Veerakesari 00:42
veerakesari.in
​ಚಾಮರಾಜಪೇಟೆ ಮೊದಲ ಮುಖ್ಯರಸ್ತೆಯ ಆಲೂರು ವೆಂಕಟರಾವ್ ಹೆಸರನ್ನು ಟಿಪ್ಪು ಸುಲ್ತಾನ್ ರಸ್ತೆ ಎಂದು ಬದಲಾಯಿಸುವ ಪ್ರಸ್ತಾವನೆಯನ್ನು ಮೇಯರ್ ಜಿ ಪದ್ಮಾವತಿ ಅವರು ಕೈಬಿಟ್ಟಿದ್ದಾರೆ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಈಗಿರುವಂತೆ "ಆಲೂರು ವೆಂಕಟ್ ರಾವ್" ರಸ್ತೆಯೆಂದೇ ಹೆಸರು ಮುಂದುವರೆಯಲಿದೆ.
ಕಳಾಸಿಪಾಳ್ಯ ಬಸ್ ನಿಲ್ದಾಣದಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಒಂದನೇ ಮುಖ್ಯರಸ್ಥೆಗೆ ಮತಾಂಧನ ಟಿಪ್ಪುವಿನ ಹೆಸರಿಡಲು ಬೆಂಗಳೂರು ಮಹಾನಗರ ಪಾಲಿಕೆ ಯೋಚಿಸಿತ್ತು. ಬಿಬಿಎಂಪಿ ವಾರ್ಡ್ ಸಂಖ್ಯೆ 119, 130 ಹಾಗೂ 140ರ ವ್ಯಾಪ್ತಿಯಲ್ಲಿ ಬರುವ ಚಾಮರಾಜಪೇಟೆ ಮುಖ್ಯ ರಸ್ತೆಯನ್ನು ಈಗಾಗಲೇ "ಆಲೂರು ವೆಂಕಟರಾಯರು ರಸ್ತೆ" ಎಂದು ಕರೆಯಲಾಗುತ್ತಿದೆ. ಈಗ ಈ ಹೆಸರನ್ನು ತೆಗೆದು ಇದರ ಬದಲಿಗೆ ಮತಾಂದ "ಟಿಪ್ಪು ಸುಲ್ತಾನ್ ಅರಮನೆ ರಸ್ತೆ" ಎಂದು ಇಡಲು ಮುಂದಾಗಿತ್ತು.​
ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ, ಕನ್ನಡ ಸಂಘ ಸಂಸ್ಥೆಗಳ ಒಕ್ಕೂಟ, ಆಲೂರು ವೆಂಕಟರಾಯರ ಸ್ಮಾರಕ ರಾಷ್ಟ್ರೀಯ ಟ್ರಸ್ಟ್, ಉತ್ತಿಷ್ಟ ಭಾರತ, ವಂದೇ ಮಾತರಂ ಸಂಸ್ಥೆ, ಭಾರತೀಯ ಕನ್ನಡ ಪ್ರತಿಷ್ಠಾನ ಸಂಸ್ಥೆ, ವಿಶ್ವ ಚೇತನ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಕಡೆಗಳಿಂದ ಸಾಕಷ್ಟು ವಿರೋಧಗಳು ವ್ಯಕ್ತವಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮಾಜಿ ಕಾರ್ಪೋರೇಟರ್ ಶ್ರೀನಿವಾಸ ಮೂರ್ತಿ " ಬ್ರಿಟಿಷ್ ಹೆಸರುಗಳನ್ನು ಹೊತ್ತುಕೊಂಡಿದ್ದ ಚಾಮರಾಜಪೇಟೆಯ ರಸ್ತೆಗಳಿಗೆಲ್ಲಾ ಕನ್ನಡ ಅಧ್ವರ್ಯುಗಳ ಹೆಸರನ್ನು ದಶಕಗಳ ಹಿಂದೆಯೇ ಬಿಬಿಎಂಪಿ ಅಧಿಕೃತವಾಗಿ ಇಟ್ಟಿದೆ. ಪಾಲಿಕೆಯ ನಡಾವಳಿಗಳ ಕಡತಗಳನ್ನು ತೆಗೆದರೆ ಆಲೂರು ವೆಂಕಟರಾಯರ ರಸ್ತೆ ಎಂದು ಇಟ್ಟಿರುವ ಬಗ್ಗೆ ದಾಖಲೆಗಳಿವೆ. ಈಗ ಹೆಸರು ಬದಲಾಯಿಸುತ್ತಿರುವುದು ಸರಿಯಲ್ಲ" ಎಂದಿದ್ದರು.
ಕೊನೆಗೂ ಕನ್ನಡ ಪರ ಸಂಘಟನೆಗಳ ಹೋರಾಟಕ್ಕೆ ಜಯವಾಗಿದೆ. ಜೈ ಹಿಂದ್ ಜೈ ಕರ್ನಾಟಕ ಮಾತೆ.
loading...

Post a Comment

Powered by Blogger.