Veerakesari 01:46
loading...
ಭಾರತೀಯ ಯೋಧರು ತಮ್ಮ ಕಷ್ಟವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಳ್ಳುತ್ತಿರುವುದರಿಂದ ತೀವ್ರ ಮುಜುಗರಕ್ಕೆ ಒಳಗಾಗಿರುವ ಸೇನಾಧಿಕಾರಿಗಳು ಇದೀಗ ಯೋಧರು ತಮ್ಮ ಕಷ್ಟಗಳನ್ನು ನೇರವಾಗಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಬಳಿ ಹೇಳಿಕೊಳ್ಳುವಂತೆ ವ್ಯಾಟ್ಸಪ್ ಸಂಖ್ಯೆಯೊಂದನ್ನು ಯೋಧರಿಗೆ ನೀಡಿದೆ.
+91 9643300008 ಸಂಖ್ಯೆಯನ್ನು ಯೋಧರಿಗೆ ನೀಡಲಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಸೇನಾಧಿಕಾರಿಗಳು ಸೇನೆಯಲ್ಲಿ ಯಾವುದೇ ರೀತಿಯ ತೊಂದರೆ, ಸಂಕಷ್ಟಗಳು ಎದುರಾದರೂ ಅವುಗಳನ್ನು ನಿವಾರಿಸಲು ಈಗಾಗಲೇ ಸೇನೆಯಲ್ಲಿ ಹಲವು ರೀತಿಯ ವ್ಯವಸ್ಥೆಗಳಿವೆ, ಅದನ್ನು ಹೊರತುಪಡಿಸಿ ಈಗ ಸೈನಿಕರು ಸೇನೆಯ ಈ ಹೊಸ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದು ಎಂದಿದ್ದಾರೆ.
ಕೆಲ ದಿವಸಗಳ ಹಿಂದಷ್ಟೆ ಆಹಾರದ ಕಳಪೆ ಗುಣಮಟ್ಟದ ವೀಡಿಯೋ ಒಂದನ್ನು  ಸೈನಿಕರೊಬ್ಬರು ಜಾಲತಾಣ ದಲ್ಲಿ ಹರಿಯಬಿಟ್ಟಿದ್ದರು. ಇದಾದ ನಂತರ ಸೈನಿಕರ ಅನೇಕ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ. ಇದು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. 
loading...

Post a Comment

Powered by Blogger.