Showing posts with label Gallery. Show all posts

Veerakesari 21:55
veerakesari.in
​ಆಕೆಯ ಹೆಸರು ವಿಸ್ಮಯ. ಬದುಕನ್ನು ವಿಸ್ಮಯದ ಕಣ್ಣಲ್ಲೇ ನೋಡುವ ಆಕೆಯ ಜೀವನ ಪ್ರೀತಿಯನ್ನು ಕಂಡೇ ಆಕೆಗೆ ಆ ಹೆಸರನ್ನಿಟ್ಟಿದ್ದಿರಬೇಕು. ಜನವರಿ 18 ರಂದು ಕೇರಳದ ಕಣ್ಣೂರಿನಲ್ಲಿ ಹತ್ಯೆಯಾದ ಸಂತೋಷ್ ಕುಮಾರ್ ಎಂಬ ಆರ್ ಎಸ್ ಎಸ್ ಅನುಯಾಯಿಯ ಮಗಳು ಈಕೆ.
ಪುಟ್ಟ ಕೈಗಳಲ್ಲಿ ಒಂದಷ್ಟು ಪ್ಲೆಕಾರ್ಡ್ ಹಿಡಿದು ನಿಂತಿರುವ ಈಕೆಯ ಚಿತ್ರವನ್ನು ಕಂಡರೆ ತಕ್ಷಣವೇ ಗುರ್ಮೆಹರ್ ಕೌರ್ ನೆನಪಾಗಬಹುದು. ಆದರೆ ಈಕೆಯ ಪ್ರಶ್ನೆಗೂ ಗುರ್ಮೆಹರ್ ಳ "ತನ್ನಪ್ಪನನ್ನು ಸಾಯಿಸಿದ್ದು ಪಾಕಿಸ್ಥಾನವಲ್ಲ, ಯುದ್ಧ" ಎನ್ನುವ ಹೇಳಿಕೆಗೂ ಹೋಲಿಸಲೂ ಆಗದಷ್ಟು ಅಂತರವಿದೆ.
ಆಕೆ ಹಿಡಿದ ಒಂದೊಂದು ಪ್ಲೆಕಾರ್ಡಿನಲ್ಲಿ ಬರೆದಿರುವ ಸಾಲಿನಲ್ಲಿ ಒಡಮೂಡಿದ ಭಾವಕ್ಕೆ ಸಾಂತ್ವನ ಹೇಳುವ ಚೈತನ್ಯ ಬಹುಶಃ ಯಾರಲ್ಲೂ ಇಲ್ಲ.
ಆಕೆ ಬರೆಯುತ್ತಾಳೆ...
ನಾನು ವಿಸ್ಮಯ. 8ನೇ ತರಗತಿ ಓದುತ್ತಿರುವ 12 ವರ್ಷದ ಹುಡುಗಿ. ಐಪಿ ಎಸ್ ಅಧಿಕಾರಿಯಾಗಿ ನನ್ನ ಬಡ ಊರನಲ್ಲಿ ಸೇವೆ ಸಲ್ಲಿಸೋದು ನನ್ನ ಕನಸು. ನನ್ನ ಕನಸನ್ನು ನನಸಾಗಿಸುವುದು ನನ್ನಪ್ಪನ ಕನಸಾಗಿತ್ತು. ಆದರೆ ಬಹುಶಃ ನನ್ನ ತಂದೆ ಮಾಡಿದ ಒಂದೇ ತಪ್ಪೆಂದರೆ ಅವರು ಆರ್ ಎಸ್ ಎಸ್ ಮತ್ತು ಬಿಜೆಪಿ ಗೆ ಬೆಂಬಲ ನೀಡಿದ್ದು! ನನಗೀಗ ನನ್ನ ಭವಿಷ್ಯವೆಂದರೆ ಅಂಧಕಾರ ಮಾತ್ರ ಎನ್ನಿಸಿದೆ. ಅವರು ಸಾಯಿಸಿದ್ದು ನನ್ನ ತಂದೆಯನ್ನು ಮಾತ್ರವಲ್ಲ, ನನ್ನ ಕನಸನ್ನೂ. ಅವರು ಯಾಕೆ ನನ್ನ ತಂದೆಯನ್ನು ಕೊಂದರು ಎಂಬುದಕ್ಕೆ ನನಗಿನ್ನೂ ಉತ್ತರ ಸಿಕ್ಕಿಲ್ಲ.
ಆಕೆಯ ಮುಗ್ಧ ಪ್ರಶ್ನೆಯನ್ನು ಕೇಳಿದರೆ ಕರುಳು ಚುರುಕ್ಕೆನ್ನುತ್ತದೆ. ಈ ಪ್ರಶ್ನೆಗೆ ಯಾರು ಉತ್ತರಿಸಬೇಕು? ಕೇರಳದಲ್ಲಿ ಇಂಥ ಹತ್ಯೆಗಳೇನು ಹೊಸತಲ್ಲ. ವಿಸ್ಮಯಳ ಪ್ರಶ್ನೆಯೊಳಗೆ ಅವಿತಿರುವ ಮುಗ್ಧ ಮನಸ್ಸಿನ ದಿಗಿಲು, ನಿಷ್ಕಾರಣವಾಗಿ ತನ್ನ ನಗುವನ್ನು ಕಸಿದುಕೊಂಡವರ ಬಗೆಗಿನ ರೋಷ ಮತ್ತೊಬ್ಬರನ್ನು ನಿರ್ದಯವಾಗಿ ಹತ್ಯೆ ಮಾಡುವವರಿಗೆ ಅರ್ಥವಾಗಬೇಕಿದೆ.
ಇದು ಎಡ-ಬಲವೆಂಬ ಮತ್ತೊಂದು ರಾಜಕೀಯ ಕೆಸರೆರಚಾಟಕ್ಕೆ ವಿಷಯವಾಗದೆ, 12 ವರ್ಷದ ಪುಟ್ಟ ಬಾಲಕಿಯ ಭವಿಷ್ಯವನ್ನು, ಆಕೆಯಂತೆ ಭವಿಷ್ಯವೆಂದರೆ ಅಂಧಕಾರ ಎಂದುಕೊಂಡ ಮುಗ್ಧ ಮಕ್ಕಳ ಬದುಕನ್ನು ಬೆಳಗುವ ಉದ್ದೇಶ ಹೊಂದಬೇಕಿದೆ.













News Source - One India
loading...

Veerakesari 01:44
loading...
​
​ಬದಲಾದ ಕಾಲಘಟ್ಟಕ್ಕೆ ತಕ್ಕಂತೆ, ಸುಮಾರು ಒಂಬತ್ತು ದಶಕಗಳಿಂದ ಚಾಲ್ತಿಯಲ್ಲಿದ್ದ ಗಣವೇಷವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬದಲಾಯಿಸುವ ತೀರ್ಮಾನ ಕೈಗೊಂಡಿತ್ತು. ರಾಜಸ್ಥಾನದ ಜೈಪುರ ಬಳಿಯ ನಾಗೌರ್ ನಲ್ಲಿ ಕಳೆದ ವರ್ಷ ನಡೆದ ಅಖಿಲ ಭಾರತೀಯ ಪ್ರತಿನಿಧಿಗಳ ನೀತಿ ನಿರ್ಧಾರಕ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಗಿತ್ತು. ಈ ಮೂಲಕ ಸಂಘದ ಶಿಸ್ತಿನ ಸಂಕೇತವಾಗಿದ್ದ ಖಾಕಿ ಚಡ್ಡಿ ಇತಿಹಾಸದ ಪುಟಕ್ಕೆ ಸೇರಿದೆ.ಉಪ್ಪಿನಂಗಡಿಯಲ್ಲಿ ಸೋಮವಾರದಂದು ನೂತನ ಗಣವೇಷದಲ್ಲಿ ನಡೆದ ಆಕರ್ಷಕ ಪಥಸಂಚಲನ.





loading...

Veerakesari 21:34
loading...
​
​ಇಂದು ಸಂಜೆ 5:30ಕ್ಕೆ ಮಂಗಳೂರಿನ ಸಂಘ ನಿಕೇತನದಲ್ಲಿ ಸಿಟಿಜೆನ್ ಕೌನ್ಸಿಲ್ ನೇತೃತ್ವದಲ್ಲಿ "ಅಯೋದ್ಯೆ ರಾಮ ಮಂದಿರ ನಿರ್ಮಾಣ" ಕುರಿತ ವಿಚಾರಗೋಷ್ಟಿಯಲ್ಲಿ ಮಾತನಾಡಲು ಮುಖ್ಯ ಅತಿಥಿಯಾಗಿ ಡಾ.ಸುಬ್ರಹ್ಮಣ್ಯ ಸ್ವಾಮಿ ಮಂಗಳೂರಿಗೆ ಆಗಮಿಸಿದ್ದಾರೆ.
ಮಂಗಳೂರು ಸಂಘನಿಕೇತನದಲ್ಲಿ ಇಂದು ಬೆಳಗ್ಗೆ ನಡೆದ ಆರ್.ಎಸ್.ಎಸ್ ಶಾಖೆಯಲ್ಲಿ ಡಾ. ಸುಬ್ರಮಣಿಯನ್ ಸ್ವಾಮಿ ಭಾಗವಹಿಸಿದರು. ಈ ಸಂದರ್ಭದಲ್ಲಿ ತೆಗೆದ ಕೆಲವು ಫೋಟೋಗಳು.
ರಾಮ ಮಂದಿರ ನಿರ್ಮಾಣದ ಪರ ಮಾತನಾಡುವ ಏಕೈಕ ಬಿಜೆಪಿಗ. ಉಳಿದ ಬಿಜೆಪಿ ರಾಜಕಾರಣಿಗಳು ರಾಮ ಮಂದಿರ ನಿರ್ಮಾಣ, ಗೋಹತ್ಯೆ ನಿಶೇಧದ ಬಗ್ಗೆ ಬಣ್ಣ ಬಣ್ಣದ ಆಶ್ವಾಸನೆಗಳನ್ನು ಹೇಳಿ ಗೆದ್ದ ನಂತರ ಅದರ ಬಗ್ಗೆ ಒಂದೇ ಒಂದು ಮಾತನ್ನೂ ಆಡಲ್ಲ. ಆದರೆ ಡಾ.ಸುಬ್ರಹ್ಮಣ್ಯ ಸ್ವಾಮಿ ಗೆದ್ದ ನಂತರವೂ ರಾಮ ಮಂದಿರ ನಿರ್ಮಾಣದ ಪರ ಧ್ವನಿ ಎತ್ತಿದ್ದಾರೆ, ಎತ್ತುತ್ತಿದ್ದಾರೆ.
ಜೈ ಆರ್.ಎಸ್.ಎಸ್ 



loading...

Veerakesari 19:54
loading...
​
'ಬಾಳ್ ಠಾಕ್ರೆ.' ಅಪ್ಪಟ ಹಿಂದುತ್ವವಾದಿ, ಅವರ ಪ್ರಮುಖ ಅಜೆಂಡ, ಹಿಂದೂ ತತ್ತ್ವ ಮೌಲ್ಯಗಳು. ಹಿಂದೂಗಳಿಗೆ ಅನ್ಯಾಯವಾದಾಗ ಅದರ ವಿರುದ್ಧ ಪ್ರಪ್ರಥಮವಾಗಿ ದನಿಯೆತ್ತಿ ಹೋರಾಡುವವರಲ್ಲಿ ಅವರು ಮೊದಲಿಗರು. ಹಿಂದೂಗಳನ್ನು ಗುರಿಯಾಗಿರಿಸಿ, ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಗಳು ಭಯೋತ್ಪಾದಕ ದಾಳಿ ನಡೆಸಿದಾಗ ಠಾಕ್ರೆಯವರು ಸಿಡಿಮಿಡಿಗೊಳ್ಳುತ್ತಿದ್ದರು. ಇದರ ವಿರುದ್ಧ ತಕ್ಷಣ ಹೋರಾಡಲು ಭಾರತ ಸರ್ಕಾರವನ್ನು ಆಗ್ರಹಿಸಿದ ಸನ್ನಿವೇಶಗಳೂ ಹಲವಾರು ಇವೆ.
ಲೇಖಕ, ಕೇಶವ ಸೀತಾರಾಂ ಠಾಕ್ರೆ ಯವರ ೪ ಮಕ್ಕಳಲ್ಲಿ ಎರಡನೆಯ ಮಗನಾಗಿ, ಸನ್. ೧೯೨೭ ರ ಜನವರಿ, ೨೩ ರಂದು, ಜನಿಸಿದ, ಬಾಳಾ ಸಾಹೇಬ್ ಕೇಶವ ಸೀತಾರಾಂ ಠಾಕ್ರೆ,' ಯವರು, ಬೊಂಬಾಯಿಯನ್ನು ರಾಜಧಾನಿಯನ್ನಾಗಿರಿಸಿ, ಮರಾಠಿ ಭಾಷಾ ಜನರಿಗೆ ಪ್ರತ್ಯೇಕ ರಾಜ್ಯವೊಂದರ ನಿರ್ಮಾಣಕ್ಕಾಗಿ ನಡೆದ 'ಸಂಯುಕ್ತ ಮಹಾರಾಷ್ಟ್ರ ಆಂದೋಳನ'ದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. 'ಹಿಟ್ಲರ್' ನ ಸರ್ವಾಧಿಕಾರವನ್ನು ಒಪ್ಪಿಕೊಂಡಿದ್ದ ಅವರು, ಜವಳಿ ಮತ್ತು ಇನ್ನಿತರ ಕೈಗಾರಿಕಾ ಘಟಕಗಳಲ್ಲಿ 'ಮರಾಠಿ ಮಣ್ಣಿನ ಮಕ್ಕಳಿಗೆ ಉದ್ಯೋಗ' ಕೊಡಿಸಲು ಬೀದಿಗಿಳಿದು ಹೋರಾಡಿದರು. ಈ ತರಹದ ಹೋರಾಟಗಳಿಂದ ಅವರು ಬಹಳ ಜನಪ್ರಿಯತೆಯನ್ನು ಸಂಪಾದಿಸಿದರು. 'ಹಿಂದು ಹೃದಯ ಸಾಮ್ರಾಟ ಎಂಬ ಹೆಸರು ಬಂದಿತು. ಹಿಂದೂ ಧರ್ಮದ ಪ್ರತಿಪಾದಕರಾಗಿದ್ದರೂ. ಅವರ ಪ್ರೀತಿ, ಮರಾಠಿ ಭಾಷೆ ಮತ್ತು ಮಹಾರಾಷ್ಟ್ರೆಕ್ಕೆ ಸೀಮಿತವಾಗಿತ್ತು. ಪಾಕೀಸ್ತಾನದ ಬಗ್ಗೆ ಕಠಿಣ ನಿಲವನ್ನು ಹೊಂದಿದ್ದರು. ಸನ್. ೨೦೦೯ ರ ಚುನಾವಣೆಯಲ್ಲಿ 'ಬಿಜೆಪಿ'ಯನ್ನು ಹಿಂದಕ್ಕೆ ಹಾಕಿ ಶಿವಸೇನೆ ಮುಂದೆ ಸಾಗಿತು. ಬಾಳ್ ಠಾಕರೆಯವರು ಮೇರು ವ್ಯಕ್ತಿತ್ವದ ಅತಿ ತೀಕ್ಷ್ಣ ಮತ್ತು ಪ್ರಭಾವೀ ಭಾಷಣಕಾರರಾಗಿದ್ದರು. ಮುಂಬಯಿನಲ್ಲಿ ದೊಡ್ಡರೀತಿಯಲ್ಲಿ ಚಾಲ್ತಿಯಲ್ಲಿದ್ದ ಭಾರತೀಯ ಕಮ್ಯುನಿಸ್ಟ್ ಪಕ್ಷದ ಪ್ರಭಾವ ಕಡಿಮೆಮಾಡಲು, ಮತ್ತು ಶಿವಸೇನೆಯನ್ನು ಒಂದು ಸಧೃಢ ಪಕ್ಷವನ್ನಾಗಿಸಲು ಅವರ ’ಅಮ್ಚಿ ಮುಂಬಯಿ,’ ಹಾಗೂ ಮರಾಠಿ ಮಾಣೂಸ್’ ವಾದ ಯಶಸ್ವಿಯಾಗಿತ್ತು.
'ಶಿವಸೇನೆ,' ಛತ್ರಪತಿ ಶಿವಾಜಿಮಹಾರಾಜ್ ಹೆಸರಿನಲ್ಲಿ ಹುಟ್ಟಿಕೊಂಡ ಮಹಾರಾಷ್ಟ್ರದ ಪ್ರಭಾವಿ ಸಂಘಟನೆ. ಮಹಾರಾಷ್ಟ್ರೀಯನ್ನರ ಬೆಂಬಲದೊಂದಿಗೆ ಪ್ರಬಲ ಪ್ರಾದೇಶಿಕ ಪಕ್ಷವಾಗಿ ಬೆಳೆದ ಶಿವಸೇನಾ ಸಂಸ್ಥೆಗೆ, ಬಾಳಾ ಸಾಹೇಬ್ ಠಾಕ್ರೆಯವರು ಪರಮೋಚ್ಚ ನಾಯಕರು. ಹೀಗೆ ಹುಟ್ಟು ಹಾಕಿದ ಶಿವಸೇನೆಯನ್ನು ಅವರು ಶಿವಸೈನಿಕರ ಪ್ರಬಲ ಶಕ್ತಿಯಾಗಿ ಬೆಳೆಸಿ, ಮುಂದೆತರುವಲ್ಲಿ ತಮ್ಮ ಪರಿಶ್ರಮವನ್ನೆಲ್ಲಾ ಧಾರೆಯೆರೆದರು. ಹೀಗೆ ಠಾಕರೆಯವರು ಒಮ್ಮೆ ಗುಡುಗಿದರೆ, ಅವರ ಮಾತಿಗೆ ಎದುರುತ್ತರ ಕೊಡುವ ಧೈರ್ಯ ಯಾರಿಗೂ ಇರುತ್ತಿರಲಿಲ್ಲ.
ಸಾರ್ವಜನಿಕ ಸಮಾರಂಭಗಳಿಗೆ ಹೋದಾಗ ಅವರು ಬಿಳಿ ಕುರ್ತಾ, ಬಿಗಿ ಪೈಜಾಮ ಧರಿಸಿ ಶಾಲು ಹೊದೆಯುತ್ತಿದ್ದರು. ರುದ್ರಾಕ್ಷಿ ಮಾಲೆಯ ಸಹಿತ ಹಲವು ಮಣಿಸರಗಳನ್ನು ಧರಿಸುತ್ತಾರೆ. ಸಾಕಷ್ಟು ಹಾವ-ಭಾವಗಳಿಂದ ಮಾತನಾಡಿ ಜನರನ್ನು ಮಂತ್ರಮುಘ್ದರನ್ನಾಗಿ ಮಾಡುವ ಕಲೆ ಅವರಿಗೆ ಸಿದ್ಧಿಸಿತ್ತು. ಮನೆಯಲ್ಲಿ ಸಿಲ್ಕ್ ಕುರ್ತ, ಲುಂಗಿ, ಅವರ ಸಮವಸ್ತ್ರ,ಥರ ಥರದ ಬಣ್ಣಗಳ ಉಡುಗೆ ಧರಿಸಿದರೂ 'ಕೇಸರಿ ಬಣ್ಣ' ಅವರಿಗೆ ಬಲು ಪ್ರಿಯ. ಕಂಚಿ ಕಾಮಕೋಟಿ ಸ್ವಾಮಿಗಳು ನೀಡಿದ ಸ್ಪಟಿಕವಿರುವ ರುದ್ರಾಕ್ಷಿಮಾಲೆ ಹೆಚ್ಚು ಪ್ರಿಯ. ಕೈಯಲ್ಲಿ ಯಾವಾಗಲೂ 'ಸಿಗಾರ್' ಇರುತ್ತಿತ್ತು.
ಸಾಧಾರಣ ಎತ್ತರ. ಕೋಲುಮುಖ, ಅಗಲ ಹಣೆ,ನೀಳ ನಾಸಿಕ, ತೆಳ್ಳಗಿನ ದೇಹ, ಮೊದಲನೋಟಕ್ಕೆ ಆಕರ್ಶಿಸುವಂತಹ ವ್ಯಕ್ತಿತ್ವವಲ್ಲ. ಠಾಕ್ರೆಯವರು ಬರುತ್ತಾರೆ, ಮಾತಾಡುತ್ತಾರೆ ಎಂದರೆ ಶಿವಾಜಿಪಾರ್ಕ್ ಕಿಕ್ಕಿರಿದು ತುಂಬುತ್ತಿತ್ತು. ಆದೇಶನೀಡಿದರೆ ಮುಂಬಯಿ ಸ್ತಭ್ದವಾಗುತ್ತಿತ್ತು.ಮುಂಬಯಿನ ಇತಿಹಾಸದಲ್ಲಿ ಇಂತಹ ಪ್ರಭಾವಶಾಲಿ ಜನನಾಯಕ ಹುಟ್ಟಿರಲಿಲ್ಲ. ವಿಚಾರಧಾರೆ ಜನರಿಗೆ ಹಿಡಿಸಲಿ ಬಿಡಲಿ ಜನಸಾಮಾನ್ಯರಿಗೆ ಹಿಡಿತತ ಬಗ್ಗೆ ಎರಡುಮಾತಿಲ್ಲ. ಕಾರ್ಟೂನ್ ಗಳನ್ನು ರಚಿಸುವುದರಿಂದ ಹಿಡಿದು ಪ್ರಬಲ ಹಾಗೂ ತೀಕ್ಷ್ಣ ಸಂದೇಶಗಳನ್ನು ನೀಡುವ ಮೂಲಕ ಮಹಾರಾಷ್ಟ್ರದ ರಾಜಕೀಯ ರಂಗದಲ್ಲಿ ತಮ್ಮದೇ ಆದ ಕರಿಷ್ಮ, ವರ್ಚಸ್ಸನ್ನು ಸ್ಥಾಪಿಸಿಕೊಂಡಿದ್ದರು. ಬಾಳಾ ಸಾಹೇಬ್ ಠಾಕ್ರೆಯವರು ಮರಾಠಿ ಹಾಗೂ ಹಿಂದುತ್ವದ ಹೆಮ್ಮೆಗಾಗಿ ಗುರುತಿಸಲ್ಪಟ್ಟರು. ಸನ್ ೧೯೫೦ ರಲ್ಲಿ ವ್ಯಂಗ್ಯ ಚಿತ್ರಕಾರ, ಠಾಕ್ರೆಯವರು, ಆಗಿನ ಇಂಗ್ಲೀಷ್ ದೈನಿಕ, ಫ್ರೀಪ್ರೆಸ್ ಜರ್ನಲ್ ನಲ್ಲಿ ವೃತ್ತಿಯನ್ನು ಆರಂಭಿಸಿದರು. ’ಡೇವಿಡ್ ಲೊ’ ಮತ್ತು ’ವಾಲ್ಟ್ ಡಿಸ್ನೆ’, ಅವರ ಪ್ರಿಯ ವ್ಯಂಗ್ಯ ಚಿತ್ರಕಾರರು. ಬಾಲಾಸಾಹೇಬ್ ರವರ, ಚಿತ್ರಗಳು, ಜಪಾನಿನ ಅಸಾಹಿ ಶಿಂಬುನ್, ಹಾಗೂ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ, ಗಳಲ್ಲಿ ಪ್ರಕಟವಾಗಿತ್ತು. ಸನ್. ೧೯೬೦ ರಲ್ಲಿ ತಮ್ಮದೆ ಆದ 'ಮಾರ್ಮಿಕ್' ಎಂಬ ವ್ಯಂಗ್ಯ ಚಿತ್ರ ಮಾಸಿಕವನ್ನು ಆರಂಭಿಸಿ, ಹೊಸ ದಾರಿಯೊಂದನ್ನು ಕಂಡುಕೊಂಡರು. ವಲಸಿಗರ ಸಂಖ್ಯೆ ಅತಿ ಹೆಚ್ಚಾಗುತ್ತಿರುವ ಬೊಂಬಾಯಿನಗರದಲ್ಲಿ ಸ್ಥಾನೀಯರು, ತಮ್ಮ ಅಸ್ತಿತ್ವಕ್ಕಾಗಿ ಹೋರಾಡಲು ಪ್ರೇರೇಪಣೆ ಮಾಡಿ ಹಲವಾರು ತೀಕ್ಷ್ಣ ಅಂಶಗಳನ್ನು ತಮ್ಮ ಮಾಸಿಕ ಪತ್ರಿಕೆ, 'ಮಾರ್ಮಿಕ್' ನಲ್ಲಿ ಪ್ರಕಟಿಸುತ್ತಿದ್ದರು. ಮಾರ್ಮಿಕ್ ಪತ್ರಿಕೆಯ ಮೂಲಕ ಮಹಾರಾಷ್ಟ್ರದವರಿಗೆ ಅವರ ರಾಜ್ಯದಲ್ಲಿ ಹಕ್ಕುಗಳನ್ನು ಕೊಡಿಸಿ ಜನಜಾಗೃತಿ ಹುಟ್ಟಿಸುವುದು ಅವರ ಪ್ರಯತ್ನವಾಗಿತ್ತು. 'ವಾಚಾ ಆಣಿ ಗಪ್ಪ ಬಸ', ಎಂಬ ಕಾಲಂ, ಮಹಾರಾಷ್ಟ್ರೀಯನ್ನರ ಆತ್ಮಾಭಿಮಾನವನ್ನು ಕೆರಳಿಸುವ ಕಾರ್ಯವನ್ನು ಸಮರ್ಥವಾಗಿ ನೆರೆವೇರಿಸಿತು. ಅವರು, ಅಧಿಕಾರದಲ್ಲಿರಲಿ, ಇಲ್ಲದಿರಲಿ ಒಮ್ಮೆ ಗರ್ಜಿಸಿದರೆಂದರೆ, ಮುಂಬಯಿಮಹಾನಗರ ಸ್ತಭ್ದವಾಗುತ್ತಿತ್ತು.
ಹಲವಾರು ವಾರಗಳಿಂದ ಅನಾರೋಗ್ಯ , ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಠಾಕ್ರೆಯವರು, ನವೆಂಬರ್ ೧೭ ಶನಿವಾರ, ಮಧ್ಯಾನ್ಹ, ೩-೩೦ ಕ್ಕೆ 'ಮಾತೋಶ್ರೀ'ಯಲ್ಲೇ ಹೃದಯಾಘಾತದಿಂದ ಮರಣಹೊಂದಿದರು. ಮುಂಬಯಿನ ಶಿವಾಜಿಪಾರ್ಕ್ ನಲ್ಲಿ ನವೆಂಬರ್, ೧೮, ರವಿವಾರದ ಸಂಜೆ, ೬-೩೦ ಕ್ಕೆ, ಬಾಳಾಸಾಹೇಬ್ ರವರ ಅಂತಿಮ ಯಾತ್ರೆ, ಮತ್ತು ಅಂತಿಮ ಸಂಸ್ಕಾರ ವಿಧಿಯಲ್ಲಿ ಮುಂಬಯಿನಗರದ ಇತಿಹಾಸದಲ್ಲಿ ಈ ತರಹದ ಅಂತಿಮ ಸಂಸ್ಕಾರ ವಿಧಿಯಲ್ಲಿ, ಹಿಂದೆಂದೂ ಸೇರದಷ್ಟು ಜನಸಮೂಹ, ಲಕ್ಷಾಂತರ ಜನ ಆಗಮಿಸಿ, ತಮ್ಮ ಗೌರವ ಹಾಗೂ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.
loading...

Veerakesari 04:08
loading...
​
ಮನುಷ್ಯರಲ್ಲಿ ಗುರು ಶ್ರೇಷ್ಠ ಜೀವಗಳಲ್ಲಿ ಗೋವು ಶ್ರೇಷ್ಠ. ಜೀವಗಳಲ್ಲೇನು? ದೇವರುಗಳಲ್ಲೂ ಗೋವು ಶ್ರೇಷ್ಠ ಎಂದು ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು, ಶ್ರೀಸಂಸ್ಥಾನ- ಗೋಕರ್ಣ, ಶ್ರೀರಾಮಚಂದ್ರಾಪುರಮಠ, ಹೊಸನಗರ ಇವರು ಅಭಿಪ್ರಾಯಪಟ್ಟರು. ಶ್ರೀರಾಮಚಂದ್ರಾಪುರಮಠದ ನೇತೃತ್ವದಲ್ಲಿ ನೆಡೆಯುತ್ತಿರುವ ಮಂಗಲಗೋಯಾತ್ರೆಯ ಅಂಗವಾಗಿ ಕುಮಟಾದ ಮಣಕಿ ಮೈದಾನದ ವೇದಿಕೆಯಲ್ಲಿ ನೆಡೆದ ಸುರಭಿ ಸಂತ ಸಂಗಮ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ರಾಘವೇಶ್ವರ ಶ್ರೀಗಳು, ಗೋವಿಗೆ ಸಮಾನವಾಗಿರುವ ಜೀವ ಇನ್ನೊಂದಿಲ್ಲ. ಕುಮಟಾದ ಶೋಭಾಯಾತ್ರೆ ನೋಡಿದ ಮೇಲೆ ಗೋವನ್ನು ಕೇಳುವರಿಲ್ಲ ಎಂಬ ಕಾಲ ಮುಗಿಯಿತು ಎಂದನಿಸಿದೆ. ಇಡೀ ಸಭೆಯ ಮೌನದ ಉಪಸ್ಥಿತಿಯ ಅರ್ಥವೆಂದರೆ ಗೋವಿನ ಜೊತೆಗೆ ನಾವಿದ್ದೇವೆ ಎನ್ನುವ ಮೌನಸಂದೇಶ ರವಾನೆ. ಹಾಗಾಗಿ ನಿಮ್ಮ ನಮ್ಮೆಲ್ಲರ ಆಶಯದಂತೆ ಗೋವುಗಳು ಉಳಿದರೆ ದೇಶಕ್ಕೆ ಸ್ವಾತಂತ್ರ್ಯಕ್ಕಿಂತ ಮಿಗಿಲಾದ ಕೊಡುಗೆ ನೀಡಿದಂತೆ ಎಂದರು.
ಕುಂಭಪುರ ಇಂದಿನಿಂದ ಪೂರ್ಣಕುಂಭಪುರವಾಯಿತು. ಆ ಪೂರ್ಣಕುಂಭಗಳಲ್ಲಿ ಗೋಭಕ್ತಿ ತುಂಬಿದೆ. ಸಭಾಮಂಡಲದಲ್ಲಿ ಗೋಭಕ್ತರು ತುಂಬಿದ್ದಾರೆ. ಗೋವಿಗಾಗಿ ದುಡಿದರೆ ಬದುಕು ಸಾರ್ಥಕ. ಗೋವಿಗಾಗಿ ಮಡಿದರೆ ಆ ಸಾವು ಸಾರ್ಥಕ ಎಂದರು. ಗೋಹತ್ಯೆಯ ಬೇರಿರುವುದೇ ರೈತನ ಮನೆಯಲ್ಲಿ ಗೋಹತ್ಯೆಯ ಬೀಜ ರೈತ ಮಾರುವ ಮೂಲಕವೇ ಮೊಳಕೆಯೊಡುತ್ತದೆ. ಹಾಗಾಗಿ ಗೋಹತ್ಯೆಯ ಬೇರಿರುವುದು ರೈತನ ಮನೆಯಲ್ಲಿಯೇ. ಗೋಬ್ಯಾಂಕ್ ಮೂಲಕ ಗೋವುಗಳನ್ನು ಸಾಲವಾಗಿ ನೀಡುವ, ರೈತನ ಕಷ್ಟಕಾಲದಲ್ಲಿ ಗೋವನ್ನು ಸಾಕುವ ಕಾರ್ಯವಾದರೆ, ಗವ್ಯ ಯೂನಿಟ್ ನ ಮೂಲಕ ಗೋಮೂತ್ರ, ಗೋಮಯಗಳಿಗೆ ಸರಿಯಾದ ಬೆಲೆ ನೀಡಿ ಕೊಂಡುಕೊಳ್ಳುವ ಆಯೋಜನೆಯನ್ನು ಮಾಡಿ ರೈತ ಗೋವುಗಳನ್ನು ಕಸಾಯಿಖಾನೆಗೆ ನೀಡುವುದನ್ನು ಗೋಯಾತ್ರೆ ತಪ್ಪಿಸಲಿದೆ. ಇದಕ್ಕಾಗಿ ನಿಮ್ಮ ಸಹಕಾರವಷ್ಟೇ ಬೇಕಿದೆ ಎಂದರು.
ಗೋವಿಗೂ ಮೇವಿಗೂ ಯಾರೂ ಮಧ್ಯ ಬರಬಾರದು ಮಲೆಮಾದೇಶ್ವರ ಬೆಟ್ಟದಂತೆ ಹಲವು ಬೆಟ್ಟಗಳಿಗೆ ಕಾನೂನಿನ ನೆಪವೊಡ್ಡಿ ಬೇಲಿಗಳನ್ನು ಹಾಕಿ ಗೋವುಗಳು ಮೇಯದಂತೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಗೋವಿಗೆ ಮೇವಿಲ್ಲದಂತಾಗಬಾರದು. ಇದಕ್ಕಾಗಿ ಸರ್ಕಾರಗಳು ಬೇಲಿ ತೆಗೆಸಿ ಗೋವಿಗೆ ಮೇಯಲು ಅವಕಾಶ ನೀಡಬೇಕು. ಗೋವಿಗೂ ಮೇವಿಗೂ ಮಧ್ಯೆ ಯಾರೂ ಬರಬಾರದು ಎಂದು ಆಗ್ರಹಿಸಿದರು.
ಭೂಪಾಲ ಗೋಪಾಲನಾದ ನಿದರ್ಶನಗಳು ದಿಲೀಪನಂತಹ ಮಹಾರಾಜನಲ್ಲಿದೆ. ಇಂದಿನ ಆಳುವವರೂ ಗೋವಿನ ಮಹತಿಯನ್ನರಿತು ಗೋಹತ್ಯೆಯನ್ನು ನಿಷೇಧ ಮಾಡಲೇಬೇಕಿದೆ. ದೇಶಕ್ಕೆ ಹೊರಗಿನ ಆಕ್ರಮಣದಿಂದ ಕಾಪಾಡಲು ಭೂಸೇನೆಯಿದ್ದರೆ ಒಳಗಿನ ಆಕ್ರಮಣಗಳನ್ನು ತಡೆಯಲು ಗೋಸೇನೆಯ ಅವಶ್ಯಕತೆಯಿದೆ. ಸರ್ಕಾರದ ಸಹಕಾರದ ಹೊರತಾಗಿಯೂ ನಾವೆಲ್ಲರೂ ಕೂಡಿ ಗೋರಕ್ತಮುಕ್ತ ಭಾರತ ಕಟ್ಟೋಣ ಎಂದು ಗೋಸಂದೇಶ ನೀಡಿದರು.
ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮಿಗಳು ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಮಾತೆಯ ಸ್ಥಾನವನ್ನು ಬೇರೆ ಯಾವುದೇ ಜೀವಿಗೆ ನೀಡಿದ ಉದಾಹರಣೆಯಿಲ್ಲ. ಎಲ್ಲಾ ಧರ್ಮಗಳಲ್ಲೂ ಗೋಮಾತೆಗೆ ಪ್ರಾಮುಖ್ಯತೆ ನೀಡಲಾಗಿದೆ. ಜೈನ ಧರ್ಮದಲ್ಲೂ ಗೋವು ತನ್ನ ಕರುವಿಗೆ ನೀಡುವ ಪ್ರೀತಿಯಂತೆ ನಾವು ಇನ್ನೊಬ್ಬರನ್ನು ಕಾಣಬೇಕು ಎಂಬ ಮಾತುಗಳು ಬರುತ್ತದೆ. ನೋಟ್ ಬ್ಯಾನ್ ಮಾಡಿದಂತೆ ಪ್ಲಾಸ್ಟಿಕ್ ನಿಷೇಧವೂ ಮಾಡಿದರೆ ಗೋಸಂರಕ್ಷಣೆಗೆ ಅಮೃತಪಥದ ನಿರ್ಮಾಣ ಸಾಧ್ಯವಾಗುತ್ತದೆ. ಗೋರಕ್ಷಣೆಗೂ ಕಾನೂನು ಬರಬೇಕಾದ ಅವಶ್ಯಕತೆ ಇಂದಿದೆ. ಈ ದಿಸೆಯಲ್ಲಿ ಕಾರ್ಯವೆಸಗುತ್ತಿರುವ ರಾಘವೇಶ್ವರ ಶ್ರೀಗಳ ಜೊತೆ ನಮ್ಮೆಲ್ಲರ ಸಹಕಾರವಿದೆ ಎಂದರು.
ಷ.ಬ್ರ. ಜಡೆಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಗೋಹತ್ಯೆಯನ್ನು ನಿಮಿತ್ತವಾಗಿಸಿ ನೆಡೆದ ಯಾವುದಾದರೂ ಕುಂಭಮೇಳ ಇದ್ದರೆ ಅದು ಮಂಗಲಗೋಯಾತ್ರೆ. ಕನಿಷ್ಟ ಒಂದು ಗೋವನ್ನಾದರೂ ಮನೆಯಲ್ಲಿ ಸಾಕುವ ಸಂಕಲ್ಪ ನಾವೆಲ್ಲರೂ ಮಾಡಿದರೆ ಗೋಯಾತ್ರೆಯ ಆಶಯ ಸಫಲವಾದಂತೆ. ಆಕಳ ಮೊಸರು, ತುಪ್ಪ ಎಲ್ಲವೂ ಪೂಜ್ಯವಾಗಿದೆ. ಆಕಳ ಕಿವಿಯ ಆಕಾರದಲ್ಲಿರುವ ಆತ್ಮಲಿಂಗವಿರುವ ಗೋಕರ್ಣ ರಾಘವೇಶ್ವರ ಶ್ರೀಗಳ ಸಂಸ್ಥಾನವಾಗಿರುವುದು ಗೋವಿಗೂ ಶ್ರೀಗಳಿಗೂ ಇರುವ ನಂಟನ್ನು ಸೂಚಿಸುತ್ತದೆ. ಗೋವಿಗಾಗಿ ಕಾರ್ಯವೆಸಗುತ್ತಿರುವ ರಾಮಚಂದ್ರಾಪುರಮಠದ ರಾಘವೇಶ್ವರ ಶ್ರೀಗಳು ಕಲಿಯುಗದ ಶ್ರೀರಾಮಚಂದ್ರನಂತೆ ಎಂದರು.
ಕಾರ್ಯಕ್ರಮದಲ್ಲಿ ಮಂಗಲಗೋಯಾತ್ರೆ ಅಂಗವಾಗಿ ಕುಮಟಾದ ಅನೇಕ ಸ್ಥಳಗಳಲ್ಲಿ ನೆಡೆಸಲಾಗಿದ್ದ ಗೋವು ಮತ್ತು ನಾವು ಎಂಬ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿವಿಧ ಶಾಲೆಯ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಹಾಗೆಯೇ ಗೋಸೇವಕರಾದ ಎಸ್.ಎಮ್.ನಾಯಕ್ ಹಳದೀಪುರ, ಜಗನ್ನಾಥ್ ಪಾಂಡುರಂಗ ಆಚಾರಿ, ಲೋಹಿತ್ ಅರೆಯಂಗಡಿಯವರನ್ನು ಸಭೆಯಲ್ಲಿ ಗುರುತಿಸಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ಸಂತವರೇಣ್ಯರಿಗೆ ಹಾಗೂ ಗೋಮಾತೆಗೆ ಸಾವಿರದಾರತಿಯನ್ನೂ ಪಂಚಸಹಸ್ರ ಮೀರಿದ ಗೋಭಕ್ತಾದಿಗಳು ಮಾಡಿದರು.ಕುಮಟಾದಲ್ಲಿ ಅಮೋಘ ಶೋಭಾಯಾತ್ರೆ ಗೋವರ್ಧನಧಾರಿ ಗೋಪಾಲ, ನಂದಗೋಪನ ಕಂದನೊಡನೆ ಸಂಗಡಿಗರು, ಗೋಯಾತ್ರೆಯ ಚೈತನ್ಯ ಮೂರ್ತಿಯಾದ ಮಂಗಲಪಾಂಡೆಯ ಸ್ತಬ್ಧ ಚಿತ್ರಗಳು ಮಂಗಲಗೋಯಾತ್ರೆಯ ಅಗ್ರರಥದ ಹಿಂದಿರುವ ದಿಗ್ಗಜರ ಸ್ಪೂರ್ತಿಗಳನ್ನು ನೆನಪಿಸಿದರೆ, ಪ್ರಗತಿ ವಿದ್ಯಾಲಯ ಹಾಗೂ ಕೊಂಕಣ ಶಿಕ್ಷಣ ವಿದ್ಯಾಲಯದ ವಿದ್ಯಾರ್ಥಿಗಳು ಶೋಭಾಯಾತ್ರೆಯೊಡನೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಮಂಗಲವಾದ್ಯಗಳೊಡನೆ ಸುಮಂಗಲಿಯರ ಪೂರ್ಣಕುಂಭ ಸ್ವಾಗತ, ಮೂರು ಸಾವಿರ ಮೀರಿದ ಗೋಭಕ್ತರು ನಗರದಾದ್ಯಂತ ನೆಡೆದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಗೋಜಾಗೃತಿ ಪಸರಿಸಿದರು. ಈ ಸಂದರ್ಭದಲ್ಲಿ ಪೂಜ್ಯರಾದ ಗಂಗಾಧರಯ್ಯ ಸ್ವಾಮಿಗಳು, ಮಹಂತೇಶ ಸ್ವಾಮಿಗಳು, ದಿವ್ಯಾನಂದ ಸ್ವಾಮಿಗಳು, ರಾಮಾನಂದ ಅವಧೂತರು ಹಾಗೂ ಗೋಪ್ರೇಮಿಗಣ್ಯರಾದ ಶಾಸಕರು, ಪುರಸಭಾ ಅಧ್ಯಕ್ಷರು ಹಾಗೂ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಜರಿದ್ದರು.


loading...

Veerakesari 14:16
loading...
​
ಪ್ರತಿ ವರ್ಷ ಮಕರ ಸಂಕ್ರಮಣದ ಪುಣ್ಯದಿನದಂದು ಗವಿಗಂಗಾಧರೇಶ್ವರ ದೇವಾಲಯ ವಿಸ್ಮಯವೊಂದಕ್ಕೆ ಶಾಕ್ಷಿಯಾಗುತ್ತೆ . ಮಕರ ಸಂಕ್ರಮಣದ ದಿನ ಸಂಜೆಯ ಹೊತ್ತಿಗೆ ಗವಿ ಗಂಗಾಧರೇಶ್ವರ ದೇವಾಲಯದ ಬಲಭಾಗದ ಕಿಂಡಿಯ ಮೂಲಕ ಸೂರ್ಯರಶ್ಮಿ ಒಳಪ್ರವೇಶಿಸಿ ನಂದಿಯ ಕೊಂಬಿನ ಮೂಲಕ ಶಿವಲಿಂಗವನ್ನು ಸ್ಪರ್ಶಿಸುವುದು ವಿಶೇಷವಾಗಿದೆ. ಈ ಕೌತುಕವನ್ನು ಕಣ್ಣುತುಂಬಿಕೊಳ್ಳಲು ಸಾವಿರಾರು ಭಕ್ತಾದಿಗಳು ದೇವಾಲಯಕ್ಕೆ ಆಗಮಿಸುತ್ತಾರೆ.
ಶನಿವಾರ ಮಕರ ಸಂಕ್ರಮಣದ ಪ್ರಯುಕ್ತ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸಿದ್ದು ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪಥ ಬದಲಿಸಿದ್ದಾನೆ. ಈ ವಿಸ್ಮಯಕ್ಕೆ ಸಾಕ್ಷಿಯಾಗಲು ಸಾವಿರಾರು ಭಕ್ತಾದಿಗಳು ಗವಿಗಂಗಾಧರೇಶ್ವರ ದೇವಾಲಯಕ್ಕೆ ಆಗಮಿಸಿದ್ದರು.
ದಕ್ಷಿಣದಿಂದ ಉತ್ತರಕ್ಕೆ ಪಥ ಬದಲಿಸುವ ಭಾಸ್ಕರ ಶಿವನಿಗೆ ನಮಿಸಿ ಮುಂದೆ ಸಾಗುತ್ತಾನೆ ಅನ್ನೋ ಪ್ರತೀತಿ ಇರೋ ಈ ಸಮಯದಲ್ಲಿ ವಿಸ್ಮಯಕ್ಕೆ ಸಾವಿರಾರು ಜನರು ಸಾಕ್ಷಿಯಾದರು. ಗವಿ ಗಂಗಾಧರ ದೇವಾಲಯದ ಬಲಭಾಗದ ಕಿಂಡಿಯಿಂದ ಸೂರ್ಯರಶ್ಮಿ ಒಳಪ್ರವೇಶಿಸಿ ನಂದಿಯ ಕೊಂಬಿನ ಮೂಲಕ ಶಿವನ ಪಾದಗಳನ್ನು ಸ್ಪರ್ಶಿಸುತ್ತೆ. ಮಕರ ಸಂಕ್ರಾತಿಯಂದೇ ಈ ವಿಸ್ಮಯ ನಡೆಯುತ್ತೆ ಎನ್ನುವುದು ವಿಶೇಷ.

ಭಕ್ತರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ದೇಗುಲದ ಬಳಿ ಬೃಹತ್ ಎಲ್‍ಇಡಿ ಅಳವಡಿಸಿ ಈ ಕೌತುಕದ ಕ್ಷಣದ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು.
ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಗವಿಗಂಗಾಧರ ದೇಗುಲಕ್ಕೆ ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರು ಭೇಟಿ ನೀಡಿ ದೇವರ ದರ್ಶನ ಪಡೆದರು.
ಫೋಟೋ ಗ್ಯಾಲರಿ :

loading...
Powered by Blogger.