loading...
ಇಸ್ಲಾಮಿಕ್ ರಾಷ್ಟ್ರ ಸೌದಿಯಿಂದ 39,000 ಪಾಕಿಸ್ತಾನಿ ಮುಸಲ್ಮಾನರನ್ನು ಒದ್ದು ಹೊರಹಾಕಿದ್ದಾರೆ. ಸೌದಿ ನೆಲದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನಾ ಕೃತ್ಯಗಳು, ಪಾತಕ ಕೃತ್ಯ, ಡ್ರಗ್ಸ್ ಧಂದೆಗಳಲ್ಲಿ ಅತೀ ಹೆಚ್ಚು ಪಾಕಿಸ್ತಾನೀಯರು ತೊಡಗಿರುವುದರಿಂದ ಸೌದಿ ಸರ್ಕಾರ ಈ ಕೆಲಸ ಮಾಡಿದೆ.
ಇಷ್ಟೇ ಅಲ್ಲದೆ ಇನ್ನು ಮುಂದೆ ಪಾಕಿಸ್ತಾನೀಯರನ್ನು ಸೌದಿ ಕಂಪನಿಗಳು ಕೆಲಸಕ್ಕೆ ತೆಗೆದುಕೊಳ್ಳುವ ಮೊದಲು ಅವರ ಪೂರ್ವಾಪರಗಳನ್ನು ಸಮಗ್ರ ಪರಿಶೀಲನೆ ಮಾಡಿ ಒಳ ಬಿಟ್ಟುಕೊಳ್ಳುವಂತೆ ಆಜ್ಞೆ ಮಾಡಿದ್ದಾರೆ. ಪಾಕಿಸ್ತಾನಇ ಮುಸಲ್ಮಾನರು ಇಸ್ಲಾಮಿಕ್ ಸ್ಟೇಟ್ 'ಐಸಿಸ್' ಉಗ್ರರ ಜೊತೆ ಕೈ ಜೋಡಿಸಿ ಇಸ್ಲಾಮಿನ ಹುಟ್ಟೂರಾದ ಸೌದಿಯನ್ನೇ ಧ್ವಂಸ ಮಾಡಲು ಹೊರಟಿದ್ದರು ಜೊತೆಗೆ ಡ್ರಗ್ ದಂದೆ, ಕಳ್ಳತನ, ಮೋಸ ವಂಚನೆ ಹಾಗೂ ಹಲ್ಲೆ ಮುಂತಾದ ಕೃತ್ಯಗಳಲ್ಲಿ ತೊಡಗಿರುವ ಪ್ರಕರಣಗಳು ಅತೀ ಹೆಚ್ಚು ದಾಖಲಾಗಿವೆ ಇದೇ ಕಾರಣಕ್ಕೆ ಗಡಿಪಾರು ಮಾಡಲಾಗಿದೆ ಎಂದು ಸ್ಥಳೀಯ ಸುದ್ದಿವಾಹಿನಿ ವರದಿಮಾಡಿದೆ.
ನಮ್ಮ ಪೇಜ್ ಲೈಕ್ ಮಾಡಿ
ಸೌದಿ ಭದ್ರತಾ ಮುಖ್ಯಸ್ಥ ಅಬ್ದುಲ್ ಅಲ್-ಸಡೌನ್ ಆಜ್ಞೆಯನ್ನು ಹೊರಡಿಸಿದ್ದು, ಸೌದಿಯ ಪ್ರತಿಯೊಂದು ಕಂಪನಿಗಳು ಪಾಕಿಸ್ತಾನೀಯರನ್ನು ಕೆಲಸಕ್ಕೆ ಸೇರಿಸುವ ಮೊದಲು ಅವರ ಪೂರ್ವಾಪರ ಸರಿಯಾಗಿ ಪರಿಶೀಲಿಸುವಂತೆ ಹೇಳಿದ್ದಾರೆ.
ಜೊತೆಗೆ "ಪಾಕಿಸ್ತಾನ ಉಗ್ರರನ್ನು ಪೋಷಣೆ ಮಾಡುತ್ತಿದೆ. ತಾಲೀಬಾನ್ ಉಗ್ರರ ಹುಟ್ಟಿಗೆ ಪಾಕಿಸ್ತಾನವೇ ಮೂಲ ಕಾರಣ" ಎಂದಿದ್ದಾರೆ. ಪಾಕಿಸ್ತಾನ ಮೂಲದ 82ಭಯೋತ್ಪಾದಕರು ಈಗಾಗಲೇ ಸೌದಿಯ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದು ಇದರಲ್ಲಿ 15ಭಯೋತ್ಪಾದಕರನ್ನು ಕೆಲ ದಿನಗಳ ಹಿಂದೆಯಷ್ಟೇ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಬಂದಿಸಲಾಗಿತ್ತು, ಇದರಲ್ಲಿ ಪಾಕಿಸ್ತಾನ ಮೂಲದ ಮಹೆಳೆಯೂ ಸೇರಿದ್ದಾಳೆ. ಈ ಸಂದರ್ಭದಲ್ಲಿ ಇಬ್ಬರು ಭಯೋತ್ಪಾದಕರು ತಮ್ಮನ್ನು ತಾವು ಸ್ಪೋಟಿಸಿಕೊಂಡಿದ್ದರು.
ಕಳೆದ ವರ್ಷ ಸೌದಿ ಅರಬಿಯಾದ ಜೆದ್ದಾ ಪುಟ್ ಬಾಲ್ ಸ್ಟೇಡಿಯಂ ಸ್ಪೋಟಿಸಲು ಯತ್ನಿಸಿದ್ದ ಉಗ್ರರ ಗುಂಪಿನಲ್ಲೂ ಇಬ್ಬರು ಪಾಕಿಸ್ತಾನಿಯರು ಸೇರಿದ್ದರು.
loading...
Post a Comment