Veerakesari 01:15
loading...
ಹಾಸನ ಜಿಲ್ಲೆಯ ಕೊಣನೂರು ಸಮೀಪದ ಹಾನಗಲ್ ಕರ್ಕಿಕೊಪ್ಪಲು ಗ್ರಾಮದಲ್ಲಿ ಕಳೆದ ಗುರುವಾರ (ದಲಿತ) ವಕ್ತಿಯೊಬ್ಬರನ್ನು ಮುಸಲ್ಮಾನ ಆಗಂತುಕರು ಕೊಚ್ಚಿ ಹತ್ಯೆ ಮಾಡಿದ್ದಾರೆ.
ಹಾನಗಲ್ ಗ್ರಾಮದ ದಲಿತ ಕಾಲೊನಿ ನಿವಾಸಿ ಹರೀಶ್(33) ಹತ್ಯೆಗೀಡಾದವರು. ಹರೀಶ್ ತಮ್ಮ ಪತ್ನಿಯೊಂದಿಗೆ ಕಳೆದ ಐದಾರು ವರ್ಷಗಳಿಂದ ಕರ್ಕಿಕೊಪ್ಪಲು ಗ್ರಾಮದ ಜಮೃದ್ ಸಾಬ್ ಮನೆಯಲ್ಲಿ ಕೂಲಿಕೆಲಸ ಮಾಡಿಕೊಂಡಿದ್ದರು ಆದರೆ ಕಳೆದ ಕೆಲ ದಿನಗಳಿಂದ ಮನೆ ಕೆಲಸಕ್ಕೆ ಹೋಗಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಜಮೃದ್ ಸಾಬ್ ಮತ್ತು ಆತನ ಮಕ್ಕಳಾದ ಸದ್ದಾಂ ಮತ್ತು ಇಫ್ರಾನ್ ಗುರುವಾರದಂದು ಹರೀಶ್ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ನಂತರ ಪ್ರಕರಣ ಮುಚ್ಚಿಹಾಕಲು ಆತನ ಹೆಣವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮೃತನ ಸಹೋದರ ದೇವರಾಜು ಅವರಿಗೆ ಕರೆಮಾಡಿ ‘ನಿನ್ನ ತಮ್ಮ ವಿಷ ಸೇವಿಸಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆ ತಂದಿದ್ದೇವೆ’ ಎಂದು ತಿಳಿಸಿದ್ದಾರೆ. ಇದನ್ನು ನಿಜವೆಂದು ನಂಬಿದ ದೇವರಾಜು,ಸಂಬಂಧಿಕರೊಂದಿಗೆ ಆಸ್ಪತ್ರೆಗೆ ತೆರಳಿ ಶವವನ್ನು ಖಾಸಗಿ ವಾಹನದಲ್ಲಿ ಸ್ವಗ್ರಾಮ ಹಾನಗಲ್‌ಗೆ ತೆಗೆದುಕೊಂಡು ಬಂದಿದ್ದಾರೆ. 
ಶುಕ್ರವಾರ ಬೆಳಿಗ್ಗೆ ಅಂತ್ಯಕ್ರಿಯೆಗಾಗಿ ಮೃತದೇಹವನ್ನು ತೊಳೆಯಲು ಬಟ್ಟೆ ಬಿಚ್ಚಿದಾಗ, ಎದೆಯ ಭಾಗಕ್ಕೆ ಕಲ್ಲಿನಿಂದ ಜಜ್ಜಿರುವುದು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವುದು, ಕಾಲುಗಳನ್ನು ಕೊಚ್ಚಿ ಗಾಯಗೊಳಿಸಿರುವ ಗುರುತು ಕಂಡು ಬಂದಿದೆ. ಶವವನ್ನು ಮತ್ತೆ ಕೊಣನೂರು ಆಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಗೆಲಸಕ್ಕೆ ಹೋಗಿಲ್ಲ ಎಂದು ಹರೀಶ್ ಅವರ ಹತ್ಯೆ ನಡೆದಿದೆ ಎಂದು ಕುಟುಂಬಸ್ತರು ಕೋಣನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹತ್ಯೆ ನಡೆಸಿದ ನಂತರ ಮುಸಲ್ಮಾನ ಕುಟುಂಬ ಗ್ರಾಮದಿಂದಲೇ ಪಲಾಯನ ನಡೆಸಿದ್ದು ಆರೋಪಿಗಳ ಸೆರೆಗೆ ಪೋಲೀಸರು ಬಲೆ ಬೀಸಿದ್ದಾರೆ.
ಸೋಕಾಲ್ಡ್ ದಲಿತ ಸಂಘಟನೆಗಳು ದಲಿತನನ್ನು ಕೊಚ್ಚಿ ಕೊಲೆಮಾಡಿ ನಾಲ್ಕು ದಿನಗಳಾದರೂ ಇನ್ನೂ ಯಾವುದೇ ಹೋರಾಟ ಕೈಗೊಂಡಿಲ್ಲ. ಯಾವಾಗ ನೋಡಿದರೂ ದಲಿತರ ಮೇಲೆ ಮೇಲ್ವರ್ಗದವರಿಂದ ಹಲ್ಲೆ ಎಂದೂ TRP ಗಾಗಿ ವಾರಗಟ್ಟಲೇ ಕೂಗಾಡೋ ಮಾಧ್ಯಮಗಳು ಇಂದು ಮುಸಲ್ಮಾನ ಜಿಹಾದಿಗಳು ದಲಿತನ ಹತ್ಯೆ ಮಾಡಿದ್ದರೂ ಯಾವ ಸುದ್ದಿಯನ್ನೂ ಪ್ರಕಟಿಸಿಲ್ಲ. 
ಯಾವುದೇ ಪ್ರಶಸ್ತಿ ವಾಪಾಸ್ ಆಗಿಲ್ಲ, ಗಂಜಿಕೇಂದ್ರಗಳ ಸ್ಥಾಪನೆಯಾಗಿಲ್ಲ,  ಅಸಹಿಷ್ಣುತೆ ಬುಗಿಲೆದ್ದಿಲ್ಲ ಒಟ್ಟಿನಲ್ಲಿ ಮುಸಲ್ಮಾನರು ಏನೇ ಮಾಡಿದರು ದೇಶ ಸಹಿಷ್ಣುವಾಗಿರುತ್ತೇ ಹಿಂದೂಗಳು ಸಣ್ಣ ತಪ್ಪು ಮಾಡಿದರೂ ದೇಶದೆಲ್ಲೆಡೆ ಅಸಹಿಷ್ಣುತೆ ಭುಗಿಲೇಳುತ್ತೆ.
#ಥೂಬುದ್ದಿಜೀವಿಗಳ #ಥೂಮಾದ್ಯಮಗಳ
loading...

Post a Comment

Powered by Blogger.