loading...
ನೇತಾಜಿ ಸುಭಾಷ್ ಚಂದ್ರ ಬೋಸ್ ವಾಹನ ಚಾಲಕರಾಗಿದ್ದ ಕರ್ನಲ್ ನಿಜಾಮುದ್ದೀನ್ ನಿಧನರಾಗಿದ್ದಾರೆ. ಕರ್ನಲ್ ನಿಜಾಮುದ್ದೀನ್ ಅವರು ತಮ್ಮ ಊರಾದ ಉತ್ತರಪ್ರದೇಶದ ಅಜಾಂಘರ್'ನಲ್ಲಿ ವೃದ್ಧಾಪ್ಯದ ಕಾರಣದಿಂದ ಕೊನೆಯುಸಿರೆಳೆದರು. ಅವರು ತಮ್ಮ ವೃದ್ಧಾಪ್ಯದ ಸಮಯದಲ್ಲೂ ನೇತಾಜಿಯ ಆದರ್ಶಗಳಲ್ಲೇ ಬದುಕಿದ್ದರು ಎಂದು ಅವರ ಕುಟುಂಬಸ್ತರು ಹೇಳಿದ್ದಾರೆ.
ಕರ್ನಲ್ ನಿಜಾಮುದ್ದೀನ್ 1901 ರಲ್ಲಿ ಜನಿಸಿದ್ದು ಅವರಿಗೆ 117ವರ್ಷ ವಯಸ್ಸಾಗಿತ್ತು. ನಿಜಾಮುದ್ದೀನ್ ಅವರು ಪತ್ನಿ, ಮೂವರು ಗಂಡು ಮಕ್ಕಳು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.1943ರಿಂದ 1945ರ ಮಧ್ಯೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೊತೆಗಿದ್ದು ಅವರ ವಾಹನ ಚಾಲಕರಾಗಿದ್ದರು. ಹಿಂದೂಸ್ತಾನದ ಸ್ವಾತಂತ್ರ್ಯ ಹೋರಾಟದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು.
ಕರ್ನಲ್ ನಿಜಾಮುದ್ದೀನ್ ನಿಧನಕ್ಕೆ ಪ್ರಧಾನಿ ಮೋದಿ ಸೇರಿ ಅನೇಕರು ಸಂತಾಪ ಸೂಚಿಸಿದ್ದಾರೆ. ನಿಜಾಮುದ್ದೀನ್ ಅವರ ಆದರ್ಶ, ಧೈರ್ಯ ಮತ್ತು ದೇಶಭಕ್ತಿ ಸದಾ ಸ್ಮರಣೀಯ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಕರ್ನಲ್ ನಿಜಾಮುದ್ದೀನ್ ರಂತಹಾ ದೇಶ ಪ್ರೇಮಿಗಳು ಈ ಹಿಂದುಸ್ಥಾನದ ನೆಲದಲ್ಲಿ ಮತ್ತೆ ಹುಟ್ಟಿ ಬರಲಿ.
ಜೈ ಹಿಂದ್ , ಜೈ ಹಿಂದುಸ್ತಾನ
loading...
Post a Comment