Veerakesari 23:11
ಪಿಎಫ್ಐ ಕಾರ್ಯಕರ್ತನೊಬ್ಬ ಮಂಗಳೂರು ಪೋಲೀಸರಿಗೆ ಜೀವ ಬೆದರಿಕೆ ಹಾಕಿರುವ ಪೋಸ್ಟ್ ವೈರಲ್ ಆಗಿದೆ. ಪಿಎಫ್ಐ ಕಾರ್ಯಕರ್ತ 'ಹರ್ಷದ್ ಶಾ' ಎಂಬಾತನೇ ತನ್ನ ಫೇಸ್ಬುಕ್ ವಾಲ್ನಲ್ಲಿ " ಜೇಣಿನಗೂಡಿಗೆ ಕಲ್ಲು ಎಸೆದ ನಾಯಿ ಪೋಲೀಸರು, ಜೇಣಿನ ಪರಕ್ರಮ ಅರಿಯದ ಖಾಕಿ ಚಡ್ಡಿಗಳು. ಖಂಡಿತವಾಗಿಯೂ ಇದು ಮುಕ್ತಾಯವಲ್ಲ ಪ್ರಾರಂಭ. ಎಚ್ಚರಿಕೆ ಚಡ್ಡಿ ಪೋಲೀಸರೆ, ಖಾಕಿ ಬಿಚ್ಚಿಟ್ಟು ಬನ್ನಿ ಆವಾಗ ತಿಳಿಯುತ್ತೆ ನಿಮಗೆ ಉತ್ತಮ ಪಾಠ" ಎಂಬ ಅಡಿ ಬರಹದೊಂದಿಗೆ ಪೋಸ್ಟ್ ಹಾಕಿದ್ದಾನೆ.
ಕೊಲೆ ಆರೋಪಿ, ರೌಡಿ ಶೀಟರ್ ಪಿಎಫ್ಐ ಕಾರ್ಯಕರ್ತ ಅಹ್ಮದ್ ಖುರೇಶಿ ಎಂಬಾತನನ್ನು ಮಂಗಳೂರು ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದನ್ನು ವಿರೋಧಿಸಿ, ಆತನ ಮೇಲೆ ಪೋಲೀಸರು ದೌರ್ಜನ್ಯ ನಡೆಸಿದ್ದಾರೆ ಆತನ ಕಿಡ್ನಿ ನಿಷ್ಕ್ರಿಯವಾಗಿದೆ ಎಂದು ಸುಳ್ಳುಸುದ್ದಿ ಹಬ್ಬಿಸಿ ರಾಜ್ಯದ ವಿವಿದೆಡೆಗಳಿಂದ ಪಿಎಫ್ಐ ಭಯೋತ್ಪಾದಕ ಸಂಘಟನೆಯ ಗೂಂಡಾ ಕಾರ್ಯಕರ್ತರನ್ನು ಕರೆಸಿ ಮಂಗಳೂರಿನ ಪೋಲೀಸ್ ಆಯುಕ್ತರ ಕಛೇರಿಗೆ ಮುತ್ತಿಗೆ ಹಾಕಿ ಗಲಭೆ ಎಬ್ಬಿಸಲು ಯತ್ನಿಸಲಾಗಿತ್ತು.

ಹರ್ಷದ್ ಶಾ ಪೇಸ್ಬುಕ್ ವಾಲ್ :
ಇಷ್ಟೇ ಅಲ್ಲದೆ ಪೋಲೀಸರ ಮೇಲೆ ಕಲ್ಲುತೂರಾಟ ನಡೆಸಿದ ಕಾರಣ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೋಲೀಸರು ಕಲ್ಲುತೂರಾಟ ನಡೆಸಿದ ಪಿಎಫ್ಐ ಗೂಂಡಾಗಳಿಗೆ ಲಾಠಿ ರುಚಿ ತೋರಿಸಿ ಸ್ಥಳದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯಾಗಿದ್ದರು.
ಇದಾದ ನಂತರ ಇದೇ ಪಿಎಫ್ಐ ಭಯೋತ್ಪಾದಕರು ಊರ್ವ ಠಾಣೆ ಎಎಸ್ಐ ಐತಪ್ಪ ಹಾಗೂ ಬೆಳ್ಳಾರೆ ಠಾಣೆ ಎಸ್ಐ ಎಂ.ವಿ.ಚೆಲುವಯ್ಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪ್ರತೀಕಾರ ತೀರಿಸಿಕೊಂಡಿದ್ದರು. ಈಗ ಇದೇ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಉಳ್ಳಾಲ ನಿವಾಸಿ ಹರ್ಷದ್ ಶಾ ಎಂಬಾತ ತನ್ನ ಫೇಸ್ಬುಕ್ ವಾಲ್ನಲ್ಲಿ ಮಂಗಳೂರು ಪೋಲೀಸರ ಬಗ್ಗೆ ಅಪಮಾನಕರ ರೀತಿಯಲ್ಲಿ ಪೋಸ್ಟ್ ಹಾಕಿರೋದು ಅಷ್ಟೇ ಅಲ್ಲದೆ ಖಾಕಿ ಯೂನಿಫಾರಂ ಕಳಚಿ ಬನ್ನಿ ಪಾಠ ಕಲಿಸೋದಾಗಿ ಬೆದರಿಕೆಯನ್ನೂ ಹಾಕಿದ್ದಾನೆ.
ಈ ಪೋಸ್ಟ್ ಕೆಲ ಹಿಂದೂ ಸಂಘಟನೆ ಕಾರ್ಯಕರ್ತರ ಮೂಲಕ 'ವೀರಕೇಸರಿ' ಗೆ ಸಿಕ್ಕಿದ್ದು. ಈ ರೀತಿ ರಾಜಾರೋಷವಾಗಿ ಪೋಲೀಸರಿಗೆ ಜೀವ ಬೆದರಿಕೆ ಹಾಕುತ್ತಿರುವುದು ನೋಡಿದರೆ ಈ ಭಯೋತ್ಪಾದಕರಿಂದ ಮಂಗಳೂರಿನಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರಷ್ಟೇ ಅಲ್ಲ ಪೋಲೀಸರೂ ಸೇಫ್ ಅಲ್ಲ ಎಂದು ಮನವರಿಕೆಯಾಗುತ್ತದೆ. ಬಲ್ಲ ಮೂಲಗಳ ಪ್ರಕಾರ ನಾಳೆ (2-5-2017) ಪೋಲೀಸ್ ದೌರ್ಜನ್ಯದ ನೆಪವೊಡ್ಡಿ ಇದೇ ಗೂಂಡಾಗಳು ಮಂಗಳೂರು ಚಲೋ ಎಂಬ ಕಾರ್ಯಕ್ರಮ ನಡೆಸಲಿದ್ದು, ಈ ಕಾರ್ಯಕ್ರಮಕ್ಕೆ ಹೊರ ಜಿಲ್ಲೆ ಅಷ್ಟೇ ಅಲ್ಲದೆ ಕೇರಳದಿಂದಲೂ ಪಿಎಫ್ಐ ಗೂಂಡಾಗಳು ಬರೋ ಸಾಧ್ಯತೆಗಳಿದ್ದು ಹೆಚ್ಚಿನ ಭದ್ರತೆ ಕೈಗೊಳ್ಳಬೇಕಾದ ಅವಶ್ಯಕತೆ ಇದೆ.
ಈ ಹಿಂದೆ ಇದೇ ಪಿಎಫ್ಐ ಸಂಘಟನೆಯ ಕಾರ್ಯಕರ್ತ ಶಾಫಿ ಬೆಳ್ಳಾರೆ ಎಂಬಾತ ಹಿಂದೂ ಯುವತಿಯೊಬ್ಬಳ ಬಗ್ಗೆ ಮಾನ ಹಾನಿ ರೀತಿಯಲ್ಲಿ ಪೋಸ್ಟ್ ಹಾಕಿ ತನ್ನ ವಿಕೃತಿ ಮೆರೆದಿದ್ದ. ಆ ಸಂದರ್ಭದಲ್ಲಿ 'ವೀರಕೇಸರಿ' ಪೇಜ್ ಯುವತಿಯ ಬೆಂಬಲಕ್ಕೆ ನಿಂತು ಸ್ಥಳೀಯ ಹಿಂದೂ ಸಂಘಟನೆ ಮುಖಂಡರ ಗಮನಕ್ಕೆ ತಂದದ್ದೆವು. ಹಿಂದೂ ಸಂಘಟನೆ ಮುಖಂಡರು ಆ ಕಾಮುಕನ ವಿರುದ್ದ ಕೇಸು ದಾಖಲಿಸಿದ ತಕ್ಷಣ ಕಾರ್ಯ ಪ್ರವೃತ್ತರಾದ ಮಂಗಳೂರು ಪೋಲೀಸರು ವಿದೇಶದಲ್ಲಿ ಅವಿತುಕೊಂಡಿದ್ದ ಕಾಮುಕ ಶಾಫಿ ಬೆಳ್ಳಾರೆಯನ್ನು ಊರಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದರು. 
loading...

Post a Comment

Powered by Blogger.