ಸವ ಪ್ರಯುಕ್ತ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಕಳೆದ ಜುಲೈ 8ರಂದು ಉಗ್ರ ಕಮಾಂಡರ್ ಬುರ್ಹಾನ್ ವಾನಿ ಹಾಗೂ ಮತ್ತಿಬ್ಬರು ಉಗ್ರರು (ಸರ್ತಾದ್ ಅಹ್ಮದ್ ಶೇಖ್ ಮತ್ತು ಪರ್ವೇಜ್ ಅಹ್ಮದ್ ಲಷ್ಕರಿ) ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೋಕರ್ನಾಗ್ ಪ್ರಾಂತ್ಯದ ಬುಮ್‌ದೂರ ಹಳ್ಳಿಯ ಮನೆಯೊಂದರಲ್ಲಿ ಅಡಗಿದ್ದರು.
![]() |
ಜಿಹಾದಿಯ ಹೆಣದ ಮೆರವಣಿಗೆ ಮಾಡುತ್ತಿರುವ ಶಾಂತಿದೂತರು |
ಈ ಮಾಹಿತಿ ತಿಳಿದ ಭಾರತೀಯ ಯೋಧರು ಕೂಡಲೇ ಕಾರ್ಯಪ್ರವೃತ್ತರಾಗಿ ಇಡೀ ಗ್ರಾಮವನ್ನು ಸುತ್ತುವರಿದಿದ್ದರು. ಈ ವೇಳೆ ಗ್ರಾಮಸ್ಥರು ಉಗ್ರರನ್ನು ರಕ್ಷಿಸುವ ಸಲುವಾಗಿ ಯೋಧರ ಮೇಲೆ ಕಲ್ಲು ತೂರಾಟ ನಡೆಸಿದರು. ಆದರೂ ದೃತಿಗೆಡದ ಮೇಜರ್ ಕುಮಾರ್, ಮಾಣಿಕ್ ಶರ್ಮಾ, ಚೌಹಾಣ್ ನೇತೃತ್ವದ ತಂಡ ಭಾರೀ ಸಾಹಸ ನಡೆಸಿ, ಉಗ್ರರಿದ್ದ ಮನೆ ಪ್ರವೇಶಿಸಿ ಅವರನ್ನು ಹತ್ಯೆಗೈದಿತ್ತು.
loading...
Post a Comment