“ಸಾವಿನಿಂದ ಯಾರೂ ತಪ್ಪಿಸಿಕೊಳ್ಳಲಾರರು. ಯಮನ ದೃಷ್ಠಿಯಲ್ಲಿ ಶ್ರೀಮಂತ, ಬಡವ ಯಾರಾದರೂ ಒಂದೇ ಪಾಪ ಮಾಡಿದ್ದರೆ, ಅದಕ್ಕೆ ತಪ್ಪದೆ ಶಿಕ್ಷೆಯನ್ನು ಅನುಭವಿಸಲೇಬೇಕು”. ಇಷ್ಟೇ ಅಲ್ಲ, ಒಬ್ಬ ವ್ಯಕ್ತಿ ಸತ್ತ ನಂತರ ಏನು ನಡೆಯುತ್ತದೆ…?ಸಾವಿನ ರಹಸ್ಯವೇನು..? ಮುಂತಾದ ವಿಷಯಗಳನ್ನು ಕೇದಾರನಾಥಗೆ ಹೋಗುವ ದಾರಿಯಲ್ಲಿ ಶಿವನು ಪಾರ್ವತಿಗೆ ಹೇಳಿದಂತೆ, ಅವುಗಳನ್ನು ಯಮಧರ್ಮರಾಜ ಉದ್ಘಾಟಿಸಿದಂತೆ ಹಿಂದೂಧರ್ಮದ ಪುರಾಣಗಳು ಹೇಳುತ್ತೇವೆ. ಆದರೆ ಪ್ರಸ್ತುತ ಸಮಾಜದಲ್ಲಿ ಪಾಪಭೀತಿಯನ್ನು ಮರೆತವರು ತಪ್ಪುಗಳನ್ನು ಮಾಡುತ್ತಲೇ ಇರುತ್ತಾರೆ. ಆದರೂ ಕರ್ಮಸಿದ್ದಾಂತವು ಅವರನ್ನು ಬೆನ್ನಟ್ಟಿಯೇ ಇರುತ್ತದೆ.
ಮನುಷ್ಯರೆಲ್ಲರೂ ಅಧಿಪತ್ಯ, ನಿಯಂತ್ರತ್ವ ದೋರಣೆಯನ್ನು ಬಿಟ್ಟು, ಇತರರಿಗೆ ಸಹಾಯಮಾಡಬೇಕೆಂದು ಈ ಸಿದ್ದಾಂತ ತಿಳಿಸುತ್ತದೆ. ಇದರ ವಿಷಯ ಪಕ್ಕಕ್ಕಿಟ್ಟರೆ, ಮನುಷ್ಯನಿಗೆ ಸೇರಿದಂತಹ 5 ಸಾವಿನ ರಹಸ್ಯಗಳನ್ನು ಯಮಧರ್ಮರಾಜ ನಚಿಕೇತನೆಂಬ ಪುಟ್ಟ ಮಗುವಿಗೆ ಹೇಳಿದ ವಿಷಯ ಪುರಾಣಗಳ ಮೂಲಕ ತಿಳಿದುಬರುತ್ತದೆ. ಆ ರಹಸ್ಯಗಳನ್ನು ಈಗ ತಿಳಿಯೋಣ.
- ಓಂ… (ಓಂಕಾರ) ಪರಮಾತ್ಮ ಸ್ವರೂಪ, ಮನುಷ್ಯನ ಹೃದಯದಲ್ಲಿ ಬ್ರಹ್ಮ ವಾಸಿಸುತ್ತಾನೆ.
- ಯಮಧರ್ಮರಾಜ ಹೇಳಿದ ಪ್ರಕಾರ ಮನುಷ್ಯ ಸತ್ತುಹೋದ ನಂತರ ಆತನ ಆತ್ಮಕ್ಕೆ ಸಾವಿಲ್ಲ. ದೇಹವನ್ನು ಏನುಮಾಡಿದರೂ, ಆತ್ಮಅದಕ್ಕಾಗಿ ಏನೂ ಮಾಡುವುದಿಲ್ಲ.
- ಆತ್ಮಕ್ಕೆ ಜನನ, ಮರಣಗಳಿಲ್ಲ.
- ಮನುಷ್ಯ ಸತ್ತುಹೋದನೆಂದರೆ, ಆತನ ಜನನ, ಮರಣ ಎಂಬ ಚಕ್ರವು ಪೂರ್ತಿಯಾದಂತೆ. ಇನ್ಮೇಲೆ ಆತನಿಗೆ ಹುಟ್ಟು ಸಾವುಗಳ ಚಕ್ರದ ಜೊತೆ ಎಂತಹ ಸಂಬಂಧವೂ ಇರುವುದಿಲ್ಲ. ಆತ ಬ್ರಹ್ಮನಿಗೆ ಸಮಾನ.
- ಯಮಧರ್ಮರಾಜ ಹೇಳಿರುವ ಪ್ರಕಾರ ದೇವರನ್ನು ನಂಬದಂತಹ ಮನುಷ್ಯರು ಸತ್ತ ನಂತರ ಆತ್ಮದಂತೆ ಬದಲಾಗಿ ಪ್ರಶಾಂತತೆಗಾಗಿ ನೋಡುತ್ತಾರೆ.
ಆತ್ಮಗಳ ಬಗ್ಗೆ ಪ್ರಸ್ತಾವನೆ:
ಭಗವದ್ಗೀತೆಯಲ್ಲಿ : ಶ್ರೀಕೃಷ್ಣ ಭಗವಾನನು, ಆತ್ಮ ಸಿದ್ದಾಂತದ ಬಗ್ಗೆ ವಿವರಿಸಿದ್ದಾನೆ. ಆತ್ಮ ವಿನಾಶವಿಲ್ಲದ್ದು. ಶಸ್ತ್ರಾಸ್ತ್ರಗಳಿಂದ ವಿಬೇಧಿಸವುದಕ್ಕಾಗಲೀ, ಅಗ್ನಿ(ಬೆಂಕಿ)ಯಿಂದ ದಹಿಸುವುದಕ್ಕಾಗಲೀ, ನೀರಿನಿಂದ ನೆನೆಸುವುದಕ್ಕಾಗಲೀ, ಗಾಳಿಯಿಂದ ಆರಿಸುದಕ್ಕಾಗಲೀ ಅಸಾಧ್ಯವೆಂದು ವಿವರಿಸಿದ್ದಾನೆ. ಅಷ್ಟೇಅಲ್ಲ ‘ಅಹಂ ಬ್ರಹ್ಮಾಸ್ಮಿ’ ನಿನ್ನಲ್ಲಿರುವ ಆತ್ಮ ಭಗವಂತನ ಅಂಶವಾದ್ದರಿಂದ ಆ ವಿಷಯವನ್ನು ತಿಳಿದುಕೊಳ್ಳಿ ಎಂದು ಹೇಳುತ್ತಿವೆ.
Post a Comment