Showing posts with label Others. Show all posts

Veerakesari 21:00
veerakesari.in
ಐಜಿ ಡಿಸಿ ಸಾಗರ ಅಪರಾಧಿಗಳಿಗೆ , ಕ್ರಿಮಿನಲ್ ಗಳಿಗೆ ಇವರ ಹೆಸರು ಕೇಳಿದರೆ ಭೂಕಂಪದ ಅನುಭವ.
  ಡಿಸಿ ಸಾಗರ್ ಕೇವಲ ಹೆಸರಿಗೆ ಮಾತ್ರವಾಗಿದ್ದರೆ ಇಂದು ಅವರು ಇಷ್ಟು ಪ್ರಸಿದ್ದಿ ಪಡೆಯುತ್ತಾ ಇರಲಿಲ್ಲ .
   ಇವರು ಕೆಲಸದ ನಿಮಿತ್ತ ಕಚೇರಿಯಲ್ಲಿ ಇರುವುದು ಕಡಿಮೆ ಹೆಚ್ಚು ಕಾಲ ನಗರದಾದ್ಯಂತ ಸುತ್ತಾಡುವ ಇವರು ಜನರ ರಕ್ಷಣೆಗೆ ಎದ್ದು ಕೊಟ್ಟು ಹೊರಾಡುವ ಒಬ್ಬ ನಿಷ್ಠಾವಂತ ಕಡಖ್ ಖಾಕಿ .
ಇವರು ಇರುವ ಪ್ರದೇಶ ನಕ್ಸಲ್ ರ ಅಡಗುತಾಣ ಇಲ್ಲಿ ಸದಾಕಾಲ ಅಧುನಿಕ ಶಸ್ತ್ರಾಸ್ತ್ರ ಬಲಾಢ್ಯ ಪೋಲಿಸ್ ಪಡೆ ಅಗತ್ಯ ಅಂತಹ ಭಯಾನಕ ನಗರದಲ್ಲಿ ಹಲವಾರು ಗುಂಡಾಗಳ ಬೆದರಿಕೆಯ ನಡುವೆ ಜೀವ ಪಣಕ್ಕಿಟ್ಟು ಅಪಾಯಕಾರಿ ಹಂತದ ವರೆಗೂ ಹೋರಾಡಿ ಜನರ ರಕ್ಷಣೆ ಮಾಡುವ ಇವರು 1992 ರ ತಂಡದ ಐಪಿಯಸ್ .
ಇವರ ಇನ್ನೊಂದು ವಿಶೇಷ ಅಂದರೆ ಸರಕಾರ ಕೊಟ್ಟ ಅತ್ಯಾಧುನಿಕ ವಾಹನ ಬಿಟ್ಟು ಸೈಕಲ್ ಮುಖೆನಾ ನಗರ ಸುತ್ತುತ್ತಾರೆ ಕಾರಣ ಅವರು ಹೇಳುತ್ತಾರೆ ಅತಿ ಕಿರಿದಾದ ಜಾಗದಲ್ಲಿ ಬಹಳ ವೇಗವಾಗಿ  ಹಾಗೂ ಸಲಿಸಾಗಿ ಓಡಾಡಬಹುದು  ಇದರಿಂದಾಗಿ ಅಫರಾದಿಗಳನ್ನು ಬೇಗ ಹಿಡಿಯಬಹುದು ಹಾಗೂ ಪರಿಸರ ಸ್ನೇಹಿ ಎನ್ನತ್ತಾರೆ.

ಜಿಕೆ
​
loading...

Veerakesari 11:30

​
loading...

Veerakesari 14:16
loading...
​
ಪ್ರತಿ ವರ್ಷ ಮಕರ ಸಂಕ್ರಮಣದ ಪುಣ್ಯದಿನದಂದು ಗವಿಗಂಗಾಧರೇಶ್ವರ ದೇವಾಲಯ ವಿಸ್ಮಯವೊಂದಕ್ಕೆ ಶಾಕ್ಷಿಯಾಗುತ್ತೆ . ಮಕರ ಸಂಕ್ರಮಣದ ದಿನ ಸಂಜೆಯ ಹೊತ್ತಿಗೆ ಗವಿ ಗಂಗಾಧರೇಶ್ವರ ದೇವಾಲಯದ ಬಲಭಾಗದ ಕಿಂಡಿಯ ಮೂಲಕ ಸೂರ್ಯರಶ್ಮಿ ಒಳಪ್ರವೇಶಿಸಿ ನಂದಿಯ ಕೊಂಬಿನ ಮೂಲಕ ಶಿವಲಿಂಗವನ್ನು ಸ್ಪರ್ಶಿಸುವುದು ವಿಶೇಷವಾಗಿದೆ. ಈ ಕೌತುಕವನ್ನು ಕಣ್ಣುತುಂಬಿಕೊಳ್ಳಲು ಸಾವಿರಾರು ಭಕ್ತಾದಿಗಳು ದೇವಾಲಯಕ್ಕೆ ಆಗಮಿಸುತ್ತಾರೆ.
ಶನಿವಾರ ಮಕರ ಸಂಕ್ರಮಣದ ಪ್ರಯುಕ್ತ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸಿದ್ದು ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪಥ ಬದಲಿಸಿದ್ದಾನೆ. ಈ ವಿಸ್ಮಯಕ್ಕೆ ಸಾಕ್ಷಿಯಾಗಲು ಸಾವಿರಾರು ಭಕ್ತಾದಿಗಳು ಗವಿಗಂಗಾಧರೇಶ್ವರ ದೇವಾಲಯಕ್ಕೆ ಆಗಮಿಸಿದ್ದರು.
ದಕ್ಷಿಣದಿಂದ ಉತ್ತರಕ್ಕೆ ಪಥ ಬದಲಿಸುವ ಭಾಸ್ಕರ ಶಿವನಿಗೆ ನಮಿಸಿ ಮುಂದೆ ಸಾಗುತ್ತಾನೆ ಅನ್ನೋ ಪ್ರತೀತಿ ಇರೋ ಈ ಸಮಯದಲ್ಲಿ ವಿಸ್ಮಯಕ್ಕೆ ಸಾವಿರಾರು ಜನರು ಸಾಕ್ಷಿಯಾದರು. ಗವಿ ಗಂಗಾಧರ ದೇವಾಲಯದ ಬಲಭಾಗದ ಕಿಂಡಿಯಿಂದ ಸೂರ್ಯರಶ್ಮಿ ಒಳಪ್ರವೇಶಿಸಿ ನಂದಿಯ ಕೊಂಬಿನ ಮೂಲಕ ಶಿವನ ಪಾದಗಳನ್ನು ಸ್ಪರ್ಶಿಸುತ್ತೆ. ಮಕರ ಸಂಕ್ರಾತಿಯಂದೇ ಈ ವಿಸ್ಮಯ ನಡೆಯುತ್ತೆ ಎನ್ನುವುದು ವಿಶೇಷ.

ಭಕ್ತರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ದೇಗುಲದ ಬಳಿ ಬೃಹತ್ ಎಲ್‍ಇಡಿ ಅಳವಡಿಸಿ ಈ ಕೌತುಕದ ಕ್ಷಣದ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು.
ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಗವಿಗಂಗಾಧರ ದೇಗುಲಕ್ಕೆ ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರು ಭೇಟಿ ನೀಡಿ ದೇವರ ದರ್ಶನ ಪಡೆದರು.
ಫೋಟೋ ಗ್ಯಾಲರಿ :

loading...

Veerakesari 20:21
​
loading...
​
ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯ, ತತ್ವಚಿಂತಕ, ಓತಪ್ರೋತ ತೇಜಸ್ವಿ ವಿಚಾರಗಳಿಂದ ಶ್ರೇಷ್ಠ  ಹಿಂದೂ ಧರ್ಮದ ಪ್ರಸಾರಕ, ಸ್ವಾಮಿ ವಿವೇಕಾನಂದರ ವಿಚಾರಗಳು ಇಂದಿಗೂ ಪ್ರಸ್ತುತ ಯುವ ತರುಣರನ್ನು ಬಡೆದೆಬ್ಬಿಸುತ್ತದೆ. ಸ್ವಾಮಿ ವಿವೇಕಾನಂದರ  ಸಂದೇಶಗಳು ಯುವ ಸಮೂಹಕ್ಕೆ ಸ್ಫೂರ್ತಿಯಿಂದಾಗಿ ಭಾರತ ವಿಶ್ವಗುರುವಾಗಲಿ.
ವಿವೇಕ ವಾಣಿ  :
• ಯಾವುದಕ್ಕೂ ಅಂಜದಿರು; ಅಧ್ಭುತ ಕಾರ್ಯವನ್ನೆಸಗುವೆ. ಭೀತಿಯೇ ಪ್ರಪಂಚದ ಎಲ್ಲ ದುಃಖಗಳಿಗೂ ಮಹತ್ಕಾರಣ. ನಮ್ಮ ದುರವಸ್ಥೆಗಳಿಗೆಲ್ಲಾ ಭೀತಿಯೇ ಕಾರಣ. ನಿರ್ಭೀತಿಯೇ ಕ್ಷಣಮಾತ್ರದಲ್ಲಿ ಸ್ವರ್ಗವನ್ನು ಸಾಧಿಸಿಕೊಡಬಲ್ಲದು. ಆದುದರಿಂದ ಎದ್ದು ನಿಲ್ಲು, ಜಾಗೃತನಾಗು ಮತ್ತು ಗುರಿ ಪ್ರಾಪ್ತವಾಗುವವರೆಗೂ ನಿಲ್ಲದಿರು.
• ನಿಮ್ಮೊಬ್ಬರ ಮೇಲೆಯೇ ಇಡೀ ಕೆಲಸವೂ ಬಿದ್ದಿದೆಯೇನೋ ಎಂಬಂತೆ ನೀವು ಪ್ರತಿಯೊಬ್ಬರೂ ಕೆಲಸ ಮಾಡಿ. ಐವತ್ತಕ್ಕೂ ಹೆಚ್ಚು ಶತಮಾನಗಳು ನಿಮ್ಮನ್ನು ನೋಡುತ್ತ ನಿಂತಿವೆ. ಭಾರತದ ಭವಿಷ್ಯ ನಿಮ್ಮನ್ನು ಅವಲಂಬಿಸಿದೆ. ಕೆಲಸಮಾಡಿಕೊಂಡು ಹೋಗಿ.
• ಧರ್ಮದ ರಹಸ್ಯವಿರುವುದು ಸಿದ್ಧಾಂತಗಳಲ್ಲಲ್ಲ. ಅದರ ಅನುಷ್ಠಾನದಲ್ಲಿ. ಒಳ್ಳೆಯವರಾಗಿರುವುದು, ಒಳ್ಳೆಯದನ್ನು ಮಾಡುವುದು –ಇದೇ ಧರ್ಮದ ಸರ್ವಸ್ವ.
• ಮಾನವನಲ್ಲಿ ಈಗಾಗಲೇ ಅಡಗಿರುವ ದೈವತ್ವವನ್ನು ಪ್ರಕಾಶಪಡಿಸುವುದೇ ಧರ್ಮ.
• ಪ್ರಾಣಿಸಹಜ ವ್ಯಕ್ತಿಯನ್ನು ಮನುಷ್ಯನನ್ನಾಗಿಸಿ, ಮನುಷ್ಯನನ್ನು ದೇವರನ್ನಾಗಿಸುವ ಭಾವನೆಯೇ ಧರ್ಮ.
• ಯಾರಿಗೆ ತನ್ನಲ್ಲಿ ತನಗೇ ನಂಬಿಕೆಯಿಲ್ಲವೋ ಅವನು ನಾಸ್ತಿಕ. ಹಳೆಯ ಧರ್ಮಗಳು ಹೇಳಿದವು, ದೇವರನ್ನು ನಂಬದವನು ನಾಸ್ತಿಕ ಎಂದು. ಹೊಸ ಧರ್ಮವು ಹೇಳುತ್ತದೆ, ಯಾರಿಗೆ ತನ್ನಲ್ಲಿ ನಂಬಿಕೆಯಿಲ್ಲವೋ ಅವನು ನಾಸ್ತಿಕ ಎಂದು.
• ಈ ಜಗತ್ತಿನ ಇತಿಹಾಸ ಆತ್ಮಶ್ರದ್ಧೆಯನ್ನು ಹೊಂದಿದ್ದ ಕೆಲವೇ ವ್ಯಕ್ತಿಗಳ ಇತಿಹಾಸ. ಆ ಶ್ರದ್ಧೆ ಅಂತರಂಗದ ದಿವ್ಯತೆಯನ್ನು ಬಡಿದೆಬ್ಬಿಸುತ್ತದೆ. ಆಗ ನೀವೇನನ್ನು ಬೇಕಾದರೂ ಸಾಧಿಸಬಲ್ಲಿರಿ.
• ನೀವು ಯಶಸ್ಸನ್ನು ಪಡೆಯಲು ದೃಢ ಪ್ರಯತ್ನಬೇಕು, ಅಪಾರ ಇಚ್ಚಾಶಕ್ತಿ ಬೇಕು. ‘ನಾನು ಸಮುದ್ರವನ್ನೇ ಪಾನಮಾಡುತ್ತೇನೆ’, ಎಂದು ಪ್ರಯತ್ನಶೀಲನು ಹೇಳುತ್ತಾನೆ. ‘ನನ್ನ ಸಂಕಲ್ಪದ ಮುಂದೆ ಪರ್ವತಗಳೇ ಪುಡಿಪುಡಿಯಾಗುತ್ತವೆ’ ಎನ್ನುತ್ತಾನವನು. ಇಂತಹ ಶಕ್ತಿ ಯನ್ನೂ ಛಾತಿಯನ್ನೂ ಪಡೆಯಿರಿ; ಕಷ್ಟಪಟ್ಟು ದುಡಿಯಿರಿ, ನೀವು ಗುರಿ ಸೇರುವುದು ನಿಶ್ಚಯ.
• ಪ್ರತಿಯಾಗಿ ಏನನ್ನೂ ಬಯಸಬೇಡಿ. ಆದರೆ ನೀವು ಹೆಚ್ಚು ಕೊಟ್ಟಷ್ಟೂ ನಿಮಗೆ ಹೆಚ್ಚು ಬರುತ್ತದೆ.
• ವಿಕಾಸವೇ ಜೀವನ; ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ; ಸ್ವಾರ್ಥವೆಲ್ಲಾ ಸಂಕೋಚ; ಆದುದರಿಂದ ಪ್ರೇಮವೇ ಬದುಕಿನ ಧರ್ಮ.
• ಬುದ್ಧಿ ಶ್ರೇಷ್ಠವಾದುದು ನಿಜ. ಆದರ ಕಾರ್ಯವ್ಯಾಪ್ತಿ ಸೀಮಿತವಾದುದು. ಸ್ಫೂರ್ತಿ ಉಂಟಾಗುವುದು ಹೃದಯದ ಮೂಲಕ; ಹೃದಯವೇ ಸ್ಫೂರ್ತಿಯ ಮೂಲ.
• ವತ್ಸ, ಪ್ರೀತಿಗೆ ಸೋಲೆಂಬುದಿಲ್ಲ; ಇಂದೋ ನಾಳೆಯೋ ಅಥವಾ ಯುಗಾಂತರವೋ ಸತ್ಯ ಗೆದ್ದೇ ತೀರುವುದು. ಪ್ರೀತಿ ಖಂಡಿತ ಜಯ ಗಳಿಸುತ್ತದೆ. ನಮ್ಮ ಮಾನವಬಂಧುಗಳನ್ನು ನೀವು ಪ್ರೀತಿಸುತ್ತೀರೇನು?
• ಜೀವನಾವಧಿ ಅಲ್ಲ, ಪ್ರಾಪಂಚಿಕ ವಿಷಯಗಳೆಲ್ಲ ಕ್ಷಣಿಕ. ಆದರೆ ಯಾರು ಇತರರಿಗಾಗಿ ಬಾಳುತ್ತಾರೋ ಅವರೇ ನಿಜವಾಗಿ ಬಾಳುತ್ತಾರೆ. ಉಳಿದವರು ಜೀವನ್ ಮೃತರು.
• ಎದ್ದೇಳಿ ಕಾರ್ಯೋನ್ಮುಖರಾಗಿ, ಈ ಜೀವನವಾದರೂ ಎಷ್ಟು ಕಾಲ? ನೀವು ಈ ಜಗತ್ತಿಗೆ ಬಂದ ಮೇಲೆ ಏನಾದರೂ ಗುರುತನ್ನು ಬಿಟ್ಟು ಹೋಗಿ, ಅದಿಲ್ಲದಿದ್ದರೆ ನಿಮಗೂ ಮರಕಲ್ಲುಗಳಿಗೂ ಏನು ವೆತ್ಯಾಸ? ಅವೂ ಅಸ್ತಿತ್ವಕ್ಕೆ ಬರುತ್ತವೆ, ನಶಿಸಿ ನಿರ್ನಾಮವಾಗುತ್ತವೆ.
• ಪರಹಿತಕ್ಕಾಗಿ ನಿಮ್ಮ ಜೀವನವನ್ನು ಮುಡಿಪಾಗಿಡಿ. ನೀವು ತ್ಯಾಗಜೀವನವನ್ನು ಆರಿಸಿಕೊಳ್ಳುವುದಾದರೆ ಸೌಂದರ್ಯ, ಹಣ, ಅಧಿಕಾರಗಳ ಕಡೆ ತಿರುಗಿಯೂ ನೋಡಬೇಡಿ. 
• ಎಲ್ಲವನ್ನೂ ದೂರ ಎಸೆಯಿರಿ. ನಿಮ್ಮ ಮುಕ್ತಿಯ ಬಯಕೆಯನ್ನು ಕೂಡ. ಇತರರಿಗೆ ಸಹಾಯಮಾಡಿ.
• ನಮಗೆ ತ್ಯಾಗ ಮಾಡುವ ಧೈರ್ಯ ಬೇಕಾದರೆ ನಾವು ಉದ್ವೇಗವಶರಾಗಕೂಡದು. ಉದ್ವೇಗ ಕೇವಲ ಪ್ರಾಣಿಗಳಿಗೆ ಸೇರಿದ್ದು. ಪ್ರಾಣಿಗಳು ಸಂಪೂರ್ಣವಾಗಿ ಉದ್ವೇಗದ ಅಧೀನದಲ್ಲಿರುವುವು.
• ಆದರ್ಶದಿಂದ ಕೂಡಿದ ವ್ಯಕ್ತಿ ಒಂದು ಸಾವಿರ ತಪ್ಪುಗಳನ್ನು ಮಾಡಿದರೆ, ಆದರ್ಶವಿಲ್ಲದ ವ್ಯಕ್ತಿಯು ಐವತ್ತು ಸಾವಿರ ತಪ್ಪುಗಳನ್ನು ಮಾಡುತ್ತಾನೆ. ಆದ್ದರಿಂದ ಆದರ್ಶವನ್ನು ಇಟ್ಟುಕೊಳ್ಳುವುದು ಒಳ್ಳೆಯದು.
• ಜೀವನವೆಂಬುದು ಕಠಿಣ ಸತ್ಯ. ಧೈರ್ಯವಾಗಿ ಅದನ್ನು ಎದುರಿಸಿ. ನಿಮ್ಮ ಮಾರ್ಗದಲ್ಲಿ ಮುಂದುವರೆಯಿರಿ. ಅದು ಅಭೇದ್ಯವಾಗಿರಬಹುದು. ಆದರೆ ಆತ್ಮ ಅದಕ್ಕಿಂತ ಬಲಯುತವಾದುದು.
• ಈ ಪ್ರಪಂಚ ಒಂದು ದೊಡ್ಡ ಗರಡಿ ಮನೆ. ನಾವಿಲ್ಲಿ ಬಲಿಷ್ಠರಾಗುವುದಕ್ಕೆ ಬಂದಿದ್ದೇವೆ.
• ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ.
• ಹೇಡಿಗಳು ಮಾತ್ರ, ಬಲಹೀನರು ಮಾತ್ರ ಪಾಪವನ್ನು ಮಾಡುವುದು ಮತ್ತು ಸುಳ್ಳನ್ನು ಹೇಳುವುದು ಎಂಬುದನ್ನು ನೆನಪಿನಲ್ಲಿಡಿ. ಧೀರರು ಯಾವಾಗಲೂ ನೀತಿವಂತರಾಗಿರುತ್ತಾರೆ. ಧೀರರಾಗಿ, ನೀತಿವಂತರಾಗಿ , ಸಹಾನುಭೂತಿಯುಳ್ಳವರಾಗಿ.
• ಸತ್ಯನಿಷ್ಠೆ, ಪವಿತ್ರತೆ ಮತ್ತು ನಿಸ್ವಾರ್ಥತೆ ಈ ಮೂರು ಯಾರಲ್ಲಿರುತ್ತದೆಯೋ ಅವರನ್ನು ಈ ಜಗತ್ತಿನ ಯಾವ ಶಕ್ತಿಯೂ ನಿಗ್ರಹಿಸಲಾರದು. ಇವುಗಳಿಂದ ಸಂಪನ್ನನಾದವನು ಇಡೀ ಜಗತ್ತಿನ ವಿರೋಧವನ್ನೇ ಎದುರಿಸಬಲ್ಲ.
• ಮೊದಲು ಚಾರಿತ್ರ್ಯವನ್ನು ಬೆಳೆಸಿ. ನೀವು ಮಾಡಬೇಕಾದ ಅತ್ಯುನ್ನತ ಕರ್ತವ್ಯ ಇದು. 
• ಮನಸ್ಸನ್ನು ಶಕ್ತಿಯುತವೂ, ಶಿಸ್ತುಬದ್ದವೂ ಆಗಿಸುವುದರಲ್ಲಿಯೇ ಜ್ಞಾನದ ಮೌಲ್ಯವಿರುವುದು. 
• ಉನ್ನತ ಆಲೋಚನೆಗಳಿಂದ, ಅತ್ಯುನ್ನತ ಆದರ್ಶಗಳಿಂದ ನಿಮ್ಮ ಮಿದುಳನ್ನು ತುಂಬಿ; ಅವುಗಳನ್ನು ಹಗಲಿರುಳೂ ನಿಮ್ಮ ಮುಂದಿರಿಸಿಕೊಳ್ಳಿ. ಇದರಿಂದ ಮಹತಕಾರ್ಯ ಉದ್ಭವಿಸುತ್ತದೆ.
• ನಿಮ್ಮ ಪಾಲಿಗೆ ಬಂದ ಕರ್ತವ್ಯವನ್ನು ಮಾಡಿ ನೀವು ಶುದ್ಧ ಚಾರಿತ್ರ್ಯವನ್ನು ರೂಢಿಸಿಕೊಳ್ಳಬೇಕು. ಕರ್ತವ್ಯವನ್ನು ಮಾಡಿದರೆ ಕರ್ತವ್ಯಭಾರದಿಂದ ಪಾರಾಗುತ್ತೇವೆ.
• ಪ್ರತಿಯೊಬ್ಬ ವ್ಯಕ್ತಿಯೂ, ಪ್ರತಿಯೊಂದು ರಾಷ್ಟ್ರವೂ ಶ್ರೇಷ್ಠತೆಯನ್ನು ಪಡೆಯಲು ಮೂರು ಸಂಗತಿಗಳು ಅವಶ್ಯಕ:
1.ಒಳಿತಿನ ಶಕ್ತಿಯಲ್ಲಿ ದೃಢನಂಬಿಕೆ
2.ಮಾತ್ಸರ್ಯ ಹಾಗೂ ಅಪನಂಬಿಕೆಗಳಿಲ್ಲದಿರುವಿಕೆ
3.ಒಳ್ಳೆಯವರಾಗಲು, ಒಳಿತನ್ನು ಮಾಡಲು ಪ್ರಯತ್ನಿಸುವವರಿಗೆ ಸಹಾಯ ಮಾಡುವಿಕೆ.
• ನಮಗೆ ನಾವೇ ಕೇಡನ್ನುಂಟುಮಾಡಿಕೊಳ್ಳದಿದ್ದರೆ, ಜಗತ್ತಿನ ಯಾವ ಶಕ್ತಿಯೂ ನಮಗೆ ಕೇಡನ್ನುಂಟುಮಾಡಲಾರದು ಎಂಬುದು ನಿಶ್ಚಯ.
• ನಮ್ಮ ದುಃಖಗಳಿಗೆಲ್ಲ ನಾವೇ ಜವಾಬ್ಧಾರರು. ಮತ್ತಾರೂ ಅಲ್ಲ. ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ನಾವೇ.
• ನಿಮಗಾಗಿ ಏನನ್ನೂ ಬಯಸಬೇಡಿ. ಎಲ್ಲವನ್ನೂ ಇತರರಿಗಾಗಿ ಮಾಡಿ. ಭಗವಂತನಲ್ಲೇ ಇರುವುದು ಅವನಲ್ಲೇ ಬಾಳುವುದು, ಚಲಿಸುವುದು ಎಂದರೆ ಇದೇ. 
• ಯಾರ ಸಹಾಯಕ್ಕೂ ಕಾದು ಕುಳಿತುಕೊಳ್ಳಬೇಡಿ. ಎಲ್ಲ ಮಾನವ ಸಹಾಯಕ್ಕಿಂತಲೂ ಭಗವಂತನು ಅನಂತಪಾಲು ಮಿಗಿಲಲ್ಲವೆ..?
• ಇತರರಿಗೆ ತಿಳಿಯದೆ ಅವರನ್ನು ನಿಂದಿಸುವುದು ಮಹಾಪರಾಧ ಎಂಬುದನ್ನು ತಿಳಿಯಿರಿ. ಇದನ್ನು ನೀವು ಸಂಪೂರ್ಣ ತ್ಯಜಿಸಬೇಕು.
• ನೀವು ದ್ವೇಷ ಮತ್ತು ಅಸೂಯೆಗಳನ್ನು ಹೊರಸೂಸಿದರೆ ಅವುಗಳು ಚಕ್ರಬಡ್ಡಿ ಸಮೇತ ನಿಮಗೇ ಹಿಂತಿರುಗುತ್ತವೆ. ಯಾವು ಶಕ್ತಿಯೂ ಅದನ್ನು ತಡೆಯಲಾರದು. ಒಮ್ಮೆ ನೀವು ಅವುಗಳನ್ನು ಚಲಿಸುವಂತೆ ಮಾಡಿದರೆ ಅದರ ದುಷ್ಪರಿಣಾಮವನ್ನು ನೀವು ಅನುಭವಿಸಲೇಬೇಕು. ನೀವಿದನ್ನು ನೆನಪಿನಲ್ಲಿಟ್ಟರೆ ದುಷ್ಕಾರ್ಯಗಳಿಂದ ಪಾರಾಗಬಹುದು.
#HappyNationalYouthDay
​
loading...

Veerakesari 22:21
ನಮ್ಮ ಹಿಂದೂ ಧರ್ಮದಲ್ಲಿ ಆಚರಣೆ ಮತ್ತು ಸಂಪ್ರದಾಯಗಳು ಅತಿ ಮಹತ್ವದ್ದು ಎಂದೆನಿಸಿದ್ದು, ಅದು ವೇಷಭೂಷಣಗಳು, ಅನುಸರಿಸುವ ರೀತಿ ರಿವಾಜುಗಳು ಸಂಪ್ರದಾಯಗಳು ತಮ್ಮದೇ ಆದ ವಿಶೇಷತೆ ಮತ್ತು ಮಹತ್ವಗಳನ್ನು ಪಡೆದುಕೊಂಡಿದೆ. ಇನ್ನು ಹಬ್ಬಗಳ ವಿಷಯಕ್ಕೆ ಬಂದಾಗ ಅವುಗಳನ್ನು ಆಚರಿಸುವ ಪದ್ಧತಿ ಕೂಡ ಪ್ರತ್ಯೇಕವಾಗಿರುತ್ತದೆ ಮತ್ತು ಒಂದೊಂದು ಐತಿಹಾಸಿಕ ರಹಸ್ಯಗಳನ್ನು ಇವುಗಳು ಒಳಗೊಂಡಿರುತ್ತವೆ.
ವೈಷ್ಣವರಲ್ಲಿ ಹೆಚ್ಚು ಪ್ರಖ್ಯಾತವಾಗಿರುವ ವೈಕುಂಠ ಏಕಾದಶಿಯನ್ನು ಇವರುಗಳು ವಿಜೃಂಭಣೆಯಿಂದ ಆಚರಿಸುತ್ತಾರೆ. ವಿಷ್ಣು ಭಕ್ತರು ಎಂದೆನಿಸಿರುವ ವೈಷ್ಣವರು ಏಕಾದಶಿಯನ್ನು ಶುಕ್ಲ ಪಕ್ಷದ ಧನುರ್ ಮಾಸದಂದು ಆಚರಿಸುತ್ತಾರೆ ಎಂಬುದು ಹಿಂದೂ ಕ್ಯಾಲೆಂಡರ್‌ನಿಂದ ತಿಳಿದು ಬಂದಿದೆ.
ಸಾಮಾನ್ಯವಾಗಿ ಈ ಹಬ್ಬವು ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ಬರುತ್ತದೆ. ಈ ದಿನದಂದು ಹಿಂದೂಗಳು ಉಪವಾಸವನ್ನು ಕೈಗೊಳ್ಳುತ್ತಾರೆ ಮತ್ತು ವಿಷ್ಣುವನ್ನು ಆರಾಧಿಸುತ್ತಾರೆ. ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ ಈ ದಿನದಂದು ಉಪವಾಸವನ್ನು ಕೈಗೊಳ್ಳುವವರು ತಿಂಗಳಿನಲ್ಲಿ ಬರುವ 23 ಏಕಾದಶಿ ಉಪವಾಸವನ್ನು ಕೈಗೊಂಡಂತೆ ಎಂದಾಗಿದೆ. ಇಂದಿಲ್ಲಿ ಈ ದಿನದ ಮಹತ್ವವನ್ನು ನಾವು ತಿಳಿದುಕೊಳ್ಳಲಿದ್ದು ಏಕಾದಶಿ ಉಪವಾಸದ ವಿಶೇಷತೆಯನ್ನು ಅರಿತುಕೊಳ್ಳೋಣ.
ಮುಕ್ಕೋಟಿ ಏಕಾದಶಿ :
ವೈಕುಂಠ ಏಕಾದಶಿಯನ್ನು ಈ ಹೆಸರಿನಲ್ಲಿ ಕೂಡ ಕರೆಯುತ್ತಾರೆ. ಈ ದಿನದಂದು ವಿಷ್ಣುವಿನ ಆರಾಧನೆಯನ್ನು ಮಾಡುವುದು ಜನನ ಮತ್ತು ಮರಣದ ನೋವಿನಿಂದ ಮುಕ್ತಿಯನ್ನು ನೀಡುತ್ತದೆ ಎಂದಾಗಿದೆ. ಈ ಚಕ್ರದಿಂದ ಆತ್ಮವು ಬಿಡುಗಡೆ ಹೊಂದಿ, ವಿಷ್ಣುವಿನ ಪಾದದಲ್ಲಿ ಸಮಾಧಾನವನ್ನು ಹೊಂದುತ್ತದೆ ಎಂದಾಗಿದೆ. ಆದ್ದರಿಂದ ಈ ಪವಿತ್ರ ದಿನದಂದು ವಿಷ್ಣು ಭಕ್ತರು ಉಪವಾಸವನ್ನು ಕೈಗೊಳ್ಳುತ್ತಾರೆ.
ವೈಕುಂಠ ಏಕಾದಶಿಯ ಕಥೆ :
ಈ ದಿನದ ಮಹತ್ವವವು ಒಂದು ಕಥೆಯನ್ನು ಹೊಂದಿದ್ದು ಅದು ರೋಚಕವಾಗಿದೆ. ಒಮ್ಮೆ ಅಸುರ ಮೂರನ ಕಾಟವನ್ನು ತಾಳಲಾರದೆ ದೇವತೆಗಳು ವಿಷ್ಣುವನ್ನು ಸಂಧಿಸುತ್ತಾರೆ. ಆದರೆ ಮೂರನನ್ನು ವಧಿಸಲು ವಿಷ್ಣುವಿಗೆ ವಿಶೇಷ ಆಯುಧ ಬೇಕಾಗಿರುತ್ತದೆ. ಆದ್ದರಿಂದಲೇ ಅವರನ್ನು ಬದ್ರಿಕಾಶ್ರಮ ಎಂದು ಕರೆಯುತ್ತಾರೆ.
ಒಮ್ಮೆ ವಿಷ್ಣುವು ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಿದ್ದಾಗ ರಾಕ್ಷಸ ಮೂರನು ಅವರನ್ನು ವಧಿಸಲು ಪ್ರಯತ್ನಿಸುತ್ತಾನೆ. ವಿಷ್ಣುವಿನ ದೇಹದಿಂದ ಸ್ತ್ರೀ ಶಕ್ತಿಯು ಉದ್ಭವಗೊಂಡು ಮೂರನನ್ನು ವಧಿಸುತ್ತದೆ. ವಿಷ್ಣುವು ಆಕೆಗೆ ಏಕಾದಶಿ ಎಂಬ ಹೆಸರನ್ನು ನೀಡುತ್ತಾರೆ ಮತ್ತು ವರವನ್ನು ನೀಡಿ ಆಕೆಯನ್ನು ಅನುಗ್ರಹಿಸುತ್ತಾರೆ. ಯಾರೆಲ್ಲಾ ಈ ದಿನದಂದು ಉಪವಾಸ ಕೈಗೊಳ್ಳುತ್ತಾರೋ ಅವರಿಗೆ ವೈಕುಂಠಕ್ಕೆ ಹೋಗುವ ಸಿದ್ಧಿಯನ್ನು ಸ್ವಯಂ ವಿಷ್ಣುವೇ ಘೋಷಿಸುತ್ತಾರೆ.
ವೈಕುಂಠದ ಮಹತ್ವ :
ಧಾರ್ಮಿಕ ನಂಬಿಕೆಗಳ ಪ್ರಕಾರ, ವೈಕುಂಠವು ವಿಷ್ಣು ಮತ್ತು ಲಕ್ಷ್ಮೀ ದೇವಿಯ ವಾಸಸ್ಥಾನವಾಗಿದೆ. ಈ ಪದಕ್ಕೆ ಯಾವುದೇ ಯಥಾವತ್ತಾದ ಅರ್ಥವಿಲ್ಲ. ನಿಮ್ಮಲ್ಲಿರುವ ಎಲ್ಲಾ ಅಹಂಕಾರ ಮತ್ತು ಮದವನ್ನು ನೀವು ತೊರೆದು ವಿಷ್ಣುವನ್ನೇ ನಿಮ್ಮ ಮನದಲ್ಲಿ ನೀವು ಸ್ಥಾಪಿಸಿದಾಗ ಮರಣದ ನಂತರ ವೈಕುಂಠಕ್ಕೆ ನೀವು ಹೋಗುತ್ತೀರಿ ಎಂದಾಗಿದೆ. ವೈಕುಂಠ ಏಕಾದಶಿಯಂದು ವ್ರತವನ್ನು ಕೈಗೊಂಡಾಗ ವಿಷ್ಣುವಿನ ಪಾದತಳದಲ್ಲಿ ಮುಕ್ತಿಯನ್ನು ಹೊಂದಲು ಭಕ್ತರು ಕಾಯುತ್ತಾರೆ.
ವೈಕುಂಠದ ದ್ವಾರ ತೆರೆಯುವುದು :
ನಂಬಿಕೆಗಳ ಪ್ರಕಾರ, ಭಗವದ್ಗೀತೆಯನ್ನು ಓದುವವರು ಮತ್ತು ಅದನ್ನು ಪಾಲಿಸುವವರಿಗೆ ವೈಕುಂಠದ ದ್ವಾರ ತೆರೆಯುತ್ತದೆ. ಧ್ಯಾನ, ಭಕ್ತಿ ಮತ್ತು ಕರ್ಮದಲ್ಲಿ ತಮ್ಮನ್ನು ತೊಡಗಿಸಿಕೊಂಡವರಿಗೆ ವೈಕುಂಠದ ಬಾಗಿಲನ್ನು ತೆರೆಯುವುದು ಸುಲಭವಾಗಿದೆ. ವೈಕುಂಠ ಏಕಾದಶಿಯನ್ನು ನೀವು ಪೂರ್ಣ ನಿಷ್ಟೆಯಿಂದ ಪಾಲಿಸಿದಲ್ಲಿ, ವೈಕುಂಠದ ಬಾಗಿಲು ನಿಮಗೆ ತೆರೆಯುತ್ತದೆ ಎಂಬುದಾಗಿ ಹಿಂದೂ ನಂಬಿಕೆಗಳಲ್ಲಿದೆ.
ಋಣಾತ್ಮಕ ಆಲೋಚನೆಗಳಿಂದ ಮುಕ್ತಿ :
ವೈಕುಂಠ ಏಕಾದಶಿಯಂದು, ಅಸುರರು ಮತ್ತು ದೇವತೆಗಳಿಂದ ಸಮುದ್ರ ಮಂಥನ ನಡೆಯುತ್ತದೆ.  ದೇವತೆಗಳು ಧನಾತ್ಮಕ ಶಕ್ತಿಯ ಪ್ರತೀಕವಾಗಿದ್ದರೆ ಅಸುರರು ಋಣಾತ್ಮಕ ಶಕ್ತಿಯ ದ್ಯೋತಕವಾಗಿದ್ದಾರೆ. ಹಾಲಾಹಲವು ಮಂಥನದಿಂದ ಹೊರಬರುತ್ತದೆ. ಇದು ಮಾನವರಲ್ಲಿರುವ ಋಣಾತ್ಮಕ ಅಂಶಗಳ ಪ್ರತೀಕವಾಗಿದೆ. 
ಈ ಎಲ್ಲಾ ಋಣಾತ್ಮಕ ಅಂಶಗಳು ಹೊರಹೋದಾಗ ವಿಷ್ಣುವನ್ನು ನಾವುಗಳು ಸಂಧಿಸುತ್ತೇವೆ ಮತ್ತು ವೈಕುಂಠವನ್ನು ಸೇರುತ್ತೇವೆ. ವೈಕುಂಠ ಏಕಾದಶಿಯ ವಿಶೇಷ ಮಹತ್ವ ಇದಾಗಿದೆ. ನೀವು ಈ ಉಪವಾಸವನ್ನು ನಂಬಿಕೆ ಮತ್ತು ಭಕ್ತಿಭಾವಗಳಿಂದ ಮಾಡಿದಲ್ಲಿ, ವಿಷ್ಣುವಿನ ಕೃಪೆ ನಿಮ್ಮ ಮೇಲಿರುತ್ತದೆ ಅಂತೆಯೇ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ನೀವು ಪಡೆದುಕೊಳ್ಳುತ್ತೀರಿ.

Kannada Bold Sky
loading...

Veerakesari 20:24
​
loading...
​
ಪಾಕಿಸ್ತಾನದಲ್ಲಿನ ಪ್ರಧಾನ ನಗರಗಳಲ್ಲಿ ನಾಲ್ಕು ನಗರಗಳನ್ನು ಶ್ರೀ ರಾಮನ ಮಕ್ಕಳಾದ ಲವ, ಕುಶ ಹಾಗೂ ಭರತನ ಮಕ್ಕಳು ಕಟ್ಟಿಸಿದ್ದಾರೆ. ಆಗ ಈ ನಗರಗಳ ಹೆಸರುಗಳು ಸಹ ಕಟ್ಟಿಸಿದವರ ಹೆಸರಿನಲ್ಲೇ ಇರುತ್ತಿದ್ದವಂತೆ, ಕಾಲಕ್ರಮೇಣ… ಅವುಗಳ ಹೆಸರುಗಳನ್ನು ಬದಲಾವಣೆ ಮಾಡಿದ್ದಾರೆ. ಹೀಗೆ ಬದಲಾಯಿಸಿದ್ದರೂ ಅವುಗಳ ಹೆಸರು ಒರಿಜಿನಲ್ ಹೆಸರುಗಳಿಗೆ ಹತ್ತಿರವಾಗಿರುವುದು ವಿಶೇಷ. ಆ ನಗರಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ…
ಕಸೂರ್(Kasur): ಇದರ ನಿಜವಾದ ಹೆಸರು ಕುಶಪುರ. ಇದನ್ನು ಶ್ರೀ ರಾಮನ ಹಿರಿಯ ಮಗ ಕುಶ ಕಟ್ಟಿಸಿದ್ದಾನೆ. ಆತನ ಹೆಸರಿನಲ್ಲೇ ಇದಕ್ಕೆ ಕುಶಪುರ ಎಂದು ಕರೆಯುತ್ತಿದ್ದರು. ಕಾಲಾನಂತರದಲ್ಲಿ ಕುಶಪುರ… ಕಸೂರ್ ಅಗಿ ಬದಲಾಯಿತು.
ಲಾಹೋರ್: ಇದರ ಮೊದಲ ಹೆಸರು ಲವಪುರ… ಇದನ್ನು ಶ್ರೀ ರಾಮನ ಕಿರಿಯ ಪುತ್ರನಾದ ಲವ ಕಟ್ಟಿಸಿದ್ದ‌ ಆತನ ಹೆಸರಿನಿಂದಲ್ಲೇ ಇದನ್ನು ಲವಪುರ ಎಂದು ಕರೆಯುತ್ತಿದ್ದರು. ನಂತರದಲ್ಲಿ ಲವಪುರ ಲಾಹೋರ್ ಆಗಿ ರೂಪಾಂತರ ಪಡೆಯಿತು.
ತಕ್ಷಶಿಲೆ: ಇದನ್ನು ಶ್ರೀ ರಾಮನ ತಮ್ಮನಾದ ಭರತನ ಹಿರಿಯ ಮಗ ತಕ್ಷನು ನಿರ್ಮಿಸಿದ್ದ.
ಪೇಶಾವರ: ಇದರ ಮುಂಚಿನ ಹೆಸರು ಪುಷ್ಕಲಾವತಿ/ಪುರುಷಪುರ. ಶ್ರೀ ರಾಮನ ತಮ್ಮನಾದ ಭರತನ ಎರಡನೇ ಪುಷ್ಕರನು ನಿರ್ಮಿಸಿದ. ಕ್ರಮೇಣ ಪುರುಷಪುರ ಪೇಶಾವರ ಆಗಿದೆ.

Kannada AP2TG
loading...

Veerakesari 23:29
​
loading...
​
ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿ ಭೂಮಿ ಮೇಲೆ ನಡೆಯುತ್ತದೆ ಎನ್ನುವ ಮಾತಿದೆ. ಕೆಲವೊಂದು ಘಟನಾವಳಿಗಳನ್ನು ಗಮನಿಸಿದಾಗ ಇದು ನಿಜವೆಂಬ ಭಾವನೆ ನಮ್ಮಲ್ಲಿ ಮೂಡುತ್ತದೆ. ಸಾವಿರ ವರ್ಷಗಳಿಂದ ಭಾರತೀಯ ಮದುವೆಗಳು ತುಂಬಾ ಶಾಸ್ತ್ರೋಕ್ತವಾಗಿ ನಡೆದುಕೊಂಡು ಬರುತ್ತಾ ಇದೆ.
ಇಂದಿನ ದಿನಗಳಲ್ಲಿ ಇದರಲ್ಲಿ ಕೆಲವು ಬದಲಾವಣೆ ಕಂಡುಬರುತ್ತಿದೆಯಾದರೂ ಮದುವೆಯ ಶಾಸ್ತ್ರಗಳು ಹೆಚ್ಚಾಗಿ ಹಾಗೆಯೇ ಉಳಿದುಕೊಂಡಿದೆ. ಮದುಮಗ ಮತ್ತು ಮದುಮಗಳಿಗೆ ಕೆಲವೊಂದು ಶಾಸ್ತ್ರಗಳು ತುಂಬಾ ಆಯಾಸವನ್ನು ಉಂಟು ಮಾಡುತ್ತದೆಯಾದರೂ ಮದುವೆಯ ಖುಷಿಯಲ್ಲಿ ಎಲ್ಲವನ್ನು ಮರೆತು ನಗುತ್ತಾ ಇರುತ್ತಾರೆ. 
ಭಾರತೀಯ ಸಂಪ್ರದಾಯದ ಪ್ರತಿಯೊಂದು ಶಾಸ್ತ್ರಗಳು ವಧು-ವರನನ್ನು ಹತ್ತಿರಕ್ಕೆ ತರುತ್ತದೆ ಮತ್ತು ಜೀವಮಾನವಿಡಿ ಅವರು ಜತೆಯಾಗಿರಬೇಕೆಂಬ ಪಾಠವನ್ನು ಕಲಿಸುತ್ತದೆ. ಬನ್ನಿ ಹಿಂದೂ ಧರ್ಮದ ಮದುವೆಯ ಶಾಸ್ತ್ರದ ಹಿಂದಿರುವ ಕೆಲವೊಂದು ವೈಜ್ಞಾನಿಕ ಕಾರಣಗಳಿವೆ ಎಂದು ನಿಮಗೆ ತಿಳಿದಿದೆಯಾ? ಹಾಗಿದ್ದರೆ ಈ ಲೇಖವನ್ನು ಓದುತ್ತಾ ತಿಳಿದುಕೊಳ್ಳಿ. 
ಮದುಮಗಳ ಅಂಗೈಗೆ ಮೆಹಂದಿ ಹಾಕುವುದು :
ಮದುವೆಯ ಶಾಸ್ತ್ರಗಳು ಆರಂಭವಾಗುವುದೇ ಮೆಹಂದಿಯ ಕಾರ್ಯಕ್ರಮದಿಂದ. ಇದರಲ್ಲಿ ವಧು ಹಾಗೂ ವರ ಇಬ್ಬರು ಭಾಗವಹಿಸುತ್ತಾರೆ. ಇಂದಿನ ದಿನಗಳಲ್ಲಿ ವಿಶೇಷ ವಿನ್ಯಾಸದ ಮೆಹೆಂದಿಯನ್ನು ವಧು ಮತ್ತು ವರನ ಕೈಯಲ್ಲಿ ಬಿಡಿಸಲಾಗುತ್ತದೆ.
ಇದು ಕೇವಲ ಸೌಂದರ್ಯಕ್ಕೆ ಅಂಗ್ಯಕ್ಕೆ ವಿನ್ಯಾಸ ಮಾಡಿಕೊಳ್ಳುವುದು ಮಾತ್ರವಲ್ಲದೆ ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಅಡಗಿವೆ. ಇದು ನಮ್ಮ ಮನಸ್ಸನ್ನು ಶಾಂತವಾಗಿರಿಸುತ್ತದೆ. ಮದುವೆ ಸಮಯದಲ್ಲಿ ವರ ಮತ್ತು ವಧು ಎದುರಿಸುವ ಒತ್ತಡ ನಿವಾರಣೆಗೆ ಮೆಹೆಂದಿ ಇಡಲಾಗುತ್ತದೆ. ದೇಹಕ್ಕೆ ತಾಗುವ ಹಲವಾರು ರೀತಿಯ ಸೋಂಕುಗಳನ್ನು ಇದು ನಿವಾರಿಸುತ್ತದೆ.
ಅರಿಶಿನ ಕಾರ್ಯಕ್ರಮ : 
ಮೆಹಂದಿ ಬಳಿಕ ನಡೆಯುವ ಮುಂದಿನ ಕಾರ್ಯಕ್ರಮವೇ ಅರಿಶಿನ ಹಚ್ಚುವುದು. ಇದರಲ್ಲಿ ವರ ಹಾಗೂ ವಧುವಿನ ದೇಹಕ್ಕೆ ಅರಿಶಿನದ ಪೇಸ್ಟ್ ನ್ನು ಹಚ್ಚಲಾಗುತ್ತದೆ. ಇದು ಅವರ ತ್ವಚೆಗೆ ಕಾಂತಿಯನ್ನು ತರುವುದು.
ವೈಜ್ಞಾನಿಕ ಪ್ರಕಾರ ಅರಿಶಿನದಲ್ಲಿ ಹಲವಾರು ರೀತಿಯ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಇದು ದೇಹದಲ್ಲಿ ಸೂಕ್ಷ್ಮ ಜೀವಿಗಳಿಂದ ಆಗುವ ರೋಗಗಳನ್ನು ಗುಣಪಡಿಸುತ್ತದೆ. ದೇಹದಲ್ಲಿನ ವಿಷಕಾರಿ ಅಂಶಗಳನ್ನು ಇದು ಹೊರಹಾಕುತ್ತದೆ. ಮದುವೆಗೆ ಒಂದು ದಿನ ಮೊದಲು ವಧು ಹಾಗೂ ವರನಿಗೆ ಅರಿಶಿನದ ಪೇಸ್ಟ್ ಹಚ್ಚಿ ಹಾಲಿನಿಂದ ಸ್ನಾನ ಮಾಡಿಸಲಾಗುತ್ತದೆ.
ಮಧುವಿನ ಕೈಗಳಿಗೆ ಬಳೆಗಳು :
ಮದುವೆಗೆ ಮೊದಲು ಮದುಮಗಳಿಗೆ ಕೈಗೆ ಬಳೆಗಳನ್ನು ಹಾಕಿಕೊಳ್ಳಲು ಸೂಚಿಸಲಾಗುತ್ತದೆ. ಮಣಿಕಟ್ಟಿನಲ್ಲಿ ಕೆಲವೊಂದು ಆಕ್ಯೂಪ್ರೆಷರ್ ಕೇಂದ್ರಗಳಿವೆ. ಬಳೆಗಳು ಈ ಕೇಂದ್ರದಲ್ಲಿ ಉಂಟುಮಾಡುವ ಒತ್ತಡವು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇಷ್ಟು ಮಾತ್ರವಲ್ಲದೆ ಚರ್ಮ ಮತ್ತು ಬಳೆಗಳ ನಡುವಿನ ತಿಕ್ಕಾಟವು ರಕ್ತ ಪರಿಚಲನೆಯನ್ನು ಉತ್ತಮಪಡಿಸುವುದು. 
ಹಣೆಗೆ ಕುಂಕುಮ ಇಡುವುದು : 
ಮದುಮಗಳ ಹಣಿಗೆ ಸಿಂಧೂರವನ್ನು ಇಟ್ಟರೆ ವಧು ಮತ್ತು ವರ ಪತಿ-ಪತ್ನಿಯಾದರು ಎನ್ನುವ ಅರ್ಥವಿದೆ. ಇದು ಹುಡುಗ ಹಾಗೂ ಹುಡುಗನ್ನು ಜವಾಬ್ದಾರಿಯನ್ನು ಹೆಚ್ಚಿಸುವುದು. 
ಆದರೆ ಇದು ಕೇವಲ ಮದುವೆಯ ಸಂಕೇತ ಮಾತ್ರವಲ್ಲ. ಸಿಂಧೂರದಲ್ಲಿ ಅರಿಶಿನ ಮತ್ತು ಲಿಂಬೆ ಇದೆ. ಇದು ವಧುವಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಮನಸ್ಸನ್ನು ಶಾಂತವಾಗಿರಿಸಿ ಆಕೆಯಲ್ಲಿ ಲೈಂಗಿಕ ಆಸಕ್ತಿ ಮೂಡಿಸುವುದು. 
ಕಾಲುಂಗುರ :
ಭಾರತೀಯ ಸಂಪ್ರದಾಯಂತೆ ಮಧುಮಗಳು ಕಾಲಿಗೆ ಬೆಳ್ಳಿಯ ಉಂಗುರವನ್ನು ಹಾಕಿಕೊಳ್ಳುವುದನ್ನು ನಾವು ನೋಡುತ್ತೇವೆ. ಕಾಲಿಗೆ ಉಂಗುರ ಹಾಕಿಕೊಳ್ಳುವುದರ ಹಿಂದೆ ವೈಜ್ಞಾನಿಕ ಕಾರಣಗಳು ಇವೆ. ಇದನ್ನು ಎರಡನೇ ಬೆರಳಿಗೆ ಹಾಕಿಕೊಳ್ಳಲಾಗುತ್ತದೆ. 
ಈ ಬೆರಳಿನ ನರಗಳು ನೇರವಾಗಿ ಗರ್ಭಕೋಶ ಮತ್ತು ಹೃದಯಕ್ಕೆ ಸಂಪರ್ಕವನ್ನು ಹೊಂದಿದೆ. ಕಾಲುಂಗರವು ಮಹಿಳೆಯಲ್ಲಿನ ಮುಟ್ಟನ್ನು ನಿಯಂತ್ರಿಸುತ್ತದೆ. ಕಾಲಿನಲ್ಲಿನ ಉಂಗುರವು ಭೂಮಿಯ ಧ್ರುವನ್ನು ವಿಕಿರಣಗೊಳಿಸಿ ದೇಹದೊಳಗೆ ಪ್ರವೇಶಿಸುವಂತೆ ಮಾಡುತ್ತದೆ.
ಅಗ್ನಿಗೆ ಸುತ್ತು ಬರುವುದು :
ಭಾರತೀಯ ಸಂಪ್ರದಾಯದಲ್ಲಿ ಅಗ್ನಿಯನ್ನು ಪವಿತ್ರವೆನ್ನಲಾಗುತ್ತದೆ. ಅಗ್ನಿಯ ಮುಂದೆ ವಧು ಮತ್ತು ವರ ಮದುವೆಯ ಶಾಸ್ತ್ರ ನಿರ್ವಹಿಸುತ್ತಾರೆ. ಭಾರತೀಯ ಸಂಪ್ರದಾಯದ ಪ್ರಕಾರ ಏಳು ಶಾಸ್ತ್ರಗಳಿವೆ. ಮಂಟಪದ ಸುತ್ತಲಿನ ಗಾಳಿಯನ್ನು ಅಗ್ನಿಯು ಶುದ್ದೀಕರಿಸುತ್ತದೆ. ಇದನ್ನು ಹೊರತುಪಡಿಸಿ ಅಗ್ನಿಕುಂಡಕ್ಕೆ ಹಾಕುವ ಸಾಮಗ್ರಿಗಳು ಸುತ್ತಲು ಇರುವಂತಹ ನಕಾರಾತ್ಮಕ ಅಂಶಗಳನ್ನು ದೂರ ಮಾಡುತ್ತದೆ.
Kannada Bold Sky
loading...

Veerakesari 21:34
​ಇಲ್ಲಿಯವರೆಗೂ ನಾವು ರಾಮಾಯಣವನ್ನು, ಅದರಲ್ಲಿ ನಡೆದ ಕೆಲವು ಘಟನೆಗಳನ್ನು, ಎಷ್ಟೋ ವಿಶೇಷಗಳ ಬಗ್ಗೆ ತಿಳಿದ್ದಿದ್ದೇವೆ. ಆದರೆ ಎಷ್ಟು ತಿಳಿದುಕೊಂಡರೂ ಅದರಲ್ಲಿ ಆಗಿಂದಾಗ್ಗೆ ಹೊಸ ಹೊಸ ವಿಷಯಗಳು ತಿಳಿಯುತ್ತಲೆ ಇರುತ್ತವೆ. ಈಗ ನಾವು ಹೇಳಲು ಹೊರಟಿರುವ ವಿಷಯವೂ ಅಂತಹುದೇ. ಆದರೆ ಇದು ಹೊಸ ವಿಷಯವೇನಲ್ಲದ್ದಿದ್ದರೂ, ಇದರ ಬಗ್ಗೆ ಬಹಳ ಜನರಿಗೆ ತಿಳಿದಿರುವುದಿಲ್ಲ. ಇಷ್ಟಕ್ಕೂ ಆ ವಿಷಯ  ಏನೆಂದರೆ… ರಾವಣನು ಲಂಕೆಗೆ ಅಧಿಪತಿ. ಹಾಗೆಯೇ ಆತನ ಬಳಿ ಪುಷ್ಪಕ ವಿಮಾನವೂ ಇರುತ್ತದೆ. ಅದರಲ್ಲಿಯೇ ಅಲ್ವಾ ಸೀತೆಯನ್ನು ಅಪಹರಣಮಾಡಿದ್ದು, ಆದರೆ ನಿಜಕ್ಕೂ ರಾವಣನು ಆಳ್ವಿಕೆ ಮಾಡುತ್ತಿದ್ದ ಲಂಕೆಯ ಜೊತೆಗೆ ಆತನ ಬಳಿ ಇದ್ದ ಪುಷ್ಪಕ ವಿಮಾನವೂ ಸಹ ಆತನ ವಸ್ತುಗಳಲ್ಲ,ಅವು ಬೇರೆ ವ್ಯಕ್ತಿಗೆ ಸೇರಿದಂತಹವುಗಳು. ಹಾಗಾದರೆ ಆ ವ್ಯಕ್ತಿ ಯಾರು….?
ನಿಮಗೆ ಕುಬೇರ ಗೊತ್ತು ಅಲ್ವಾ..! ಸಂಪತ್ತನ್ನು ಸೃಷ್ಟಿಸುವ ಲಕ್ಷ್ಮೀದೇವಿಯಿಂದ ಅದನ್ನು ಪಡೆದು ಎಲ್ಲರಿಗೂ ಸಂಪತ್ತನ್ನು ಹಂಚುವ ವ್ಯಕ್ತಿ ಈ ಕುಬೇರ.ಪುರಾಣಗಳ ಕುಬೇರನು ರಾವಣನಿಗೆ ಅಣ್ಣನಾಗುತ್ತಾನೆ. ಹೇಗೆಂದರೆ, ವಿಶ್ವಶ್ರವನೆಂಬುವವನಿಗೆ ಇಬ್ಬರು ಹೆಂಡತಿಯರು. ಮೊದಲನೆ ಹೆಂಡತಿ ವರವರ್ಣಿನಿ, ಎರಡನೇ ಹೆಂಡತಿ ಕೈಕಸಿ. ಮೊದಲನೇ ಹೆಂಡತಿಗೆ ಜನಿಸಿದವನೇ ಈ ಕುಬೇರ. ರಾವಣ, ಕುಂಭಕರ್ಣ, ಶೂರ್ಪನಖಿ, ವಿಭೀಷಣ ಎರಡನೇ ಹೆಂಡತಿಗೆ ಜನಿಸಿದವರು. ಆದರೆ ಕುಬೇರನು ಹುಟ್ಟಿನಿಂದಲೇ ಕುಬ್ಜನಾಗಿರುತ್ತಾನೆ. ದೊಡ್ಡ ಹೊಟ್ಟೆ, ಮೂರು ಕಾಲುಗಳು, ಶರೀರವೆಲ್ಲವೂ ವಕ್ರವಾಗಿರುತ್ತದೆ. ಆತನಿಗೆ ಹಲ್ಲುಗಳು ಹೊರಗೆ ಬಂದಿರುತ್ತವೆ. ಆದ್ರೂ,ಲೋಕದಲ್ಲಿನ ಸಂಪತ್ತನ್ನು ಹಂಚುವ ದೇವರಂತೆ, ಇರುವುದರಿಂದ ಆತನಿಗಾಗಿ ಒಂದು ನಗರ, ಒಂದು ವಾಹನ ಅವಶ್ಯಕವೆಂದು ಶ್ರೀ ಮಹಾವಿಷ್ಣು ಪ್ರಖ್ಯಾತ ದೇವ ಶಿಲ್ಪಿ ವಿಶ್ವಕರ್ಮನಿಂದ ಲಂಕೆ ಎಂಬ ನಗರವನ್ನು, ಪುಷ್ಪಕ ವಿಮಾನವನ್ನು ತಯಾರಿಸಲು ಹೇಳಿ, ಅದೇ ರೀತಿಯಾಗಿ ಮಾಡಿಸಿ, ಅದನ್ನು  ಕುಬೇರನಿಗೆ ನೀಡುತ್ತಾನೆ. ಆಗ ಕುಬೇರನು ಲಂಕೆಗೆ ರಾಜನಾಗಿ ಆಳುತ್ತಿರುತ್ತಾನೆ.
ಅದೇ ಸಂಧರ್ಭದಲ್ಲಿ ರಾವಣನು ಮತ್ತು ಕುಂಭಕರ್ಣ ಕಾಡಿಗೆ ಹೋಗಿ ತೀವ್ರವಾದ ತಪಸ್ಸನ್ನು ಮಾಡಿ, ಬ್ರಹ್ಮನನ್ನು ಮೆಚ್ಚಿಸಿ, ಆತನಿಂದ ಅದೆಷ್ಟೋ ವರಗಳನ್ನು ಪಡೆದುಕೊಳ್ಳುತ್ತಾರೆ. ಆದರೆ ಬ್ರಹ್ಮನು ನೀಡಿದ ವರಗಳನ್ನು ಪಡೆದುಕೊಂದಿದ್ದ, ರಾವಣ ಮತ್ತು ಕುಂಭಕರ್ಣರಿಂದ ದೇವತೆಗಳೆಲ್ಲರಿಗೂ ಅಪಾಯದ ಸ್ಥಿತಿ ಎದುರಾಗಿದೆ. ಎಲ್ಲಾ ಲೋಕಗಳನ್ನೂ ಆಕ್ರಮಿಸಿಕೊಳ್ಳುತ್ತಿದ್ದರು. ಆ ರೀತಿಯಾಗಿ, ರಾಜನಾಗಿರುವ ಕುಬೇರನ ಲಂಕೆಯನ್ನೂ ಸಹ ರಾವಣನು ತನ್ನ ಕೈ ವಶಮಾಡಿಕೊಂಡನು. ಅದರ ಜೊತೆಗೆ ಪುಷ್ಪಕ ವಿಮಾನವನ್ನೂ ಕಸಿದುಕೊಳ್ಳುತ್ತಾನೆ. ಆಗ ಕೆಲವು ವರ್ಷಗಳವರೆಗೂ ರಾವಣನು ಹಾಗೆಯೇ ಲಂಕೆಯನ್ನು ಆಳ್ವಿಕೆಮಾಡಿದ ನಂತರ,  ಶ್ರೀ ರಾಮನಿಂದ ಮೃತಪಟ್ಟನು. ಅದರಿಂದ ಶ್ರೀ ರಾಮನು ಆ ಪುಷ್ಪಕ ವಿಮಾನವನ್ನು ರಾವಣನ ತಮ್ಮನಾದ ವಿಭೀಷಣನಿಗೆ ನೀಡಿದ್ದನು. ಹಾಗೆ ಅದು ಕೊನೆಗೆ ವಿಭೀಷಣನ ಬಳಿ ಸೇರುತ್ತದೆ. ಆದರೆ ಯುದ್ದ ಮುಗಿದು ಬಳಿಕ ಶ್ರೀರಾಮನು ಮತ್ತೆ ಅಯೋಧ್ಯೆಗೆ ಹೋಗಲು ತನ್ನ ಜೊತೆಗಿರುವ ಎಲ್ಲಾ ಪರಿವಾರವನ್ನು ಅದೇ ಪುಷ್ಪಕ ವಿಮಾನದಲ್ಲಿ ಕರೆದುಕೊಂಡು ಹೋಗುತ್ತಾನೆ. ಅನಂತರ ಪುಷ್ಪಕ ವಿಮಾನವು ಮತ್ತೆ ಲಂಕೆಯಲ್ಲಿನ ವಿಭೀಷಣನ ಬಳಿಗೆ ಸೇರುತ್ತದೆ.
ಒಂದು ದೊಡ್ಡ ನಗರದ ಪ್ರಜೆಗಳೆಲ್ಲರೂ ಪ್ರಯಾಣಿಸಲು ಅನುಕೂಲಕರವಾಗುವಂತಹ ಪುಷ್ಪಕ ವಿಮಾನವನ್ನು ಆ ವಿಶ್ವಕರ್ಮ ತಯಾರಿಸಿದ್ದನು. ಅದಕ್ಕೆ ಶ್ರೀ ರಾಮನು, ಆತನ ಪರಿವಾರದವರೆಲ್ಲರೂ ಅದರಲ್ಲಿ ಪ್ರಯಾಣಮಾಡಿ ಅಯೋಧ್ಯೆಗೆ ಸೇರುತ್ತಾರೆ…! ಆದರೆ ಲಂಕಾನಗರವು, ಪುಷ್ಪಕ ವಿಮಾನವೂ ಎರಡನ್ನೂ ಕಳೆದುಕೊಂಡ ಕುಬೇರನಿಗೆ, ಮಹೇಶ್ವರನು ಬೇರೇ ಜವಾಬ್ದಾರಿಗಳನ್ನು ಒಪ್ಪಿಸಿದನು. ಆತನನ್ನು ಉತ್ತರ ದಿಕ್ಕಿಗೆ  ಅಧಿಪತಿಯನ್ನಾಗಿ ಮಾಡಿದರಂತೆ. ಅದಕ್ಕೆ ಉತ್ತರ ದಿಕ್ಕು ಎಂದರೆ ಇಂದಿಗೂ ಧನ, ಸಂಪತ್ತಿಗೆ ನಿಲಯವೆಂದು ಹೇಳುತ್ತಾರೆ.
Kannada AP2TG

loading...

Veerakesari 05:13
हिन्दू आध्यात्म की असली पहचान तिलक से होती है। मान्यता है कि तिलक लगाने से समाज में मस्तिष्क हमेशा गर्व से ऊंचा होता है। हिंदू परिवारों में किसी भी शुभ कार्य में “तिलक या टीका” लगाने का विधान हैं। यह तिलक कई वस्तुओ और पदार्थों से लगाया जाता हैं। इनमें हल्दी, सिन्दूर, केशर, भस्म और चंदन आदि प्रमुख हैं, परन्तु क्या आप जानते हैं कि इस तिलक लगाने के प्रति भावना क्या छिपी हैं?
जानिए हिन्दू धर्म में माथे पर तिलक क्यों लगाते हैं और तिलक लगवाते वक़्त सर पर हाथ क्यों रखते हैं ?
शायद भारत के सिवा और कहीं भी मस्तक पर तिलक लगाने की प्रथा प्रचलित नहीं है। यह रिवाज अत्यंत प्राचीन है। माना जाता है कि मनुष्य के मस्तक के मध्य में विष्णु भगवान का निवास होता है, और तिलक ठीक इसी स्थान पर लगाया जाता है।
पुराणों में वर्णन मिलता है कि संगम तट पर गंगा स्नान के बाद तिलक लगाने से मोक्ष की प्राप्ति होती है। यही कारण है की स्नान करने के बाद पांडो द्वारा विशेष तिलक अपने भक्तों को लगाया जाता है। माथे पर तिलक लगाने के पीछे आध्यात्मिक महत्व है।
आइये जाने इसका वैज्ञानिक महत्व : 
दरअसल, हमारे शरीर में सात सूक्ष्म ऊर्जा केंद्र होते हैं, जो अपार शक्ति के भंडार हैं। इन्हें चक्र कहा जाता है। माथे के बीच में जहां तिलक लगाते हैं, वहां आज्ञाचक्र होता है। यह चक्र हमारे शरीर का सबसे महत्वपूर्ण स्थान है, जहां शरीर की प्रमुख तीन नाडि़यां इड़ा, पिंगला व सुषुम्ना आकर मिलती हैं इसलिए इसे त्रिवेणी या संगम भी कहा जाता है।
यह गुरु स्थान कहलाता है। यहीं से पूरे शरीर का संचालन होता है। यही हमारी चेतना का मुख्य स्थान भी है। इसी को मन का घर भी कहा जाता है। इसी कारण यह स्थान शरीर में सबसे ज्यादा पूजनीय है। योग में ध्यान के समय इसी स्थान पर मन को एकाग्र किया जाता है।
मस्तिष्क के भ्रु-मध्य ललाट में जिस स्थान पर टीका या तिलक लगाया जाता है यह भाग आज्ञाचक्र है । शरीर शास्त्र के अनुसार पीनियल ग्रन्थि का स्थान होने की वजह से, जब पीनियल ग्रन्थि को उद्दीप्त किया जाता हैं, तो मस्तष्क के अन्दर एक तरह के प्रकाश की अनुभूति होती है। इसे प्रयोगों द्वारा प्रमाणित किया जा चुका है हमारे ऋषिगण इस बात को भलीभाँति जानते थे पीनियल ग्रन्थि के उद्दीपन से आज्ञाचक्र का उद्दीपन होगा।
इसी वजह से धार्मिक कर्मकाण्ड, पूजा-उपासना व शूभकार्यो में टीका लगाने का प्रचलन से बार-बार उस के उद्दीपन से हमारे शरीर में स्थूल-सूक्ष्म अवयन जागृत हो सकें । इस आसान तरीके से सर्वसाधारण की रुचि धार्मिकता की ओर, आत्मिकता की ओर, तृतीय नेत्र जानकर इसके उन्मीलन की दिशा में किया गयचा प्रयास जिससे आज्ञाचक्र को नियमित उत्तेजना मिलती रहती है ।
स्त्रियां लाल कुंकुम का तिलक लगाती हैं। यह भी बिना प्रयोजन नहीं है। लाल रंग ऊर्जा एवं स्फूर्ति का प्रतीक होता है। तिलक स्त्रियों के सौंदर्य में अभिवृद्धि करता है। तिलक लगाना देवी की आराधना से भी जुड़ा है। देवी की पूजा करने के बाद माथे पर तिलक लगाया जाता है। तिलक देवी के आशीर्वाद का प्रतीक माना जाता है।
तिलक लगाने का महत्व : 
तिलक लगाने से एक तो स्वभाव में सुधार आता हैं व देखने वाले पर सात्विक प्रभाव पड़ता हैं। तिलक जिस भी पदार्थ का लगाया जाता हैं उस पदार्थ की ज़रूरत अगर शरीर को होती हैं तो वह भी पूर्ण हो जाती हैं। तिलक किसी खास प्रयोजन के लिए भी लगाये जाते हैं जैसे यदि मोक्षप्राप्ती करनी हो तो तिलक अंगूठे से, शत्रु नाश करना हो तो तर्जनी से, धनप्राप्ति हेतु मध्यमा से तथा शान्ति प्राप्ति हेतु अनामिका से लगाया जाता हैं।
आमतौर से तिलक अनामिका द्वारा लगाया जाता हैं और उसमे भी केवल चंदन ही लगाया जाता हैं तिलक संग चावल लगाने से लक्ष्मी को आकर्षित करने का तथा ठंडक व सात्विकता प्रदान करने का निमित छुपा हुआ होता हैं। अतः प्रत्येक व्यक्ति को तिलक ज़रूर लगाना चाहिए।
मान्यताओं के अनुसार सूने मस्तक को शुभ नहीं माना जाता। माथे पर चंदन, रोली, कुमकुम, सिंदूर या भस्म का तिलक लगाया जाता है। तिलक हिंदू संस्कृति में एक पहचान चिन्ह का काम करता है। तिलक लगाने की केवल धार्मिक मान्यता नहीं है बल्कि इसके कई वैज्ञानिक कारण भी हैं।
हिंदू धर्म में जितने संतों के मत हैं, जितने पंथ है, संप्रदाय हैं उन सबके अपने अलग-अलग तिलक होते हैं। तंत्र शास्त्र में पंच गंध या अस्ट गंध से बने तिलक लगाने का बड़ा ही महत्व है तंत्र शास्त्र में शरीर के तेरह भागों पर तिलक करने की बात कही गई है, लेकिन समस्त शरीर का संचालन मस्तिष्क करता है। इसलिए इस पर तिलक करने की परंपरा अधिक प्रचलित है। तिलक लगाने में सहायक हाथ की अलग-अलग अंगुलियों का भी अपना महत्व है।
Nav Bharath
loading...

Veerakesari 20:58
​“ಸಾವಿನಿಂದ ಯಾರೂ ತಪ್ಪಿಸಿಕೊಳ್ಳಲಾರರು. ಯಮನ ದೃಷ್ಠಿಯಲ್ಲಿ  ಶ್ರೀಮಂತ, ಬಡವ ಯಾರಾದರೂ ಒಂದೇ ಪಾಪ ಮಾಡಿದ್ದರೆ, ಅದಕ್ಕೆ ತಪ್ಪದೆ ಶಿಕ್ಷೆಯನ್ನು ಅನುಭವಿಸಲೇಬೇಕು”. ಇಷ್ಟೇ ಅಲ್ಲ, ಒಬ್ಬ ವ್ಯಕ್ತಿ ಸತ್ತ ನಂತರ ಏನು ನಡೆಯುತ್ತದೆ…?ಸಾವಿನ ರಹಸ್ಯವೇನು..? ಮುಂತಾದ ವಿಷಯಗಳನ್ನು ಕೇದಾರನಾಥಗೆ ಹೋಗುವ ದಾರಿಯಲ್ಲಿ ಶಿವನು ಪಾರ್ವತಿಗೆ ಹೇಳಿದಂತೆ, ಅವುಗಳನ್ನು ಯಮಧರ್ಮರಾಜ ಉದ್ಘಾಟಿಸಿದಂತೆ ಹಿಂದೂಧರ್ಮದ ಪುರಾಣಗಳು ಹೇಳುತ್ತೇವೆ. ಆದರೆ ಪ್ರಸ್ತುತ ಸಮಾಜದಲ್ಲಿ ಪಾಪಭೀತಿಯನ್ನು ಮರೆತವರು ತಪ್ಪುಗಳನ್ನು ಮಾಡುತ್ತಲೇ ಇರುತ್ತಾರೆ. ಆದರೂ ಕರ್ಮಸಿದ್ದಾಂತವು ಅವರನ್ನು ಬೆನ್ನಟ್ಟಿಯೇ ಇರುತ್ತದೆ.
ಮನುಷ್ಯರೆಲ್ಲರೂ ಅಧಿಪತ್ಯ, ನಿಯಂತ್ರತ್ವ ದೋರಣೆಯನ್ನು ಬಿಟ್ಟು, ಇತರರಿಗೆ ಸಹಾಯಮಾಡಬೇಕೆಂದು ಈ ಸಿದ್ದಾಂತ ತಿಳಿಸುತ್ತದೆ. ಇದರ ವಿಷಯ ಪಕ್ಕಕ್ಕಿಟ್ಟರೆ, ಮನುಷ್ಯನಿಗೆ ಸೇರಿದಂತಹ 5 ಸಾವಿನ ರಹಸ್ಯಗಳನ್ನು ಯಮಧರ್ಮರಾಜ ನಚಿಕೇತನೆಂಬ ಪುಟ್ಟ ಮಗುವಿಗೆ ಹೇಳಿದ ವಿಷಯ ಪುರಾಣಗಳ ಮೂಲಕ ತಿಳಿದುಬರುತ್ತದೆ. ಆ ರಹಸ್ಯಗಳನ್ನು ಈಗ ತಿಳಿಯೋಣ.
  • ಓಂ… (ಓಂಕಾರ) ಪರಮಾತ್ಮ ಸ್ವರೂಪ, ಮನುಷ್ಯನ ಹೃದಯದಲ್ಲಿ ಬ್ರಹ್ಮ ವಾಸಿಸುತ್ತಾನೆ. 
  • ಯಮಧರ್ಮರಾಜ ಹೇಳಿದ ಪ್ರಕಾರ ಮನುಷ್ಯ ಸತ್ತುಹೋದ ನಂತರ ಆತನ ಆತ್ಮಕ್ಕೆ ಸಾವಿಲ್ಲ. ದೇಹವನ್ನು ಏನುಮಾಡಿದರೂ, ಆತ್ಮಅದಕ್ಕಾಗಿ ಏನೂ ಮಾಡುವುದಿಲ್ಲ. 
  • ಆತ್ಮಕ್ಕೆ ಜನನ, ಮರಣಗಳಿಲ್ಲ. 
  • ಮನುಷ್ಯ ಸತ್ತುಹೋದನೆಂದರೆ, ಆತನ ಜನನ, ಮರಣ ಎಂಬ ಚಕ್ರವು ಪೂರ್ತಿಯಾದಂತೆ. ಇನ್ಮೇಲೆ ಆತನಿಗೆ ಹುಟ್ಟು ಸಾವುಗಳ ಚಕ್ರದ ಜೊತೆ ಎಂತಹ ಸಂಬಂಧವೂ ಇರುವುದಿಲ್ಲ. ಆತ ಬ್ರಹ್ಮನಿಗೆ ಸಮಾನ.
  • ಯಮಧರ್ಮರಾಜ ಹೇಳಿರುವ ಪ್ರಕಾರ ದೇವರನ್ನು ನಂಬದಂತಹ ಮನುಷ್ಯರು ಸತ್ತ ನಂತರ ಆತ್ಮದಂತೆ ಬದಲಾಗಿ ಪ್ರಶಾಂತತೆಗಾಗಿ ನೋಡುತ್ತಾರೆ.
ಆತ್ಮಗಳ ಬಗ್ಗೆ ಪ್ರಸ್ತಾವನೆ:
ಭಗವದ್ಗೀತೆಯಲ್ಲಿ : ಶ್ರೀಕೃಷ್ಣ ಭಗವಾನನು, ಆತ್ಮ ಸಿದ್ದಾಂತದ ಬಗ್ಗೆ ವಿವರಿಸಿದ್ದಾನೆ. ಆತ್ಮ ವಿನಾಶವಿಲ್ಲದ್ದು. ಶಸ್ತ್ರಾಸ್ತ್ರಗಳಿಂದ ವಿಬೇಧಿಸವುದಕ್ಕಾಗಲೀ, ಅಗ್ನಿ(ಬೆಂಕಿ)ಯಿಂದ ದಹಿಸುವುದಕ್ಕಾಗಲೀ, ನೀರಿನಿಂದ ನೆನೆಸುವುದಕ್ಕಾಗಲೀ, ಗಾಳಿಯಿಂದ ಆರಿಸುದಕ್ಕಾಗಲೀ ಅಸಾಧ್ಯವೆಂದು ವಿವರಿಸಿದ್ದಾನೆ. ಅಷ್ಟೇಅಲ್ಲ ‘ಅಹಂ ಬ್ರಹ್ಮಾಸ್ಮಿ’ ನಿನ್ನಲ್ಲಿರುವ ಆತ್ಮ ಭಗವಂತನ ಅಂಶವಾದ್ದರಿಂದ ಆ ವಿಷಯವನ್ನು ತಿಳಿದುಕೊಳ್ಳಿ ಎಂದು ಹೇಳುತ್ತಿವೆ.

Veerakesari 20:50
​ರಾಮಾಯಣದ ಬಗ್ಗೆ ಗೊತ್ತಿಲ್ಲದವರು ಯಾರಿದ್ದಾರೆ ಹೇಳಿ.ಬಹಳಷ್ಟು ಜನರಿಗೆ ಇದರ ಬಗ್ಗೆ ಗೊತ್ತಿದೆ.ರಾಮನು 14 ವರ್ಷ ವನವಾಸ ಮಾಡಿದ್ದು,ರಾವಣ ಸೀತೆಯನ್ನು ಅಪಹರಿಸಿದ್ದು,ಆತನನ್ನು ಸಂಹರಿಸಿ ಸೀತೆಯನ್ನು ಹಿಂದೆ ತರುವುದು. ಹೀಗೆ ಅನೇಕ ಶ್ಲೋಕಗಳಲ್ಲಿ ಆ ಪುರಾಣವಿರುತ್ತದೆ.ರಾಮಾಯಣದಲ್ಲಿಯ ವಿಶೇಷತೆಗಳು,ನಡೆಯುವ ಸಂಘಟನೆಗಳು ಬಹಳಷ್ಟು ಜನರಿಗೆ ಗೊತ್ತಿದ್ದರೂ, ಅನೇಕ ಜನರಿಗೆ ಗೊತ್ತಿಲ್ಲದ ವಿಷಯವೊಂದಿದೆ.ಅದೇನೆಂದರೆ.
ರಾವಣ ಸೀತೆಯನ್ನು ಅಪಹರಿಸುತ್ತಾನಲ್ಲವೇ. ಹಲವು ತಿಂಗಳುಗಳಕಾಲ ತನ್ನ ಬಳಿಯೇ ಬಂಧಿಸಿಟ್ಟಿರುತ್ತಾನೆ. ನಂತರ ರಾಮ ಸೀತೆಯನ್ನು ಹುಡುಕಿಕೊಂಡು ಬಂದು,ರಾವಣನನ್ನು ಸಂಹರಿಸಿ,ಸೀತೆಯನ್ನು ಕರೆದುಕೊಂಡು ಹೋಗುತ್ತಾನೆ. ಆದರೆ, ರಾವಣನ ಬಳಿ ಸೀತೆ ಇದ್ದ ಅವಧಿಯಲ್ಲಿ,ರಾವಣ ಒಮ್ಮೆಯೂ ಸೀತೆಯನ್ನು ಮುಟ್ಟಲೇಯಿಲ್ಲ.ಹೌದು.ನೀವು ಕೇಳುತ್ತಿರುವುದು ನಿಜ. ಈ ಕಾಲದ ಖಳನಾಯಕರಾಗಿದ್ದರೆ ಆ ಮಹಾ ತಾಯಿಗೆ ತೊಂದರೆಯಾಗುತ್ತಿತ್ತು.ರಾಕ್ಷಸನಾಗಿದ್ದುಕೊಂಡು ರಾವಣ ಸೀತೆಯನ್ನು ಮುಟ್ಟಲೇಯಿಲ್ಲ.ಏಕೆಂದರೆ.
ನಿಮಗೆ ರಂಭೆ ಗೊತ್ತಲ್ಲವೇ?ಇಂದ್ರನ ಬಳಿ ಸ್ವರ್ಗದಲ್ಲಿರುತ್ತಾಳೆ. ದಿನ ನಿತ್ಯ ಗಾನ,ನೃತ್ಯಗಳಲ್ಲಿ. . . .ಅಬ್ಬಬ್ಬ. ಆ ವೈಭೋಗವೇ ವೈಭೋಗ. ಆದರೆ, ರಾವಣಸೀತೆಯನ್ನು ಅಪಹರಿಸಿಕೊಂಡು ಹೋಗುವುದಕ್ಕೆ ಕೆಲವು ವರ್ಷಗಳ ಹಿಂದೆಯೇ ಒಮ್ಮೆ ಸ್ವರ್ಗಕ್ಕೆ ಹೋಗಿದ್ದನಂತೆ. ಆಗ ಅಲ್ಲಿದ್ದ ರಂಭೆಯನ್ನು ನೋಡಿ ವಿಚಲಿತನಾದನಂತೆ. ತನ್ನೊಟ್ಟಿಗೆ ಕಾಲ ಕಳೆಯುವಂತೆ ಬಲಾತ್ಕರಿಸುತ್ತಾನೆ. ಇದಕ್ಕೆ ರಂಭೆ ಒಪ್ಪುವುದಿಲ್ಲ, ಆದರೂ ಪಟ್ಟು ಬಿಡದೆ ರಂಭೆಯ ಹಿಂದೆ ಬೀಳುತ್ತಾನೆ. ಇದನ್ನು ನೋಡಿದ ರಂಭೆಯ ಪ್ರಿಯಕರ ನಳಕುಬೇರ, ಇಷ್ಟವಿಲ್ಲದ ಯಾವುದೇ ಯುವತಿಯನ್ನು ಮುಟ್ಟಿದರೆ ರಾವಣನ ತಲೆಗಳು ಒಡೆದುಹೋಗುವಂತೆ ಶಪಿಸುತ್ತಾನೆ. ಇದರಿಂದಾಗಿ ರಾವಣನು ಅಲ್ಲಿಂದ ಹಿಂದಿರುಗುತ್ತಾನೆ. ಈ ಘಟನೆ ಮುಗಿದರೂ ನಳಕುಬೇರ ತನಗೆ ನೀಡಿದ ಶಾಪ ರಾವಣನ ಮನಸ್ಸಿಲ್ಲಿ ಅಚ್ಚಳಿಯದೇ ಉಳಿದಿರುತ್ತದೆ. ಅಷ್ಟು ತಿಂಗಳುಗಳ ಕಾಲ ಸೀತೆಯನ್ನು ಬಂಧಿಯಾಗಿರಿಸಿಕೊಂಡಿದ್ದರೂ ರಾವಣ ಸೀತೆಯನ್ನು ಮುಟ್ಟುವ ಸಾಹಸ ಮಾಡದಿರುವ ಹಿಂದಿರುವ ಗುಟ್ಟು.
Kannada AP2TG 

Veerakesari 20:09
ಹಿಂದೂ ಸಂಪ್ರದಾಯದಲ್ಲಿ ವಿಘ್ನೇಶ್ವರನಿಗೆ ಹೆಚ್ಚು ಮಹತ್ವವನ್ನು ಕೊಡುತ್ತಾರೆ. ಯಾಕೆಂದರೆ ಆತ ಸಕಲ ಗಣಗಳಿಗೆ ಅಧಿಪತಿ. ನಾವು ಮಾಡುವ ಕೆಲಸಕ್ಕೆ ಯಾವುದೇ ವಿಘ್ನ(ತೊಂದರೆ) ಆಗದಂತೆ ನೇರವೇರಲು ಮೊದಲು ಆತನ ಬಳಿ ಪ್ರಾರ್ಥಿಸುತ್ತೇವೆ. ಎಲ್ಲಿ ಯಾವುದೇ ಶುಭಕಾರ್ಯ ನಡೆದರೂ ಮೊದಲ ಪೂಜೆ ಆ ಗಣಪನಿಗೆ ತಲುಪುತ್ತದೆ. ಹಾಗೆ ಹಿಂದೂಗಳು ತಮ್ಮ ವಿವಾಹದ ಕಾರ್ಯದ ಭಾಗವಾಗಿ ತಮ್ಮ ಲಗ್ನಪತ್ರಿಕೆ (ವೆಡಿಂಗ್ ಇನ್ವಿಟೇಷನ್)ಗಳ ಮೇಲೆ ಗಣೇಶನ ಪೋಟೋವನ್ನು ಕಡ್ಡಾಯವಾಗಿ ಮುದ್ರಿಸಿರುತ್ತಾರೆ‌ ಹಾಗೆ ಯಾಕೆ ಮಾಡುತ್ತಾರೆ ಎಂದು ಈಗ ತಿಳಿದುಕೊಳ್ಳೋಣ.
ಮನುಷ್ಯರಿಗೆ ಜ್ಞಾನ, ಬುದ್ಧಿವಂತಿಕೆ, ನೈಪುಣ್ಯತೆಯನ್ನು ನೀಡುವಂತಹ ದೇವರಾಗಿ ವಿಘ್ನೇಶ್ವರ ಪ್ರಸಿದ್ಧಿ ಪಡೆದಿದ್ದಾನೆ. ಅದಕ್ಕೆ ವಿದ್ಯಾ ದೇವತೆ ಸರಸ್ವತಿಯ ಜೊತೆಗೆ ಆತನನ್ನು ವಿದ್ಯೆ, ಕೆಲೆಗಳ ಅಧಿಪತಿಯಾಗಿ ಭಾವಿಸುತ್ತಾರೆ.
ಅಷ್ಟೇ ಅಲ್ಲ ಹೊಸ ಜೀವನವನ್ನು ಪ್ರಾರಂಭಿಸುವ ಮೊದಲು ವಿನಾಯಕನ ಆಶಿರ್ವಾದ ತಪ್ಪದೇ ಪಡೆಯಬೇಕು ಎಂದು ಹೇಳುತ್ತಾರೆ. ಸಣ್ಣದಾದರೂ, ದೊಡ್ಡದಾದರೂ ಪ್ರತಿ ವಿಷಯದಲ್ಲಿ ಸೂಕ್ಷ್ಮ ದೃಷ್ಟಿಯನ್ನು, ವಿಶ್ಲೇಷಣಾತ್ಮಕ ಶಕ್ತಿ ಹೊಂದಿರಬೇಕು ಎಂದು ವಿನಾಯಕನ ಕಣ್ಣುಗಳು ಹೇಳುತ್ತೇವೆ. ಸೃಷ್ಟಿಯಲ್ಲಿ ಜೀವಿಸುವ ಪ್ರತಿಯೊಂದು ಪ್ರಾಣಿಯನ್ನು ಸಮ ದೃಷ್ಟಿಯಿಂದ ನೋಡಬೇಕೆಂದು, ಎಲ್ಲರಿಗೂ ನ್ಯಾಯಸಮ್ಮತ ನಡೆದುಕೊಳ್ಳಬೇಕು ಎಂದು ಸೂಚಿಸುತ್ತದೆ. 
ವಿನಾಯಕನಿಗೆ ಇರುವ ಎರಡು ದಂತಗಳಲ್ಲಿ ಒಂದು ಸಣ್ಣದಾಗಿ ಮತ್ತೊಂದು ದೊಡ್ಡದಾಗಿ ಇರುತ್ತದೆ. ದೊಡ್ಡದಾಗಿ ಇರುವ ದಂತ ನಂಬಿಕೆಯ ಪ್ರತಿಕವಾಗಿದ್ದರೆ, ಸಣ್ಣ ದಂತ ಪ್ರತಿಭೆಯನ್ನು, ನೈಪುಣ್ಯತೆಯನ್ನು, ಬುದ್ಧಿವಂತಿಕೆಯನ್ನು ಸೂಚಿಸುತ್ತದೆ. ಎಲ್ಲಾ ವಿಘ್ನಗಳನ್ನು ನಿವಾರಣೆ ಮಾಡುವ ದೇವರಾಗಿ ವಿಘ್ನೇಶ್ವರನಿಗೆ ಹೆಸರಿದೆ. ಅದಕ್ಕೆ ಯಾವುದೇ ವ್ಯಕ್ತಿಯ ಜೀವನದಲ್ಲಿ ನಡೆಯುವ ಅತಿಮುಖ್ಯವಾದ ಸಂಭ್ರಮದ ಕಾರ್ಯವಾದ ವಿವಾಹ ಯಾವುದೇ ತೊಂದರೆಗಳಾಗದಂತೆ ನೇರವೇರಲಿ ಎಂಬ ಆಶಯದೊಂದಿಗೆ ವಿವಾಹದ ಆಹ್ವಾನ ಪತ್ರಿಕೆಯ ಮೇಲೆ ಆತನ ಚಿತ್ರವನ್ನು ಮುದ್ರಿಸುತ್ತಾರೆ.

Kannada AP2TG

Veerakesari 05:48
“ಯುವ ತೇಜಸ್ಸು ” ಇದೊಂದು ಸಮಾನ ಮನಸ್ಕರು ಆದರ್ಶ ಸಮಾಜದ ಕಲ್ಪನೆಯೊಂದಿಗೆ ಬಡಜನರ ಸೇವೆಗಾಗಿ ಒಂದಾಗುವ ಕನಸು ಕಂಡು‌ ಅದನ್ನು ನನಸಾಗಿಸಲು ಶ್ರಮಪಟ್ಟು ಪ್ರಾರಂಭಿಸಿದ್ದು ಈಗ್ಗೆ ಕೆಲವೇ ತಿಂಗಳುಗಳ ಹಿಂದೆಯಷ್ಟೇ  ಆದರೂ ಅದು ಬೆಳೆದ ರೀತಿ ಮಾತ್ರ ರೋಚಕ..!
ಆ ಆರಂಭದ ದಿನಗಳಲ್ಲಿ ಟ್ರಸ್ಟ್’ನ ಮುಂದಿನ ನಡೆಗಳ ಬಗೆಗೆ ಅವರಾರಿಗೂ ಸಂಪೂರ್ಣ ಅರಿವಿರದಿದ್ದರೂ, ಸಮಾಜ ಸೇವೆಗಾಗಿನ ತುಡಿತ ಅವರಲ್ಲಿ ಆತ್ಮವಿಶ್ವಾಸ ತುಂಬಿತ್ತು, ಒಂದುಗೂಡಿಸಿತ್ತು.  ಆ ಬೆರಳೆಣಿಕೆಯ ಯುವಕರ ಜೊತೆಗೆ ಒಂದಿಬ್ಬರು ಹೆಣ್ಣುಮಕ್ಕಳು ಸಹ ಜೊತೆ ನೀಡಿ ಇನ್ನಷ್ಟು ಪ್ರೋತ್ಸಾಹ ಹಾಗೂ ಹುರುಪು ತುಂಬುವ ಕೆಲಸ ಮಾಡಿದ್ದರು. ಆಗಲೇ ನೋಡಿ, ಯುವ ತೇಜಸ್ಸು ಟ್ರಸ್ಟ್  ನ ಉದಯಕಾಲ. 
*ಸಮಾಜಸೇವೆಯೇ ನಮ್ಮ ಧ್ಯೇಯ* ಎಂದು ದೃಢ‌ವಾಗಿ ಎದ್ದು ನಿಂತ ಆ ಹುಡುಗರಿಗೆ ದಾರಿದೀಪವಾಗಿ ಏನಾದರೊಂದು ಸಲಹೆ ನೀಡುವ ಹಿರಿಯರಾರೂ ಇರಲಿಲ್ಲ. ಜೊತೆಗೆ ತಮಗೆ ತಾವೇ ಒಂದು ಸರಿದಾರಿಯನ್ನು ಹುಡುಕಿಕೊಳ್ಳಬೇಕಾಗಿತ್ತು. ಯಾವುದೇ ರಾಜಕೀಯ ಅಥವಾ ರಾಜಕೀಯೇತರ ಗಣ್ಯರ ಕಡೆಗಂತೂ ದೀನ ದೃಷ್ಟಿ ಬೀರುವ ಮಾತಂತೂ ಆ ಯುವಕರ ಮನದಲ್ಲಿ ಸುಳಿಯಲೇ ಇಲ್ಲ..!
ಅದಕ್ಕೂ ಕಾರಣವೊಂದಿತ್ತು,, ಅದೇನೆಂದರೆ, ಯಾವುದೇ ರಾಜಕೀಯ ವ್ಯಕ್ತಿ ಆಗಲಿ, ಯಾವುದೇ ಗಣ್ಯ ವ್ಯಕ್ತಿಗಾಗಲಿ ಆ ತಂಡದ ಜವಾಬ್ದಾರಿ ಕೊಡದಿರುವ ಬಗ್ಗೆ ಆ ಯುವಕರ ನಡುವೆ ಅದಾಗಲೇ ಮಾತುಕತೆಯಾಗಿತ್ತು ಹಾಗೂ ಮಾಡುವ ಸೇವಾಕಾರ್ಯವನ್ನು ಪ್ರಚಾರಕ್ಕೊಳಪಡಿಸುವುದು ಅಥವಾ ಅದರಿಂದ ಯಾವುದೇ ಫಲಾಪೇಕ್ಷೆ ಅಲ್ಲಿನ ಯಾರಿಗೂ ಬೇಕಿರಲಿಲ್ಲ. ಆದರೆ ಅಲ್ಲಿ ಅವರೆಲ್ಲರ ಒಕ್ಕೊರಲಿನ ಒಗ್ಗಟ್ಟಿನ ಮಂತ್ರವಿತ್ತು, ಏನಾದರೊಂದು  ಸಮಾಜಕ್ಕೆ ಉಪಕಾರ ಮಾಡಬೇಕೆಂಬ ಹಂಬಲವೂ ಬಲವಾಗಿತ್ತು.  ಅವರಿಗೆ ಮಾನ ಸಮ್ಮಾನಗಳೂ ಬೇಕಿರಲಿಲ್ಲ.. 
ಕಾರಣವಿಷ್ಟೇ..ಅಲ್ಲಿ ಯಾರೂ ನಾಯಕನಿರಲಿಲ್ಲ, ಬದಲಾಗಿ ಪ್ರತಿಯೊಬ್ಬನೂ ನಾಯಕನಾಗಿದ್ದ..!! ಆ ಪುಟ್ಟ ತಂಡದ ಪ್ರತಿಯೊಬ್ಬನಿಗೂ ತನ್ನ ಅಭಿಪ್ರಾಯ ಮಂಡಿಸುವ ಹಕ್ಕಿತ್ತು ಹಾಗೂ ಒಬ್ಬನ ಮಾತಿಗೆ ಕಿವಿಗೊಡುವ ತಾಳ್ಮೆ ಪ್ರತಿಯೊಬ್ಬನಿಗೂ ಅದಾಗಲೇ ಮೂಡಿತ್ತು.. ಅದೇ ಆ ಯುವಕರ ಸಂಸ್ಥೆಯ ಯಶಸ್ಸಿನ ಗುಟ್ಟಾಗಿತ್ತು.. ಅದರ ಜೊತೆ ಜೊತೆಗೆ ಸಂಸ್ಥೆಯ ಬೆಳವಣಿಗೆಯ ಬಗೆಗೆ ಕಾಳಜಿಯೂ ಇತ್ತು.
ಈ ರೀತಿಯಾಗಿ ಜನ್ಮ ತಾಳಿದ *ಯುವ ತೇಜಸ್ಸು ಸಂಸ್ಥೆ* ಈಗಾಗಲೇ ತನ್ನ ಸಮಸ್ತ ದಾನಿಗಳ ನೆರವಿನಿಂದ ‌ಹತ್ತು ಹಲವು ಅಸಹಾಯಕರ ಕಣ್ಣೊರೆಸುವ ಪ್ರಯತ್ನ ಮಾಡಿದೆ. 16 ಯೋಜನೆಗಳ ಸೇವಾ ಕೈಂಕರ್ಯವನ್ನು ಯಶಸ್ವಿ ಯಾಗಿ ಪೂರ್ಣಗೊಳಿಸಿದೆ. ಹೀಗೆ ಗೆಳೆಯರ ಗುಂಪೊಂದು ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಸಮಯ ಪೋಲು ಮಾಡುವುದಷ್ಟೇ ಅಲ್ಲದೇ,  ಸಮಾಜಮುಖಿ ಕಾರ್ಯಗಳನ್ನು ಕೂಡ  ಮಾಡಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದೆ.
 ಹಲವು ಸೇವಾ ಸಂಸ್ಥೆಗಳ ಮಧ್ಯೆ *ಯುವ ತೇಜಸ್ಸು* ವಿಭಿನ್ನ ಅನಿಸಿಕೊಂಡಿದ್ದು ಅದರ ಔಚಿತ್ಯ ಹಾಗೂ ಪಾರದರ್ಶಕ ಗುಣಗಳಿಂದ ಅಂದರೆ ತಪ್ಪಲ್ಲ. ದಾನಿಗಳ ನೆರವನ್ನು ಸ್ಮರಿಸುತ್ತ, ತನ್ನ ಖಾತೆಗೆ ಹಣ ಜಮಾ ಆಗುವ ಹಾಗೂ ಫಲಾನುಭವಿಗಳಿಗೆ ನೀಡಿದ ಧನ ಸಹಾಯದ ಪ್ರತಿ ಹಣದ ವ್ಯವಹಾರ ಚಾಚೂತಪ್ಪದೇ ತನ್ನ ಫೇಸ್ ಬುಕ್ ಪೇಜ್ ಹಾಗೂ ವಾಟ್ಸಪ್ ಗ್ರೂಪ್ ಗಳಲ್ಲಿ ಪ್ರಕಟಿಸುವ ಸಂಸ್ಥೆಯು ದಾನಿಗಳಲ್ಲಿ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ರೀತಿಯಾಗಿ ಸಂಸ್ಥೆಯು ಬಡವರ ಪಾಲಿಗೆ ಒಂದು ಆಶಾದಾಯಕ ಶಕ್ತಿಯಾಗಿ ಗೋಚರಿಸಿರುವುದು ಸುಳ್ಳಲ್ಲ. ಈ ಸಂಸ್ಥೆಯಿಂದ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳು ನಡೆಯಲೆಂದು ವೀರಕೇಸರಿ ಫೇಸ್’ಬುಕ್ ಪೇಜ್ ನ ಅಡ್ಮಿನ್ ಬಳಗ ತನ್ನ ಹಿಂಬಾಲಕರ ಜೊತೆಗೂಡಿ ಶುಭಹಾರೈಸುತ್ತದೆ.
ಈ ಸಂಸ್ಥೆಯ ಮುಂದಿನ ಯಶಸ್ಸಿಗೆ ಧೈರ್ಯ ತುಂಬುವ ಜೊತೆಗೆ ತನುಮನಧನ ಸಹಾಯ ಮಾಡಲಿಚ್ಚಿಸುವವರು ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಅಥವಾ ‌ವಾಟ್ಸಪ್ ನಲ್ಲಿ ಸಂದೇಶ ಕಳುಹಿಸಬಹುದು.
1. +919481975376
2. +919980695627 
3. +919900957906
“ಯುವ ತೇಜಸ್ಸು” ಸಂಸ್ಥೆಯ ಸಮಾಜಮುಖಿ ಕಾರ್ಯಗಳ ಕೆಲ ಫೋಟೋಗಳು :
✍ ಭಗವಪ್ರೀಯಾ
Powered by Blogger.