Veerakesari 20:39
loading...
ವಜ್ರಾದಪಿ ಕಠೂರಾಣಿ ಮ್ರುದನಿ ಕುಸುಮಾದಪಿ.ಅಂದರೆ ವಜ್ರದಂತೆ ಶತ್ರುಗಳಿಗೆ ಕಠೋರವಾಗಿ ಹೂವಿನಂತೆ ಮಿತ್ರರಿಗೆ ಮೃದುವಾಗಿ ಇರುವ ವ್ಯಕ್ತಿಯೆ ಶ್ರೀ ಪ್ರಮೋದ್ ಜಿ ಮುತಾಲಿಕ್ ಇವರು ಜನವರಿ 23 1955ರಲ್ಲಿ ಬೆಳಗಾವಿ ಜಿಲ್ಲೆ ಹುಕ್ಕರಿಯಲ್ಲಿ ಜನಿಸಿದರು.ಬಾಲ್ಯದಿಂದಲೇ ಆರ್.ಎಸ್.ಎಸ್ ಸಂಪರ್ಕಕ್ಕೆ ಬಂದು, 1975ರ ತುರ್ತು ಪರಿಸ್ಥಿತಿಯಲ್ಲಿ ದೇಶ ಹಾಗು ಧರ್ಮಕ್ಕೆ ಬಂದೊದಗಿದ ಆಪತ್ತನ್ನು ಕಂಡು ತಮ್ಮನ್ನು ತಾವೇ ರಾಷ್ಟ ಹಾಗೂ ಧರ್ಮಕ್ಕಾಗಿ ಸಮರ್ಪಿಸಿಕೊಳ್ಳುವ ನಿರ್ಣಯ ಕೈಗೊಂಡು ತಮ್ಮ ಬಿ ಕಾಂ ಪದವಿಯ ನಂತರ ಪೂರ್ಣಾವದಿಯ ಪ್ರಚಾರಕರಾಗಿ ಮನೆ ತೊರೆದು ಇಂದಿನವರಿಗೂ ಸಹ ಪ್ರಚಾರಕರಾಗಿಯೇ ಮದುವೇ ಸಂಸಾರವಿಲ್ಲದೆ ಸಂಪೂರ್ಣ ಜೀವನವನ್ನೇ ದೇಶ ಹಾಗು ಧರ್ಮಕ್ಕಾಗಿ ದಾರೆ ಎರೆದಿದ್ದಾರೆ.
ಮತಾಂತರ, ಗೋ ಹತ್ಯೆ, ಭಯೋತ್ಪಾದನೆ, ಅತ್ಯಾಚಾರ, ಭ್ರಷ್ಟಾಚಾರ ಮುಂತಾದ ಪಿಡುಗುಗಳ ವಿರುದ್ಧ ಅಗ್ರ ಧ್ವನಿಯಾಗಿ ನಿಂತಿದ್ದಾರೆ ಮಠ ಮಂದಿರ ಸಾದು ಸಂತರ ಮೇಲೆ ಅವಮಾನಗಳಾದಾಗ ಅತ್ಯಂತ ತೀವ್ರಸ್ವರೂಪದ ಪ್ರತಿಕ್ರಿಯೆಗಳನ್ನು ನೀಡಿ ಅವುಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ
ಹಲವಾರು ಬಾರಿ ಜೈಲುವಾಸ ಹಲವಾರು ಮೊಕದ್ದಮೆಗಳನ್ನು ಹಾಕಿದಾಗಲು ತಾವು ನಂಬಿದ ಹಿಂದುತ್ವದ ವಿಚಾರದಿಂದ ಎಳ್ಳಷ್ಟೂ ವಿಚಲಿತರಾಗದೆ ದೈರ್ಯದಿಂದ ಗುರಿಯೆಡೆಗೆ ನುಗ್ಗುತ್ತಿದ್ದಾರೆ. ಸ್ವಂತಕ್ಕೆ ಸ್ವಲ್ಪವೂ ಯೋಚಿಸದೆ ಸಮಾಜಕ್ಕೆ ಸರ್ವಸ್ವ ಎನ್ನುವ ಸಿದ್ದಾಂತವನ್ನು ದೇಹದ ಕಣಕಣದಲ್ಲೂ ಮೈಗೊಡಿಸಿಕೊಂಡಿದ್ದಾರೆ. ಕನಾ೯ಟಕದ ಶಿವಾಜೆಯೆಂದೇ ಖ್ಯಾತರಾದ ಪ್ರಮೊದ್ ಜೀಯವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ಭಾರತ ಮಾತಾಕೀ ಜೈ
ಜೈ ಶ್ರೀ ರಾಮ ಜೈ ಜೈ ಶ್ರೀ ರಾಮ
ಲೇಖನ : ಸಮಿತ್ ರಾಜ್ ದರೆಗುಡ್ಡೆ
loading...

Post a Comment

Powered by Blogger.