Veerakesari 20:47
veerakesari.in
​ಮೇರಾ ರಂಗ್ ದೇ ಬಸಂತೀ ಚೋಲಾ…ಮೇರಾ ರಂಗ್ ದೇ… ಇಸೀ ರಂಗ್ ಮೇ ರಂಗ್ ಶಿವಾ ನೇ, ಮಾ ಕಾಬಂಧನ್ ಖೋಲಾ…!
(ನನ್ನ ಬಣ್ಣವನ್ನು ವೀರ ಶಿವಾಜಿಯ ರಕ್ತದ ಬಣ್ಣವಾಗಿ ಬದಲಿಸು.. ನನ್ನ ತಾಯಿಯನ್ನು ಬಂಧನದ ಸಂಕೋಲೆಗಳಿಂದ ಮುಕ್ತಗೊಳಿಸು..!)
-ಭಗತ್ ಸಿಂಗ್
ಈ ದೇಶವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಗೊಳಿಸಲು ಹೋರಾಡಿದ ಅಸಂಖ್ಯಾತ ಯೋಧರಲ್ಲಿ ಭಗತ್‍ಸಿಂಗ್ ಅಸಾಮಾನ್ಯ ಕ್ರಾಂತಿಕಾರಿಗಳು. ಭಗತ್‍ಸಿಂಗ್ ಈ ದೇಶ ಮಾತ್ರವಲ್ಲ, ಇಡೀ ಜಗತ್ತು ಕಂಡ ಅಪ್ರತಿಮ ಕ್ರಾಂತಿಕಾರಿಗಳಲ್ಲೊಬ್ಬರು. ಅವರು ತಮ್ಮ ತ್ಯಾಗ ಮತ್ತು ಬಲಿದಾನದಿಂದಾಗಿ, ಅದಕ್ಕೂ ಮಿಗಿಲಾಗಿ ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಬೆಳೆಸಿಕೊಂಡ ಉನ್ನತ ವೈಚಾರಿಕ ಮಟ್ಟದಿಂದಾಗಿ,ಸಂಘಟನೆಯನ್ನು ಕಟ್ಟಿದ ರೀತಿಯಿಂದಾಗಿ,ಜನತೆಯಲ್ಲಿ ಹೋರಾಟದ ಉತ್ಸಾಹವನ್ನು ತುಂಬಿದ ರೀತಿಯಿಂದಾಗಿ, ಕ್ರಾಂತಿಕಾರಿಗಳು ಭಯೋತ್ಪಾದಕರಲ್ಲ, ಬದಲಿಗೆ ಅಸೀಮ ದೇಶಪ್ರೇಮಿಗಳೆಂದು ಜಗತ್ತಿಗೆ ಸಾರಿದ ಅವರ ವೈಖರಿಯಿಂದಾಗಿ, ಅವರು ನಮ್ಮ ನಡುವೆ ಇಲ್ಲದಿದ್ದರೂ, ಸದಾ ಕಾಲ ಧ್ರುವತಾರೆಯಾಗಿ ಮಿನುಗುತ್ತಿರುತ್ತಾರೆ. ನಮ್ಮ ಜಡತೆಯನ್ನು ಹೊಡೆದೋಡಿಸಿ ನಮ್ಮಲ್ಲಿ ನಿರಂತರ ಚೈತನ್ಯವನ್ನು ತುಂಬುವ ಸ್ಫೂರ್ತಿಯ ಸೆಲೆಯಾಗಿ ನಿಲ್ಲುತ್ತಾರೆ.
ಕ್ರಾಂತಿಕಾರಿಗಳೆಂದರೆ ಹಾದಿ ತಪ್ಪಿದ ದೇಶ ಭಕ್ತರಲ್ಲ, ಅವರಿಗೂ ಧ್ಯೇಯ, ಗುರಿ, ಆದರ್ಶಗಳಿರುತ್ತವೆ.ಮತ್ತು ಆ ಆದರ್ಶಗಳನ್ನ ಪಾಲಿಸಲು ತಮ್ಮ ಜೀವವನ್ನು ಸಹ ಅವರು ಅರ್ಪಿಸ ಬಲ್ಲರು ಅಂತ ಜಗತ್ತಿಗೆ ತೋರಿಸಿ ಕೊಟ್ಟವರು, ಹುಟ್ಟಿ ಬಂದು ಅಷ್ಟೇ ಬೇಗ ಅದಿನ್ಯಾವ್ದೋ ತುರ್ತು ಕೆಲಸವಿದೆ ಅನ್ನುವಂತೆ ಎದ್ದು ಹೊರಟವರು, ಸತ್ತು ಬದುಕುವುದು ಹೇಗೆ ಅಂತ ತೋರಿಸಿ ಕೊಟ್ಟು ಹೋದವರು ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್. ಬಹುಷಃ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ  ಕ್ರಾಂತಿಯ ಕಿಡಿಯನ್ನ ಭಾರತೀಯರಲ್ಲಿ ಬಡಿದ್ದೆಬ್ಬಿಸಿದ ಅಪ್ರತಿಮ ವ್ಯಕ್ತಿ ಭಗತ್ ಸಿಂಗ್. ಚಂದ್ರಶೇಖರ್ ಆಜಾದ್ರಂತ ಮಹಾನ್ ಗುರುವಿನ ಶಿಷ್ಯ ಗುರುವನ್ನು ಮೀರಿಸುವಂತೆ ಮುನ್ನಡೆದು ಬಿಟ್ಟರು.
ಜಲಿಯನ್ ವಾಲ ಬಾಗ್ನ ದುರಂತ ಭಾರತದ ಸ್ವಾತಂತ್ರ್ಯ ಹೋರಾಟದ ಕ್ರಾಂತಿಯ ಕಿಡಿಯ ಉದಯಕ್ಕೆ ಮುನ್ನುಡಿ ಬರೆದಿತ್ತು. ಗಾಂಧೀಜಿಯವರ ಅಸಹಕಾರ ಚಳುವಳಿಗೆ ಓ ಕೊಟ್ಟು ಬೀದಿಗಿಳಿದ ಭಾರತೀಯರಲ್ಲಿ ಪುಟ್ಟ ಮಕ್ಕಳಿಂದ ಹಿಡಿದು ಮುದುಕರವರೆಗೂ ಎಲ್ಲರು ಇದ್ದರು.ಅಂತವರ ಮಧ್ಯೆ ಬಾಲಕ ಭಗತ್ ಕೂಡ ಇದ್ದ. ಚೌರಿ-ಚೌರಾದ ಘಟನೆಯ ನಂತರ ಗಾಂಧೀಜಿ ಏಕಾಏಕಿ ಚಳುವಳಿಯನ್ನ ಹಿಂದೆ ಪಡೆದಾಗ, ಮತ್ತು ಆ ನಂತರ ಗಾಂಧೀಜಿಯ ಮಾತು ಕೇಳಿ ಶಾಲೆ ಬಿಟ್ಟು ಹೊರ ಬಂದು ಪಟ್ಟ ಪಾಡು ಇವೆಲ್ಲ ಭಗತ್ ಮನಸಿನಲ್ಲಿ ಗಾಂಧೀವಾದದ ಬಗ್ಗೆ ನಂಬಿಕೆ ಕಳೆಯುವಂತೆ ಮಾಡಿತು.ಬಹುಷಃ . ಆ ನಂತರ  ಭಗತ್ ಸಿಂಗ್ ಆರಿಸಿ ಕೊಂಡಿದ್ದು ಕ್ರಾಂತಿ ಮಾರ್ಗವನ್ನ. ಕಾಲೇಜಿನ ದಿನಗಳಲ್ಲೇ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಶ್ಫಾಕ್ ಉಲ್ ಖಾನ್ರವರ ‘ಹಿಂದುಸ್ತಾನ್ ರಿಪಬ್ಲಿಕ್ ಅಸೋಸಿಯೇಶನ್ ಸದಸ್ಯನಾಗಿ ಚಳುವಳಿಗೆ ಧುಮುಕಿದ. ಕಾಕೋರಿ ಪ್ರಕರಣದ ನಂತರ ಮೂಂಚೂಣಿ ಕ್ರಾಂತಿಕಾರಿ ನಾಯಕರಾದ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಶ್ಫಾಕ್ ಉಲ್ ಖಾನ್ರನ್ನ ಬ್ರಿಟಿಶ್ ಸರ್ಕಾರ ಗಲ್ಲಿಗೇರಿಸಿತು. ಭಗತ್ ಸಿಂಗ್ಗೆ ಗುರುವಿನಂತಿದ್ದ ಮತ್ತೊಬ್ಬ ಮಹಾನ್ ಹೋರಾಟಗಾರ ಚಂದ್ರ ಶೇಖರ್ ಆಜಾದ್ ಭೂಗತರಾಗ ಬೇಕಾಯಿತು.ಈ ಸಂಧರ್ಭದಲ್ಲಿ ಕ್ರಾಂತಿಕಾರಿಗಳ ನಾಯಕನಾಗಿ ಹೊಮ್ಮಿದವನು ಭಗತ್ ಸಿಂಗ್. ನೌಜವಾನ್ ಭಾರತ ಸಭಾದ ಸದಸ್ಯನು ಆಗಿದ್ದ ಭಗತ್, ದೆಹಲಿಯಲ್ಲಿ ಕರೆದಿದ್ದ ಕ್ರಾಂತಿಕಾರಿಗಳ ಸಭೆಯಲ್ಲಿ ನಮ್ಮ ಗುರಿ ಸ್ವಾತಂತ್ರ್ಯಗಳಿಸುವುದಷ್ಟೇ ಅಲ್ಲ.ಸ್ವಾತಂತ್ರ್ಯ ನಂತರದ ಸಮಗ್ರ ಭಾರತ ಹೇಗಿರ ಬೇಕು ಎಂಬ ಚಿತ್ರಣವು ಇತ್ತು ಅವನಿಗಿತ್ತು. ಇಪ್ಪತ್ತರ ಆಸು ಪಾಸಿನ ಹುಡುಗ ಆ ಮಟ್ಟಕ್ಕೆ ಯೋಚಿಸ ಬಲ್ಲವನಾಗಿದ್ದ.
ಅಕ್ಟೋಬರ್ 20, 1928……..
ಪಂಜಾಬಿನ ಲಾಹೋರ್…..
ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಭಾರತದಲ್ಲಿ ಸ್ಥಾಪಿಸಲಾಗುವ ಸಂವಿಧಾನದ ರಚನೆಯ ಕುರಿತು ಚರ್ಚೆ ನಡೆಸಲು ಬ್ರಿಟಿಷರ ಏಳು ಸದಸ್ಯರ ತಂಡದ ಭಾರತದ ಲಾಹೋರಿಗೆ ಅದೇ ತಾನೆ ತಲುಪಿತ್ತು. ತಂಡದ ಅಧ್ಯಕ್ಷರಾಗಿದ್ದ ಸರ್ ಜಾನ್ ಸೈಮನ್‍ರವರ ಹೆಸರಲ್ಲಿ ಆಯೋಗವು ಸ್ಥಾಪಿತವಾಗಿತ್ತು. ಈ ಆಯೋಗ ಭಾರತ ತಲುಪುವ ಮೊದಲೇ ಬ್ರಿಟಿಷರ ಈ ನಡೆಯನ್ನು ಭಾರತೀಯರು ತಿರಸ್ಕರಿಸಿ ಪ್ರತಿಭಟಿಸತೊಡಗಿದ್ದರು. ಪ್ರಾದೇಶಿಕ ಪ್ರತಿನಿಧಿತ್ವ ಮತ್ತು ಹಿಂದೂ–ಮುಸ್ಲಿಮರ ಪ್ರತ್ಯೇಕ ಚುನಾವಣೆ ಪ್ರಕ್ರಿಯೆಗಳನ್ನು ಒಳಗೊಂಡ ಈ ಆಯೋಗ ಭಾರತೀಯರನ್ನು ಒಡೆದು ಆಳುವ ಬ್ರಿಟಿಷರ ನೀತಿಯ ಸಂಕೇತವಾಗಿದ್ದು ಭಾರತದ ಒಬ್ಬ ಪ್ರತಿನಿಧಿಯೂ ಇಲ್ಲದ ಕಾರಣ ಭಾರತೀಯರ ಆಕ್ರೋಷಕ್ಕೆ ಇದು ಗುರಿಯಾಗಿತ್ತು.
ಅಂದು ಲಾಹೋರಿನ ರೈಲು ನಿಲ್ದಾಣದ ಬಳಿ ಬ್ರಿಟಿಷ್ ಸದಸ್ಯರನ್ನು ಹೊತ್ತು ತರುತ್ತಿದ್ದ ರೈಲು ತಲುಪುತ್ತಿದ್ದಂತೆಯೇ “ಗೋ ಬ್ಯಾಕ್ ಸೈಮನ್” (ಸೈಮನ್ ಹಿಂತಿರುಗು) ಎನ್ನುವ ಭಾರೀ ಘೋಷಣೆಗಳೊಂದಿಗೆ ಎದುರಾದದ್ದು ಕಪ್ಪು ಬಾವುಟಗಳೊಂದಿಗೆ ತುಂಬಿದ ಜನಸಾಗರ ಕಾಣಬರುತ್ತಿತ್ತು…”ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿ” ಎನ್ನುವ ಸೇನೆಯ ಉತ್ಸಾಹೀ ಯುವಕರು ಅಲ್ಲಿ ತುಂಬಿದ್ದರು. ನಿಲ್ದಾಣಕ್ಕೆ ಬಂದಿಳಿದ ಸದಸ್ಯರ ಆಯೋಗ ಇದನ್ನು ಕಂಡು ನಿಬ್ಬೆರಗಾಯಿತು….ಪೋಲೀಸರೂ ಅಪಾರ ಜನಸ್ತೋಮ ಕಂಡು ಹೆದರಿದರು.ಕೂಡಲೇ ಪೋಲೀಸ್ ಸೂಪರಿಟೆಂಡೆಂಟ್ ಮಿಸ್ಟರ್ ಸ್ಕಾಟ್ ಲಾಠೀ ಚಾರ್ಜಿಗೆ ಆದೇಶವಿತ್ತನು.
ಅವನ ಅಜ್ಞೆಯನ್ನು ಕೂಡಲೇ ಬ್ರಿಟಿಷ್ ಪೋಲೀಸ್ ಅಧಿಕಾರಿ ಸ್ಯಾಂಡರ್ಸ್ ಕಾರ್ಯರೂಪಕ್ಕೆ ತಂದನು.ಪೋಲೀಸರು ನೆರೆದಿದ್ದ ಎಲ್ಲರನ್ನೂ ಚದುರಿಸಲು ಲಾಠಿಯಿಂದ ಕಂಡಕಂಡವರನ್ನು ಹೊಡೆಯುತ್ತಾ ಮುಂದುವರೆದರು. ಬ್ರಿಟಿಷರ ವಿರುದ್ಧದ ಸ್ವಾತಂತ್ರ ಸಂಗ್ರಾಮದ ಪ್ರಭಾವೀ ಹಿರಿಯ ನೇತಾರರಾಗಿದ್ದ ಶ್ರೀ ಲಾಲಾ ಲಜಪತ್ ರಾಯ್‍ರವರ ಕ್ರಾಂತಿಕಾರೀ ಭಾಷಣ ಕೇಳಿ ಬರುತ್ತಿತ್ತು. ತಮ್ಮ ನಾಯಕರಾದ ಲಾಲಾರನ್ನು ಕೆಲವು ಧೀರ ಯುವಕರು ಸುತ್ತುವರೆದಿದ್ದರು.ಈ ನಡುವೆ ಅದು ಹೇಗೋ ಅವರನ್ನು ಚದುರಿಸಿದ ಸ್ಯಾಂಡರ್ಸ್ ಲಾಲಾರವರ ಬಳಿ ತಲುಪಿ ಅವರನ್ನು ಲಾಠಿಯಿಂದ ಹೊಡೆಯತೊಡಗಿದ….
ಅತಿ ಉತ್ಸಾಹದಿಂದ ಸೇನೆಯನ್ನು ಹುರಿದುಂಬಿಸುತ್ತಾ ನಿರರ್ಗಳವಾಗಿ ಬ್ರಿಟಿಷರಿಗೆ ಅರ್ಥವಾಗುವಂತೆ ಇಂಗ್ಲಿಷ್‍ನಲ್ಲಿಯೇ ಮಾತನಾಡುತ್ತಾ ಮುಗ್ಧ ಭಾರತೀಯರ ಮೇಲೆ ದಬ್ಬಾಳಿಕೆಯಿಂದ ಸಾಮ್ರಾಜ್ಯವಾದದ ಸರ್ವಾಧಿಕಾರೀ ಧೋರಣೆಯಿಂದ ಚುನಾಯಿತ ಭಾರತೀಯರ ಅಧಿಕಾರ ಕಿತ್ತುಕೊಂಡ ಬ್ರಿಟಿಷ್ ಸರಕಾರ ಬಹು ದಿನ ಭಾರತದಲ್ಲಿ ಉಳಿಯುವುದಿಲ್ಲಾ, ತಮ್ಮ ಮೇಲೆ ನಡೆಯುತ್ತುರುವ ಬ್ರಿಟಿಷರ ಈ ಪ್ರಹಾರದ ಏಟುಗಳು ಬ್ರಿಟಿಷರ ಸಾಮ್ರಾಜ್ಯದ ಸಮಾಧಿಗೆ ಮೊಳೆ ಹೊಡೆದಂತೆ ಎನ್ನುತ್ತಿದ್ದಂತೆಯೇ …ಸತತವಾಗಿ ಭುಜ, ತಲೆ ಮತ್ತು ಎದೆಯ ಮೇಲೆ ಲಾಠೀ ಬೀಸತೊಡಗಿದ. …ಎದುರಾದ ಎಲ್ಲಾ ಯುವಕರನ್ನು ಪೋಲೀಸರು ಲಾಠಿಗಳಿಂದ ಥಳಿಸತೊಡಗಿದರು. ಚೀತ್ಕಾರದೊಡನೆ ರಕ್ತವೂ ಹರಿಯತೊಡಗಿತು. ತಮ್ಮ ಎದೆಯ ಮೇಲಾದ ಪೆಟ್ಟಿನ ಆಘಾತವನ್ನು ಹಿರಿಯ ಜೀವ ಲಾಲಾ ಲಜಪತ್ ರಾಯರಿಂದ ತಡೆಯಲಾಗಲಿಲ್ಲ. ಮುಂದೆ ಕೆಲವು ದಿನಗಳ ನಂತರ ಲಾಲಾರವರನ್ನು ಉಳಿಸಿಕೊಳ್ಳಲಾಗಲಿಲ್ಲ. ಬಲವಾದ ಏಟಿನಿಂದ ದೇಹ ದುರ್ಬಲವಾಗಿತ್ತು, ಅವರು ಕೊನೆಯುಸಿರೆಳೆದರು
.‘ಸೈಮನ್ ಕಮಿಷನ್’ ವಿರುದ್ಧ ಗುಡುಗಿದ ಲಾಲ ಲಜಪತ ರಾಯ್ ಅವರನ್ನ ಪೊಲೀಸರು ಹೊಡೆದು ಕೊಂದಾಗ, ಅವರ ಜೊತೆಗಿದ್ದ ಭಗತ್ ಮತ್ತು ಸಂಗಡಿಗರು ಪ್ರತೀಕಾರ ತೆಗೆದು ಕೊಳ್ಳಲು ಶಪತ ಮಾಡಿದರು ಮತ್ತು ಅದರಂತೆ ಕಾರ್ಯ ರೂಪಕ್ಕೆ ತರಲು ಭಗತ್ನೊಂದಿಗೆ ಕೈ ಜೋಡಿಸಿದವರು ರಾಜಗುರು,ಸುಖದೇವ್ ಮತ್ತು ಜೈ ಗೋಪಾಲ್. 
ಡಿಸೆಂಬರ್ 10ರಂದು ಎಚ್.ಎಸ್.ಆರ್.ಎ ಸಭೆ ನಡೆಯಿತು.  ಸಭೆಯಲ್ಲಿ ಆಜಾದ್ ನುಡಿದರು “ಸಂಗಾತಿಗಳೇ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಸ್ವಾತಂತ್ರ್ಯಕ್ಕಾಗಿ ನಾವು ಹೋರಾಡುತ್ತಿದ್ದೇವೆ. ಶತ್ರುವಿನ ಸೈನ್ಯ, ಆಯುಧಗಳೂ, ಯುದ್ಧಕ್ಕೆ ಬೇಕಾದ ಇತರೆ ಸಾಮಗ್ರಿಗಳು ವಿವರಿಸಲೂ ಸಾಧ್ಯವಿಲ್ಲದಷ್ಟು ಅಗಾಧವಾಗಿವೆ. ಇದನ್ನು ವಿರೋಧಿಸಲು ನಮ್ಮಲ್ಲಿರುವುದು ಕೇವಲ ತ್ಯಾಗಮಯ ಭಾವನೆ ಮತ್ತು ಸಾರ್ವಜನಿಕ ಬೆಂಬಲ.” ಸಭೆ ಸರ್ವಾನುಮತದಿಂದ ಸ್ಕಾಟ್‍ನನ್ನು ಕೊಲ್ಲಲು ತೀರ್ಮಾನಿಸಿತು. ಅದು ಕೇವಲ ಒಬ್ಬ ವ್ಯಕ್ತಿಯ ಕೊಲೆಯಾಗಿರದೆ, ತಮ್ಮ ರಾಷ್ಟ್ರದ ಧೀಮಂತ ನಾಯಕನಿಗಾದ ಅಪಮಾನ, ದೇಶಕ್ಕಾದ ಅಪಮಾನಕ್ಕೆ ಪ್ರತಿಯಾಗಿ ಉತ್ತರವನ್ನು ನೀಡುವ ಉದ್ದೇಶವನ್ನು ಹೊಂದಿತ್ತು. ಈ ಹೋರಾಟದಲ್ಲಿ ತಮ್ಮ ಜೀವ ಹೋಗಬಹುದೆಂದು ಕ್ರಾಂತಿಕಾರಿಗಳಿಗೆ ತಿಳಿದಿದ್ದರೂ ಸಹ ದೇಶದ ಜನತೆಗೆ, ಮುಖ್ಯವಾಗಿ ಯುವಜನತೆಗೆ, ‘ಅಪಮಾನವನ್ನು ಮೌನವಾಗಿ ಸಹಿಸಬೇಡಿ’ ಎನ್ನುವ ಸಂದೇಶವನ್ನು ಸಾರುವ ಉದ್ದೇಶವನ್ನು ಹೊಂದಿತ್ತು. 
ಆ ಕಾರ್ಯಕ್ಕೆ ಎಲ್ಲರೂ ಸಜ್ಜಾಗಿದ್ದರೂ,  ಭಗತ್‍ಸಿಂಗ್, ರಾಜಗುರು, ಆಜಾದ್ ಮತ್ತು ಜಯಗೋಪಾಲ್. ಸುಖದೇವ್ ತಾನೇ ಕೆಲಸ ವಹಿಸಿಕೊಳ್ಳುತ್ತೇನೆಂದರೂ, ಆತ ಕಾರ್ಯಾಚರಣೆಯನ್ನು ರೂಪಿಸುವವರಾದ್ದರಿಂದ ಮತ್ತು ದೇಶದ ವಿವಿಧ ಭಾಗಗಳ ಕ್ರಾಂತಿಕಾರಿಗಳನ್ನು ಒಟ್ಟುಗೂಡಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದುದರಿಂದ ಅವರನ್ನು ಈ ಕಾರ್ಯದಿಂದ ಹೊರಗಿಡಲಾಯಿತು. ಜಯಗೋಪಾಲ್ Police ಠಾಣೆಯ ಹೊರನಿಂತು ಸ್ಕಾಟ್ ಬಂದ ತಕ್ಷಣ ಸೂಚನೆ ನೀಡಬೇಕಿತ್ತು. ಭಗತ್‍ಸಿಂಗ್ ಸ್ಕಾಟ್‍ನಿಗೆ ಗುಂಡಿಟ್ಟು ಕೊಲ್ಲಬೇಕಿತ್ತು. ರಾಜಗುರು ಭಗತ್‍ಸಿಂಗ್‍ರ  ಜೊತೆಗಿದ್ದು ಅವರಿಗೆ ರಕ್ಷಣೆ ನೀಡಬೇಕಿತ್ತು.ಆಜಾದ್ ಇವರ ತಪ್ಪಿಸಿಕೊಳ್ಳುವಿಕೆಗೆ ಸಹಾಯ ಮಾಡಬೇಕಿತ್ತು.
ಡಿಸೆಂಬರ್ 17ರಂದು ಸ್ಕಾಟ್ Police ಠಾಣೆಗೆ ಬರಲಿಲ್ಲ. ಹೊರಗಡೆ ಬಂದ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಜೆ.ಪಿ ಸ್ಯಾಂಡರ್ಸ್‍ನನ್ನೇ ಸ್ಕಾಟ್ ಎಂದು ತಪ್ಪಾಗಿ ಭಾವಿಸಿ ಜೈಗೋಪಾಲ್ ಸೂಚನೆ ನೀಡಿದ. ರಾಜಗುರು ತಕ್ಷಣವೇ ಗುಂಡು ಹಾರಿಸಿದರು. ಭಗತ್‍ಸಿಂಗ್ ‘ಅವನಲ್ಲ, ಅವನಲ್ಲ’ ಎನ್ನುವಷ್ಟರಲ್ಲಿ ಸ್ಯಾಂಡರ್ಸ್ ಸತ್ತು ಹೋಗಿದ್ದ. ಭಗತ್‍ಸಿಂಗ್‍ರಿಗೆ ಅದು ಸ್ಯಾಂಡರ್ಸ್ ಎಂದು ಗೊತ್ತಾದರೂ ಅದರ ಬಗ್ಗೆ ವಿಷಾದವೇನೂ ಇರಲಿಲ್ಲ ಏಕೆಂದರೆ ಸ್ಯಾಂಡರ್ಸ್ ಕೂಡ ಲಾಲಾಜಿಯವರನ್ನು ಅಮಾನುಷವಾಗಿ ನಡೆಸಿಕೊಂಡಿದ್ದ. ಆತನ ಸಾವನ್ನು ಖಚಿತ ಪಡಿಸಿಕೊಳ್ಳಲು ಭಗತ್ ಗುಂಡು ಹಾರಿಸಿದರು.
ಭಗತ್‍ಸಿಂಗ್ ಮತ್ತು ರಾಜಗುರು ಅಲ್ಲಿಂದ ತಪ್ಪಿಸಿಕೊಂಡು ಡಿ.ಎ.ವಿ. ಕಾಲೇಜಿನತ್ತ ಓಡಿದರು. ಇವರ ರಕ್ಷಣೆಗೆ ಬಂದಿದ್ದ ಆeóÁದರು ಇವರೊಂದಿಗಿದ್ದರು. ಮೂವರೂ, ಏನೂ ನಡೆದೇ ಇಲ್ಲವೇನೋ ಎಂಬಂತೆ ಶಾಂತವಾಗಿ ತಾವು ಸೈಕಲ್ ನಿಲ್ಲಿಸಿದ ಕಡೆ ಹೋಗಿ ಅದನ್ನು ಹತ್ತಿಕೊಂಡು ತಮ್ಮ ಮನೆಗೆ ಹಿಂತಿರುಗಿದರು.
ಸ್ವಲ್ಪ ಹೊತ್ತಿನಲ್ಲಿ ನಗರದ ಎಲ್ಲೆಡೆಯಲ್ಲಿಯೂ ಎಚ್‍ಎಸ್‍ಆರ್‍ಎ ಭಿತ್ತಿಪತ್ರಗಳು ಕಾಣಿಸಿಕೊಂಡವು. 
“ಜೆ.ಪಿ.ಸ್ಯಾಂಡರ್ಸ್ ಸಾವು: ಲಾಲಾಜಿಯವರ ಹತ್ಯೆಗೆ ಪ್ರತೀಕಾರ”
“ಸಾಮಾನ್ಯ Police ಅಧಿಕಾರಿಯೊಬ್ಬ ಹಿಂದೂಸ್ಥಾನದ ಮುನ್ನೂರು ಮಿಲಿಯನ್ ಜನರ ಪ್ರೀತಿಗೆ ಪಾತ್ರರಾದ, ಹಿರಿಯರಾದ ಲಾಲಾಜಿಯವರ ಮೈಮುಟ್ಟುವಷ್ಟು ಮತ್ತು ಅವರ ಸಾವಿಗೆ ಕಾರಣನಾಗುವಷ್ಟು ನೀಚತನಕ್ಕೆ ಇಳಿಯುತ್ತಾನೆಂದು ಊಹಿಸಿಕೊಳ್ಳುವುದೇ ಅಸಾಧ್ಯ. ರಾಷ್ಟ್ರದ ರಾಷ್ಟ್ರೀಯತೆಯ ಮೇಲೆ ಬಿದ್ದ ಹೊಡೆತಗಳು ನಮ್ಮ ದೇಶದ ಯುವಜನರ ಸ್ಥೈರ್ಯಕ್ಕೆ ಸವಾಲನ್ನೊಡ್ಡಿದೆ. ಇಡೀ ಪ್ರಪಂಚಕ್ಕೆ ತಿಳಿಯಲಿ. ಭಾರತವಿನ್ನೂ ಬದುಕಿದೆ, ಭಾರತೀಯ ಯುವಜನರ ರಕ್ತವಿನ್ನೂ ಸಂಪೂರ್ಣವಾಗಿ ತಣ್ಣಗಾಗಿಲ್ಲ, ಈಗಲೂ ಸಹ ಅವರು ತಮ್ಮ ಜೀವವನ್ನು ಬಲಿದಾನ ಮಾಡಬಲ್ಲರು.
“ಕ್ರಾಂತಿ ಚಿರಾಯುವಾಗಲಿ”
“ವ್ಯಕ್ತಿಯ ಸಾವಿಗಾಗಿ ನಮಗೆ ವಿಷಾದವಿದೆ. ಆದರೆ ವಿಶ್ವದ ಅತ್ಯಂತ ಅಮಾನವೀಯ ನಿರಂಕುಶ ಸರ್ಕಾರದ ಪ್ರತಿನಿಧಿಯಾದ ವ್ಯಕ್ತಿ ಸತ್ತಿದ್ದಾನೆ. ಅತ್ಯಂತ ಕ್ರೂರವಾದ, ಹೀನವಾದ ಮತ್ತು ತುಚ್ಛವಾದ ಸಂಸ್ಥೆಯೊಂದರ ಪ್ರತಿನಿಧಿ ಸತ್ತಿದ್ದಾನೆ. ಮಾನವನ ರಕ್ತಪಾತಕ್ಕಾಗಿ ವಿಷಾದವಿದೆ. ಆದರೆ ಕ್ರಾಂತಿಯಲ್ಲಿ ವ್ಯಕ್ತಿಯ ಬಲಿ ಅನಿವಾರ್ಯ.” 
“ಕ್ರಾಂತಿ ಚಿರಾಯುವಾಗಲಿ.”
ಹತ್ಯೆಯ ನಂತರ ಅವರು ಕೈ ಹಾಕಿದ ಯೋಜನೆ  ಬ್ರಿಟಿಶ್ ಸರ್ಕಾರದ ಡಿಫೆನ್ಸ್ ಆಕ್ಟ್ ಅನ್ನು ವಿರೋಧಿಸಿ ‘ಅಸೆಂಬ್ಲಿಯಲ್ಲಿ ಬಾಂಬ್ ಹಾಕುವುದು,ಮತ್ತು ಪೊಲೀಸರಿಗೆ ಭಗತ್ ಸಿಂಗ್ ಶರಣಾಗುವುದು!’. ಭಗತ್ ಸಿಂಗ್ ಏಕೆ ಅಲ್ಲಿ ಬಾಂಬ್ ಹಾಕಬೇಕು ಮತ್ತೆ ಶರಣಾಗಬೇಕು ಎಂದು ಉಳಿದ ಕ್ರಾಂತಿಕಾರಿಗಳು ಕೇಳಿದ್ದಕ್ಕೆ ಅವನು ಹೇಳಿದ್ದು “ಕಿವುಡರಿಗೆ ಕೇಳಿಸುವಂತೆ ಮಾಡಲು ಭಾರಿ ಸದ್ದನ್ನೇ ಮಾಡ ಬೇಕು.ಹಾಗೆ ಮುದುಡಿ ಮಲಗಿರುವ ದೇಶದ ಜನರನ್ನ ಕ್ರಾಂತಿಯ ಹವಿಸ್ಸಿನಿಂದ ಬಡಿದ್ದೆಬ್ಬಿಸ ಬೇಕು”. ಹಾಗೆ ಭಗತ್ನೊಂದಿಗೆ ಅಲ್ಲಿ ಶರಣಾದ ಮತ್ತೊಬ್ಬ ಕ್ರಾಂತಿಕಾರಿ ಭಟುಕೇಶ್ವರ್ ದತ್ತ. ಆ ನಂತರ ಬ್ರಿಟಿಶ್ ಸರ್ಕಾರಕ್ಕೆ  ಸ್ಯಾನ್ದರ್ಸ್ನ ಹತ್ಯೆಯ ರೂವಾರಿ ಭಗತ್ ಅನ್ನುವುದನ್ನು ತಿಳಿಯಿತು. ಉಳಿದ ಎಲ್ಲ ಸಂಗಡಿಗರ ಬಂಧನವೂ ಆಯಿತು.
~ಜೈಲಿನ ಕೋಣೆಯಲ್ಲಿ ಭಗತ್ ಸಿಂಗ್  ಆಕಡೆಯಿಂದ ಈಕಡೆಗೆ ನಡೆದಾಡುತ್ತಾ ಇರುತ್ತಾನೆ. ಭಗತ್ ಸಿಂಗ್ ತಾಯಿ. ಅಲ್ಲಿಗೆ ಬರುತ್ತಾರೆ ತಾಯಿ ಮಗನ ಮದ್ಯೆ ಕಬ್ಬಿಣದ  ಸರಳುಗಳಿವೆ
ತಾಯಿ : ಕಬ್ಬಿಣದ ಸರಳಿನ ಆಚೆ  [ಅಳುತ್ತಾ ದುಃಖದಿಂದ] ಮಗನೆ ಭಗತ್ ನಿನಗೆ ಮರಣದಂಡನೆಯೇ? ಅಯ್ಯೋ…… [ಎಂದು ರೋಧಿಸುತ್ತಾಳೆ] ರಾಜ್ ಗುರು, ಸುಖ್ ದೇವ್ ಸಹ ಗಲ್ಲಿಗೇರುತ್ತಾರೆ…… ಅಯ್ಯೋ….ಮಗನೇ…… [ಎಂದು ರೋಧಿಸುತ್ತಾಳೆ].
ಭಗತ್ ಸಿಂಗ್ : ಕಬ್ಬಿಣದ ಸರಳಿನ ಒಳಗೆ ಜೈಲಿನ ಕೋಣೆಯಲ್ಲಿಆಕ್ಷೇಪಿಸುತ್ತಾ ರೋಷದಿಂದ ] ಅಮ್ಮ……. ಸ್ವಾತಂತ್ರ್ಯ ಹೋರಾಟಕ್ಕೆಂದೇ ನಿನಗೆ ಜನ್ಮ ನೀಡಿದ್ದೇನೆ ಮಗನೆ, ದೇಶಪ್ರೇಮವನ್ನೇ ನನ್ನ ಎದೆ ಹಾಲಾಗಿ ನಿನಗೆ ಕುಡಿಸಿದ್ದೇನೆ, ಭಾರತ ಮಾತೆಯ ಸೆರೆಬಿಡಿಸಲೆಂದೇ ಗರ್ಭಧರಿಸಿದ್ದೇನೆ, ಸ್ವಾತಂತ್ರ್ಯದ ಬಲಿಪೀಠದಲ್ಲಿ ಬಲಿಯಾಗಲೆಂದೇ ನವ ಮಾಸ ಹೊತ್ತು ಹೆರಿಗೆ ನೋವು ಸಹಿಸಿ ಹೆತ್ತಿದ್ದೇನೆ, ಹೋರಾಡು ಮಗನೆ ಹೋರಾಡು ದೇಶಕ್ಕಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡು ಎಂದು ಹೇಳಿ ನನ್ನ ಎದೆಯಲ್ಲಿ ಹೋರಾಟದ ಕಿಚ್ಚು ಹಚ್ಚಿದ ವೀರಮಾತೆಯಾದ ನೀನು ನನ್ನ ಮರಣದಂಡನೆ ಕೇಳಿ ಕಣ್ಣೀರು ಸುರಿಸುತ್ತಿರುವುದು ಸರಿಯೇ? ಹೇಳಮ್ಮ ಹೇಳು…
ತಾಯಿ : [ನಸು ನಗುತ್ತಾ ಆಕ್ರೋಶಗೊಳ್ಳುತ್ತಾ] ಹೌದು ಮಗನೆ, ಹೌದು, ಸ್ವಾತಂತ್ರ್ಯ ಹೋರಾಟಕ್ಕೆಂದೆ ನಾ ನಿನಗೆ ಜನ್ಮ ನೀಡಿದ್ದೇನೆ. ದೇಶಪ್ರೇಮವನ್ನೇ ನನ್ನ ಎದೆ ಹಾಲಾಗಿ ಕುಡಿಸಿದ್ದೇನೆ. ಭಾರತ ಮಾತೆಯ ಸೆರೆಬಿಡಿಸಲೆಂದೆ ಗರ್ಭಧರಿಸಿದ್ದೇನೆ. ಸ್ವಾತಂತ್ರ್ಯದ ಬಲಿಪೀಠದಲ್ಲಿ ಬಲಿಯಾಗಲೆಂದೆ ನಿನ್ನ ನವಮಾಸ ಹೊತ್ತು ಹೆರಿಗೆ ನೋವು ಸಹಿಸಿ ಹೆತ್ತಿದ್ದೇನೆ. ಹೋರಾಡು ಮಗನೆ ಹೋರಾಡು ದೇಶಕ್ಕಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡು ಅಂಜಬೇಡ, ಅಳುಕಬೇಡ, ಸಾವಿಗೆ ನೀ ಹೆದರಬೇಡ. ದೇಶಕ್ಕಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ಸಾಯುವ ಅವಕಾಶ ನಿನಗೆ ಸಿಕ್ಕಿದೆ ಸ್ವಾತಂತ್ರ್ಯ ವೀರನಾಗಿ ಸಾಯಿ ಸಂತೋಷವಾಗಿ ಸಾಯಿ ನನ್ನ ಕರುಳ ಬಳ್ಳಿ ವಿರೋಚಿತವಾಗಿ ದೇಶಕ್ಕಾಗಿ ಸಾಯಲಿ.ಆದರೆ ಮಗನೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಸಾಯಲು ನನಗೆ ಇನ್ನೊಬ್ಬ ಮಗನಿಲ್ಲವಲ್ಲ ಎಂದು ದುಃಖಿಸುತ್ತಿದ್ದೇನೆ ಅಷ್ಟೆ. ಅಯ್ಯೋ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಸಾಯಲು ನನಗೆ ಇನ್ನೊಬ್ಬ ಮಗನಿಲ್ಲವಲ್ಲ ಗಾಂಧಾರಿಯಂತೆ ನೂರು ಮಕ್ಕಳಿಗೆ ಜನ್ಮನೀಡಲು ಸಾಧ್ಯವಾಗಿದ್ದರೇ ನೂರು ಮಕ್ಕಳನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಸಾಯಲು ಕಳುಹಿಸುತ್ತಿದ್ದೆ.
[ಆನಂದ ಭಾಷ್ಪದೊಂದಿಗೆ] ಅಮ್ಮ ನಿನ್ನಂಥ ವೀರಮಾತೆಯ ಗರ್ಭದಲ್ಲಿ ಜನಿಸಿದ ನಾನೇ ಧನ್ಯ. ಭಾರತ ಮಾತೆಯ ಮಡಿಲಲ್ಲಿ ಸಾಯುವ ನಾನೇ ಧನ್ಯ. ಅಮ್ಮ   ನನ್ನಂಥ ಇನ್ನೊಬ್ಬ ಮಗ ಹುಟ್ಟಬೇಕಾದರೆ ನಿನ್ನಂಥ ತಾಯಿಯೇ ಇರಬೇಕು. ನಿನ್ನಂಥ ವೀರಮಾತೆಯ ಗರ್ಭದಲ್ಲಿ ಮಾತ್ರ ನನ್ನಂಥ ಮಗ ಹುಟ್ಟಲು ಸಾಧ್ಯ, ಸ್ವಾರ್ಥಿಗಳ ಗರ್ಭದಲಲ್ಲ.
ಎಲ್ಲ ಆರೋಪಗಳು ಸಾಬಿತಾದ ಮೇಲೆ ಭಗತ್ ಸಿಂಗ್, ರಾಜ್ ಗುರು, ಸುಖ್ದೇವ್ ಅವರಿಗೆ 1931ರ ಮಾರ್ಚ್ 23ರನ್ದು ಮರಣದಂಡನೆ ಶಿಕ್ಷೆ ವಿಧಿಸಲಾಯಿತು. ಇದನ್ನ ವಿರೋಧಿಸಿ ಹಲ ಹೋರಾಟಗಳು, ಮನವಿ ಪತ್ರಗಳು, ಸಹಿ ಸಂಗ್ರಹಣೆ ಎಲ್ಲ ನಡೆದವು ಆದರೆ ಯಾವುದು ಪ್ರಯೋಜನಕ್ಕೆ ಬರಲಿಲ್ಲ.
ಭಗತ್ ಸಿಂಗ್ ಅವರ ತಂದೆ ಕಿಶನ್ ಸಿಂಗ್ ಅವರು ಬ್ರಿಟಿಷರಿಗೆ ಶಿಕ್ಷೆಯನ್ನ ರದ್ದು ಪಡಿಸುವಂತೆ ಮನವಿ ಮಾಡಿದಾಗ ಖುದ್ದು ಭಗತ್ ಸಿಂಗ್ “ನಾನು ಬದುಕುವುದಕ್ಕಿಂತ ಬಲಿದಾನ ಮಾಡುವುದರಿಂದಲೇ ಬ್ರಿಟಿಶ್ ಸಾಮ್ರಾಜ್ಯದ ಪತನವಾಗುತ್ತದೆ” ಅಂದವನೇ ಆ ಪತ್ರವ ಹಿಂಪಡೆಯುವಂತೆ ಮಾಡಿದ್ದ. ಇನ್ನು ಭಗತ್ ಹಾಗು ಸಂಗಡಿಗರ ಶಿಕ್ಷೆಯನ್ನ, ಗಾಂಧೀಜಿಯವರು ‘ಗಾಂಧೀ-ಇರ್ವಿನ್’ ಒಪ್ಪಂದದ ಸಮಯದಲ್ಲಿ ಪಟ್ಟು ಹಿಡಿದು ಕುಳಿತಿದ್ದರೆ ತಪ್ಪಿಸ ಬಹುದಿತ್ತು ಅನ್ನುವ ಮಾತುಗಳಿವೆ. ಆ ಬಗ್ಗೆ ಹಲವು ವಿವಾದಗಳು ಸಮರ್ಥನೆಗಳು ಇವೆ. ಕ್ರಾಂತಿಕಾರಿಗಳ ಪರವಾಗಿರುವವರು ‘ಗಾಂಧೀಜಿ ಅಂತ ಪ್ರಯತ್ನವನ್ನೇ ಮಾಡಲಿಲ್ಲ’ ಅಂದರೆ, ಗಾಂಧೀ ಪರವಾದವರು “ಗಾಂಧೀಜಿ ಸರ್ವ ಪ್ರಯತ್ನವನ್ನು ಮಾಡಿದ್ದರು ಆದರೆ ಸಫಲರಾಗಲಿಲ್ಲ” ಅನ್ನುತ್ತಾರೆ. 
ಮರಣದಂಡನೆಯ ದಿನ :
ನನ್ನ ದೇಶಬಾಂಧವರಿಗೆ ಹೇಳಿ ಭಗತ್ ಸಿಂಗ್ ಮತ್ತೊಮ್ಮೆ ಹುಟ್ಟಿ ಬಂದು ಬ್ರಿಟೀಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯಗಳಿಸುತ್ತಾನೆ ಎಂದು. ಕೊಳೆಯಾದ ಬಟ್ಟೆಯನ್ನು ಬದಲಾಯಿಸಿ ಬೇರೆ ಬಟ್ಟೆಯನ್ನು ಹಾಕಿಕೊಳ್ಳುವಂತೆ ಈ ಶರೀರವನ್ನು ಬದಲಾಯಿಸಿ ಮತ್ತೊಂದು ಶರೀರವನ್ನು ಧರಿಸಿ ಮತ್ತೆ ಹುಟ್ಟಿ ಬರುತ್ತೇನೆ, ಈ ದೇಶಕ್ಕೆ ಸ್ವಾತಂತ್ರ್ಯ ತರುತ್ತೇನೆ.
ಭಗತ್ ಸಿಂಗ್ :     [ನಗುತ್ತಾ ಎದಿರುಗಿರುವ ಅಧಿಕಾರಿಗಳೆಡೆಗೆ ನೋಡುತ್ತಾ] ನೀವೇ ಭಾಗ್ಯಶಾಲಿಗಳು ಭಾರತದ ಕ್ರಾಂತಿಕಾರಿಗಳು ತಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಮೃತ್ಯುವನ್ನು ಎಷ್ಟು ಸಂತೋಷದಿಂದ ನಗುತ್ತಲೆ ಸ್ವಾಗತಿಸಿ ನೇಣಿನ ಹಗ್ಗವನ್ನು ಚುಂಬಿಸಿ ಸಾಯುವುದನ್ನು ನೀವು ಕಣ್ಣಾರೆ ನೋಡುತ್ತಿದ್ದೀರಿ.
ರಾಜ್ ಗುರು : [ನಗುತ್ತಲೇ ಅಧಿಕಾರಿಗಳನ್ನು ನೋಡಿ]ನನ್ನ ದೇಶಬಾಂಧವರಿಗೆ ಹೇಳಿ, ಸಾವಿಗೆ ಹೆದರದೆ ಧೈರ್ಯವಾಗಿ ಸಂತೋಷದಲ್ಲೇ ಕಟ್ಟಕಡೆಯ ಘಳಿಗೆಯಲ್ಲೂ ದೇಶದ ಸ್ವಾತಂತ್ರ್ಯವಾಗಬೇಕು ಎನ್ನುತ್ತಲೇ ನೇಣುಗಂಬವೇರಿದ ರಾಜ್ ಗುರು ಎಂದು.
ಸುಖ್ ದೇವ್ :  ನನ್ನ ದೇಶಬಾಂಧವರಿಗೆ ಹೇಳಿ ದೇಶದ ಸ್ವಾತಂತ್ರ್ಯವೇ ಸುಖ್ ದೇವನ ಕೊನೆಯ ಆಸೆ ಅಂತ.
ಭಗತ್ ಸಿಂಗ್ : ನನ್ನ ದೇಶಬಾಂಧವರಿಗೆ ಹೇಳಿ ಭಗತ್ ಸಿಂಗ್ ಮತ್ತೊಮ್ಮೆ ಹುಟ್ಟಿ ಬಂದು ಬ್ರಿಟೀಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯಗಳಿಸುತ್ತಾನೆ ಎಂದು. ಕೊಳೆಯಾದ ಬಟ್ಟೆಯನ್ನು ಬದಲಾಯಿಸಿ ಬೇರೆ ಬಟ್ಟೆಯನ್ನು ಹಾಕಿಕೊಳ್ಳುವಂತೆ ಈ ಶರೀರವನ್ನು ಬದಲಾಯಿಸಿ ಮತ್ತೊಂದು ಶರೀರವನ್ನು ಧರಿಸಿ ಮತ್ತೆ ಹುಟ್ಟಿ ಬರುತ್ತೇನೆ, ಈ ದೇಶಕ್ಕೆ ಸ್ವಾತಂತ್ರ್ಯ ತರುತ್ತೇನೆ
[ಮೂವರು ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಎನ್ನುತ್ತಾ ನೇಣುಗಂಬದ ಹುರುಳನ್ನು ಚುಂಬಿಸಿ ಕೊರಳಿಗೆ ಹಾಕಿಕೊಳ್ಳುತ್ತಾರೆ. ಅಧಿಕಾರಿಗಳು ಹಗ್ಗವನ್ನು ಎಳೆಯುತ್ತಾರೆ ಮೂವರು ಹುತಾತ್ಮರಾಗುತ್ತಾರೆ]
ಭಗತ್ ಸಿಂಗ್, ಸುಖ್ ದೇವ್, ರಾಜ್ ಗುರುವಿನ ಮರಣದಂಡನೆಯಾದ ಎರಡು ದಿನಗಳ ನಂತರ ಕಾಂಗ್ರೇಸ್ ಅಧಿವೇಶನ 1931 ಮಾರ್ಚ್ ತಿಂಗಳಲ್ಲಿ ಕರಾಚಿಯಲ್ಲಿ ನಡೆಯುತ್ತಿರುತ್ತದೆ. ಅದಿವೇಶನಕ್ಕೆ ಗಾಂಧೀಜಿ ರೈಲಿನಲ್ಲಿ ಬರುತ್ತಾರೆ. ಕರಾಚಿಯ ರೈಲು ನಿಲ್ದಾಣದಲ್ಲಿ ಸಾವಿರಾರು ಯುವಕರು ಕಪ್ಪು ಬಾವುಟ ಹಿಡಿದು ನಿಂತಿರುತ್ತಾರೆ. ಗಾಂಧೀಜಿ ರೈಲಿನಿಂದ ಇಳಿಯುತ್ತಿದ್ದಂತೆ ಸಾವಿರಾರು ಯುವಕರು ಕಪ್ಪು ಬಾವುಟ ಪ್ರದರ್ಶಿಸಿ
ಯುವನಾಯಕ : [ಆಕ್ರೋಶದಿಂದ ಕಪ್ಪುಬಾವುಟ ತೋರಿಸುತ್ತಾ] ಗಾಂಧೀಜಿ…….
ಸಾವಿರಾರು ಯುವಕರು : [ಆಕ್ರೋಶದಿಂದ ಕಪ್ಪು ಬಾವುಟ ತೋರಿಸುತ್ತಾ] ಹಿಂದಕ್ಕೆ ಹೋಗಿ……..
ಯುವನಾಯಕ : ಗಾಂಧೀಜಿಯವರ ಒಪ್ಪಂದ
ಯುವನಾಯಕ : ಭಗತ್ ಸಿಂಗ್ ನನ್ನು ಗಲ್ಲಿಗೇರಿಸಿತು [ಎಂದು ಆಕ್ರೋಶದಿಂದ ಘೋಷಣೆ ಕೂಗುತ್ತಾರೆ].
ಗಾಂಧೀಜಿ : [ನಗುತಾ ಶಾಂತಚಿತ್ತದಿಂದ] ನನ್ನ ವಿರುದ್ಧ ಘೋಷಣೆ ಕೂಗುವ ಹಕ್ಕು ನಿಮಗಿದೆ ಆದರೆ ನಾನು ನನ್ನ ತತ್ವ ಸಿದ್ಧಾಂತವನ್ನು ಪಾಲಿಸಿದ್ದೇನೆ.
ಯುವನಾಯಕ1 : ನೀವು ಇರ್ವಿನ್ ರೊಂದಿಗೆ ಒಪ್ಪಂದಮಾಡಿಕೊಳ್ಳುವಾಗ ಭಗತ್ ಸಿಂಗ್ ಕ್ರಾಂತಿಕಾರಿಗಳ ಮರಣದಂಡನೆಯನ್ನು ರದ್ದುಪಡಿಸುವಂತೆ ಆಗ್ರಹಿಸಲಿಲ್ಲ ಏಕೇ?
ಗಾಂಧೀಜಿ : ಹಾಗೆಮಾಡಲು ಸಾಧ್ಯವಿರಲಿಲ್ಲ.
ಯುವನಾಯಕ1 : ಹಾಗಾದರೆ ಭಗತ್ ಸಿಂಗ್ ಉಳಿಸಲು ನೀವು ಏನು ಮಾಡಿದ್ದೀರಿ?
ಗಾಂಧೀಜಿ : ಶಾಸನಬದ್ಧ ಹೋರಾಟಮಾಡಬೇಕು ಆದರೆ ನಿಮಗೆ ಭಗತ್ ಸಿಂಗ್ ಮಾಡಿದ್ದು ನಿಮಗೆ ತಪ್ಪೇನಿಸಲಿಲ್ಲವೇ?
ಯುವನಾಯಕ : ಇದು ಉತ್ತರವಲ್ಲ – ನೀವು ಭಗತ್ ಸಿಂಗ್ ಹಾಗೂ ಕ್ರಾಂತಿಕಾರಿಗಳನ್ನು ಅಸಡ್ಡೆ ಮಾಡಿದ್ದೀರಿ. ಹಾಗಾದರೆ ನೀವು ಮಾಡಿದ್ದು ಮಾತ್ರ ಸರಿಯಾದ ಹೋರಾಟವೇ?
ಯುವನಾಯಕ2 : [ಆಕ್ರೋಶದಲ್ಲಿ] ಆರ್ಯ ಸಮಾಜದ ಸ್ವಾಮಿ ದಯಾನಂದ ಸರಸ್ವತಿಯವರನ್ನು ವಿಷಕೊಟ್ಟು ಕೊಲೆಮಾಡಿದ ಮತಾಂಧನಿಗೆ ಗಲ್ಲುಶಿಕ್ಷೆಯನ್ನು ರದ್ದುಪಡಿಸಿ ಅವನನ್ನು ಕ್ಷಮಿಸುವಂತೆ ಉಪವಾಸಮಾಡಿದ್ದ ನೀವು ಭಗತ್ ಸಿಂಗ್ ಮತ್ತು ಕ್ರಾಂತಿಕಾರಿಗಳ ಗಲ್ಲುಶಿಕ್ಷೆಯನ್ನು ರದ್ದುಪಡಿಸುವಂತೆ ಏಕೆ ಹೋರಾಡಲಿಲ್ಲ?
ಗಾಂಧೀಜಿ : [ದಿಗ್ಬ್ರಮೆಗೊಂಡು] ಅದು…… ಅದು…… [ನಿರುತ್ತರರಾಗುತ್ತಾರೆ]
ಭಗತ್ ಸಿಂಗ್, ರಾಜ್ ಗುರು, ಸುಖ್ ದೇವ್ ಗಲ್ಲಿಗೇರಿಸಿದ ಎರಡು ದಿನದ ನಂತರ 1931 ಮಾರ್ಚ್ ತಿಂಗಲ್ಲಿ ಕಾಂಗ್ರೇಸ್ ಅಧಿವೇಶನ ಕರಾಚಿಯಲ್ಲಿ ನಡೆಯುತ್ತದೆ. ಒಂದು ವಿಪರ್ಯಾಸವೆಂದರೆ ಅಧಿವೇಶನದಲ್ಲಿ ಭಗತ್ ಸಿಂಗ್ ಮರಣದಂಡನೆಯ ಬಗ್ಗೆ ತೀವ್ರವಾದ ಆಕ್ಷೇಪವನ್ನು ಪರಿಣಾಮಕಾರಿಯಾಗಿ ಎತ್ತದೆ ಅಸಡ್ಡೆಮಾಡಿದ ಕಾಂಗ್ರೇಸ್ ಗೆ ಭಗತ್ ಸಿಂಗ್ ಹಾಗೂ ಕ್ರಾಂತಿಕಾರಿಗಳ ಶಾಪ ಸದಾಕಾಲಕ್ಕೂ ಇರುತ್ತದೆ.
ತನ್ನ ಸ್ನೇಹಿತರಾದ ಸುಖದೇವ ಮತ್ತುರಾಜಗುರುವಿನೊಡನೆ ಭಗತ್ ಸಿಂಗ್ ಮಾರ್ಚ್ 23, 1931ರಂದು “ಇನ್‍ಕ್ವಿಲಾಬ್ ಜಿಂದಾಬಾದ್” ಎನ್ನುತ್ತಾ ನಗುನಗುತ್ತಾ ನೇಣುಗಂಬವೇರುತ್ತಾ ನುಡಿದಸಾಲುಗಳು:
ಮೇರಾ ರಂಗ್ ದೇ ಬಸಂತೀ ಚೋಲಾ…ಮೇರಾ ರಂಗ್ ದೇ……..
ಇಸೀ ರಂಗ್ ಮೇ ರಂಗ್ ಶಿವಾ ನೇ, ಮಾಕಾ ಬಂಧನ್ ಖೋಲಾ…!
(ನನ್ನ ಬಣ್ಣವನ್ನು ವೀರ ಶಿವಾಜಿಯ ರಕ್ತದಬಣ್ಣವಾಗಿ ಬದಲಿಸು.. ನನ್ನ ತಾಯಿಯನ್ನು ಬಂಧನದ ಸಂಕೋಲೆಗಳಿಂದ ಮುಕ್ತಗೊಳಿಸು..!)
(ಸತ್ತು ಬದುಕುವುದೇ ಹೇಗೆಂದು ತೋರಿಸಲು ಹೊರಟೆವು ನಿನ್ನ ಮಕ್ಕಳು,ತಾಯಿ ನಿನ್ನ ಮಾನ ಉಳಿಸಲು ಇಂದು) ಎಂದು ಹಾಡುತ್ತ ಹೊರಟವನು ‘ಸತ್ತು ಬದುಕುವುದು ಹೇಗೆ ಅನ್ನುವುದನ್ನ ಜಗತ್ತಿಗೆ ಹೇಳಿ ಕೊಟ್ಟು ಹೋದ’ ಆ ಅಮರ ಸೇನಾನಿಗಳ  ನೆನಪಿಗೆ ನನ್ನ ನುಡಿ ನಮನ.
ಇಂಕ್ವಿಲಾಬ್ ಜಿಂದಾಬಾದ್
JAI HIND
Mahesh Hiremath
(ಸಾಯುವುದು ದೊಡ್ಡ ವಿಷಯವಲ್ಲ. ಯಾವುದಕ್ಕಾಗಿ ಸತ್ತೆ ಎಂಬುದರ ಮೇಲೆ ನಿನ್ನ ಬದುಕಿನ ಯಶಸ್ಸನ್ನು ಅಳೆಯಲಾಗುತ್ತದೆ. ಹುಡುಗಿ ಸಿಗಲಿಲ್ಲವೆಂದು- ಹಣ ಮಾಡಲಿಕ್ಕಾಗಲಿಲ್ಲವೆಂದು ಸತ್ತವರು ಸುದ್ದಿಯಾಗುತ್ತಾರೆ. ಇವೆಲ್ಲವನ್ನು ಮೀರಿದ ಉದ್ದೇಶವೊಂದಕ್ಕೆ ಸತ್ತ ಕೆಲವರು ಮಾತ್ರ ಇತಿಹಾಸವಾಗುತ್ತಾರೆ)

loading...

Post a Comment

Powered by Blogger.