ಉಡುಪಿ : ಗೋವುಗಳನ್ನು ರಕ್ಷಿಸಲು ಸಾಸ್ತಾನ ಮಿತ್ರರಿಂದ ವಿನೂತನ ಚಿಂತನೆ. ಬ್ರಹ್ಮಾವರದಲ್ಲಿ ಹಲವಾರು ಗೋವುಗಳು ರಸ್ತೆಯ ಮೇಲೆ ಮಲುಗೋದು ಗಮನಿಸಿದ ಸಾಸ್ತಾನ ಮಿತ್ರರು ಗೋ ಮಾತೆ ರಕ್ಷಣೆಯ ಅಳಿಲುಸೇವೆ ಮಾಡಿದ್ದಾರೆ. ರಸ್ತೆಯಲ್ಲಿ ರಾತ್ರಿಹೊತ್ತು ಅಡ್ಡಾಡೋ ಗೋವುಗಳನ್ನು ಗುರುತಿಸಿ ಅವುಗಳಿಗೆ “ರಿಪ್ಲೆಕ್ಟರ್ ಸ್ಟಿಕ್ಕರ್” ಗಳನ್ನು ಹಾಕಿದ್ದಾರೆ.ಈ ಮೂಲಕ ರಾತ್ರಿ ಹೊತ್ತು ವಾಹನದ ಬೆಳಕು ಗೋವುಗಳಿಗೆ ಅಳವಡಿಸಿರೋ ಸ್ಟಿಕ್ಕರ್ ಮೇಲೆ ಪ್ರತಿಫಲಿಸುವುದರಿಂದ ಗೋವುಗಳು ಇರುವುದು ವಾಹನ ಸವಾರರಿಗೆ ಕಾಣಿಸುತ್ತವೆ. ಇದರಿಂದ ಅಪಘಾತಗಳು ಕಡಿಮೆಯಾಗುತ್ತೆನ್ನಬಹುದು. ಗೋವಿನ ಜೊತೆ ವಾಹನ ಸವಾರನ ಪ್ರಾಣಾನು ಉಳಿಯುತ್ತೆ.
ಸಾಸ್ತಾನದ ಮಿತ್ರರಿಂದ ನಮ್ಮ ನಿಮ್ಮೆಲ್ಲರಿಗೆ ವಿನಂತಿ :
ನಮ್ಮಿಂದ ಬೇರೆಯವರು ಈ ಕಾರ್ಯ ಮಾಡಲಿ ಎನ್ನೋದೆ ನಮ್ಮ ಉದ್ದೇಶ. ಅಪಘಾತದಿಂದ ಗೋವುಗಳನ್ನು ರಕ್ಷಿಸೋಕೆ ಇದೊಂದು ಸುಲಭ ಉಪಾಯ “ರಿಫ್ಲೆಕ್ಟ್ ಸ್ಟಿಕರ್” ಅವುಗಳ ಕಾಲಿಗೆ, ಕೊಂಬಿಗೆ ಹಾಕುದರಿಂದ ಮುಂದೆ ಬರುವ ವಾಹನದ ಲೈಟ್ ಇಫೆಕ್ಟ್ ನಿಂದ ರಕ್ಷಿಸಬಹುದು ಅಫಘಾತ ತಡೆಯಬಹುದು, ನೀವು ನಿಮ್ಮ ಊರಲ್ಲಿ ಇದೇ ರೀತಿ ಮಾಡಬಹುದು.
ಸಾಸ್ತಾನದ ಮಿತ್ರರಿಂದ ನಮ್ಮ ನಿಮ್ಮೆಲ್ಲರಿಗೆ ವಿನಂತಿ :
ನಮ್ಮಿಂದ ಬೇರೆಯವರು ಈ ಕಾರ್ಯ ಮಾಡಲಿ ಎನ್ನೋದೆ ನಮ್ಮ ಉದ್ದೇಶ. ಅಪಘಾತದಿಂದ ಗೋವುಗಳನ್ನು ರಕ್ಷಿಸೋಕೆ ಇದೊಂದು ಸುಲಭ ಉಪಾಯ “ರಿಫ್ಲೆಕ್ಟ್ ಸ್ಟಿಕರ್” ಅವುಗಳ ಕಾಲಿಗೆ, ಕೊಂಬಿಗೆ ಹಾಕುದರಿಂದ ಮುಂದೆ ಬರುವ ವಾಹನದ ಲೈಟ್ ಇಫೆಕ್ಟ್ ನಿಂದ ರಕ್ಷಿಸಬಹುದು ಅಫಘಾತ ತಡೆಯಬಹುದು, ನೀವು ನಿಮ್ಮ ಊರಲ್ಲಿ ಇದೇ ರೀತಿ ಮಾಡಬಹುದು.
ಗೋವಿನ ಪರೋಪಕಾರ ಗುಣವೇ ಅವುಗಳಿಗೆ ದೋಷಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ನೀಡಿದೆ. ಆದ್ದರಿಂದಲೇ ಗೋವಿನ ಕಾರ್ಯ ನೋಡಿ ಪರೋಪಕಾರಾರ್ಥಾಯ ಇದಂ ಶರೀರಂ ಎನ್ನುವ ಮಾತು ಸಮಂಜಸ ಎನ್ನುವುದು ನಮ್ಮ ಭಾವನೆ.
ಹಿಂದು ಸಂಸ್ಕೃತಿಯಲ್ಲಿ ಗೋವಿನ ಮಹತ್ವ , ಹಿಂದೆ ಗೋವಿಲ್ಲದ ಮನೆಯಿರಲಿಲ್ಲ ಎಂದು ಹೆಮ್ಮೆಯಿಂದ ಹೇಳುವ ನಾವಿಂದು ಗೋವಿರುವ ಮನೆ ವಿರಳ ಎನ್ನುವ ವಿಷಾದದ ನುಡಿಯಾಡಬೇಕಿದೆ.
ಪ್ರಸ್ತುತ ಸಮಾಜದಲ್ಲಿ ಗೋವುಗಳನ್ನು ರಕ್ಷಣೆ ಮಾಡುತ್ತಾರೆ ಎನ್ನುವ ನಂಬಿಕೆಯ ಒಸರು ಬತ್ತಿಹೋಗಿದೆ. ದಿನದಿಂದ ದಿನಕ್ಕೆ ಹಲವಾರು ದನ-ಕರುಗಳು ಕಸಾಯಿಖಾನೆ ಪ್ರವೇಶ ಮಾಡುತ್ತಿವೆ ಇನ್ನೂ ಕೆಲವು ಗೋವುಗಳು ಅಪಘಾತದಿಂದ ಸಾವು ನೋವುಗಳು ಸಂಭವಿಸುತ್ತಿದೆ.
ಗೋವುಗಳ ರಕ್ಷಣೆಗೆ ನಮ್ಮ ಅಳಿಲಿನ ಸೇವೆ ಮುಖ್ಯವಾಗಿದೆ. ಗೋವುಗಳ ಮಹತ್ವ ತಿಳಿದುಕೊಂಡು ಅದನ್ನು ಮುಂದಿನ ಪೀಳಿಗೆಗೆ ತಿಳಿಸಿ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ.
ಗೋಮಾತೆಯ ರಕ್ಷಣೆ ನಮ್ಮಿಂದಾಗಬೇಕಿದೆ.ಗೋ ಮಾತೆಯನ್ನು ರಕ್ಷಿಸೋಣ, ಗೋವುಗಳನ್ನು ಉಳಿಸೋಣ ,ನಮ್ಮ ಜೊತೆ ಕೈ ಜೋಡಿಸಿ, ನೀವು ಈ ಕಾರ್ಯವನ್ನು ಮಾಡಿ
ಇತೀ ಸಾಸ್ತಾನ ಮಿತ್ರರು
ಸೇವೆ ಮಾಡಿದ್ದು ಹೆಸರಿಗಾಗಿ ಅಲ್ಲ ,Like, Comment ಗಿಂತ share ಮಾಡಿ.
ಸಾಸ್ತಾನ ಮಿತ್ರರು ಗೋವುಗಳಿಗೆ ಸ್ಟಿಕ್ಕರ್ ಅಂಟಿಸುತ್ತಿರುವುದು :




Post a Comment