loading...
ದೇಶಾದ್ಯಂತ ಗೋಹತ್ಯೆ ನಿಶೇಧ ಮಾಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡುವ ಮೂಲಕ ತನಗೆ ಪ್ರಾಣಿ ಮೇಲೆ ಇರುವ ದಯೆ ಎಂತದ್ದು ಎಂಬುದನ್ನು ಮತ್ತೊಮ್ಮೆ ತೋರ್ಪಡಿಸಿದೆ.
ವಿದೇಶಿ NGO ಗಳಿಗೆ ಮಣಿದು ದೇಶೀಯ ಸಂಸ್ಕೃತಿ ಆಚರಣೆಗಳ ಪ್ರತೀಕವಾದ ಕಂಬಳ ಹಾಗೂ ಜಲ್ಲಿಕಟ್ಟು ನಿಶೇಧಿಸುವ ಮೂಲಕ ತಾನು ದೊಡ್ಡ ಪ್ರಾಣಿ ಪ್ರೇಮಿಯೆಂದು ಜಗತ್ತಿಗೆ ತೋರ್ಪಡಿಸಿದ್ದ ಸುಪ್ರೀಕೋರ್ಟ್ ಈಗ ಭಾರತೀಯರು ದೇವರ ಸ್ಥಾನ ನೀಡಿ ಪೂಜಿಸುವ ಗೋಮಾತೆ ಹತ್ಯೆ ನಿಶೇಧ ಮಾಡಲು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದೆ.
ದೇಶದ ಕಾನೂನು ವ್ಯವಸ್ಥೆಯ ದ್ವಿಮುಖ ನೀತಿಯನ್ನು ನಾವು ಈ ಸಂದರ್ಭದಲ್ಲಿ ಕಾಣಬಹುದಾಗಿದೆ. ಗೋಹತ್ಯೆ ನಿಶೇಧ ಕಾನೂನು ತರುತ್ತೇವೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ಈಗ ಭಾರತವನ್ನು ಗೋಮಾಂಸದ ರಫ್ತಿನಲ್ಲಿ ಮೊದಲ ಸ್ಥಾನಕ್ಕೆ ಏರಿಸುವ ಮೂಲಕ ಕೊಟ್ಟ ಮಾತಿಗೆ ತಪ್ಪಿದೆ. ಈಗ ಈ ದೇಶದ ಕಾನೂನು ವ್ಯವಸ್ಥೆ ಈ ನೆಲದ ಆಚಾರ ವಿಚಾರ ಸಂಸ್ಕೃತಿ ಉಳಿಸುವ ಬದಲು ವಿದೇಶಿ NGO ಗಳಿಗೆ ತಮ್ಮನ್ನು ತಾವು ಮಾರಿಕೊಂಡಿದೆ.
loading...
Post a Comment