loading...
ಕಳೆದೊಂದು ತಿಂಗಳಿನಿಂದ ತೀವ್ರ ಕುತೂಹಲ ಕೆರಳಿಸಿದ್ದ ಆಶಿತ್ ಕಲ್ಲಾಜೆ, ಗುರುಪ್ರಸಾದ್ ಪಂಜ ಮತ್ತು ಸುದ್ದಿ ಬಿಡುಗಡೆಯ ಶಿವಾನಂದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಕ್ಷುಲಕ ವಿಷಯವೊಂದಕ್ಕೆ ಆರಂಭಗೊಂಡಿದ್ದ ಶೀತಲ ಸಮರವು ಇಂದು ಪೋಲಿಸ್ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ತಾರ್ಕಿಕ ಅಂತ್ಯಗೊಂಡಂತೆ ಕಂಡರೂ ಇದು ಒಂದು ಹೊಸ ಆಯಾಮಕ್ಕೆ ತೆರೆದುಕೊಳ್ಳುವುದರಲ್ಲಿ ಅನುಮಾನವಿಲ್ಲ.
ಆಶಿತ್ ಕಲ್ಲಾಜೆಯವರ ಮೇಲೆ ಠಾಣೆಯೊಂದರಲ್ಲಿ ಕೇಸ್ ದಾಖಲಾಗಿದೆ ಎನ್ನಲಾದ, ಅವರನ್ನು ಪೊಲೀಸರು ಹುಡುಕುತ್ತಿದ್ದಾರೆ, ಅವರ ವಿಳಾಸ ಕೊಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಆಶಿತ್ ರ ಆಪ್ತರಲ್ಲಿ ಮೆಸೇಜ್ ಮೂಲಕ ಗುಲ್ಲೆಬ್ಬಿಸಿ, ತನ್ಮೂಲಕ ಭಯದ ವಾತಾವರಣ ಸೃಷ್ಟಿಸುವ ವ್ಯವಸ್ಥಿತ ಸಂಚೊಂದನ್ನು ಸುದ್ದಿ ಬಿಡುಗಡೆಯು ರೂಪಿಸಿಕೊಂಡಿತ್ತು. ಆದರೆ ಇಂದು ಈ ವಿಚಾರವಾಗಿ ಸೂಕ್ತ ದಾಖಲಾತಿ ಹಾಗೂ ಮಾಹಿತಿ ನೀಡುವಲ್ಲಿ ಸಂಪೂರ್ಣ ಎಡವಿದ್ದು, ಮೇಲ್ನೋಟಕ್ಕೆ ಇದೊಂದು ಷಡ್ಯಂತ್ರವೆಂಬುದು ಮತ್ತೊಮ್ಮೆ ಸಾಬೀತಾಯಿತು.

ಇಂದು ಗುರುಪ್ರಸಾದ್ ಪಂಜರವರು ಪ್ರಾರಂಭದಿಂದಲೇ ಸುದ್ದಿಬಿಡುಗಡೆ ಶಿವಾನಂದರಿಗೆ ಹಲವು ಬಾರಿ ಕೇಳಿದ ಆರೋಪಗಳ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಚಡಪಡಿಸಿದರು. ಪತ್ರಿಕಾ ಧರ್ಮವನ್ನೆ ಮರೆತಂತೆ ವರ್ತಿಸಿ ಗುರುಪ್ರಸಾದ್ ಪಂಜ ಮತ್ತು ಆಶಿತ್ ಕಲ್ಲಾಜೆಯವರನ್ನು ನಿಂದಿಸಲೆಂದೇ ತನ್ನ ಸಂಪಾದಕೀಯವನ್ನು ಬಳಸಿಕೊಂಡಿದ್ದ ಸಂಪಾದಕರು ಇದೀಗ ವೈಯಕ್ತಿಕ ನಿಂದನೆಯ ಆರೋಪಕ್ಕೆ ಗುರಿಯಾಗಿ ಮುಖಭಂಗಕ್ಕೀಡಾದರು. ಇವರ ಸಮಜಾಯಿಷಿಗೆ ತೃಪ್ತರಾಗದ ಸಾರ್ವಜನಿಕರು ಈ ವಿಚಾರವಾಗಿ ಅಸಮಾಧಾನಗೊಂಡು ಸ್ವಯಂ ಪ್ರೇರಿತವಾಗಿ ತಿರುಗಿ ಬಿದ್ದು, ಸುದ್ದಿ ಬಿಡುಗಡೆ ಪತ್ರಿಕೆ ವಿರುದ್ದ ಘೋಷಣೆ ಕೂಗಿದ ಘಟನೆಯೂ ನಡೆಯಿತು.ಪೊಲೀಸರು ಇನ್ಯಾರೂ ಕೂಡ ವೈಯಕ್ತಿಕ ದ್ವೇಷದ ಮೇಲೆ ಪತ್ರಿಕೆಯಲ್ಲಾಗಲಿ, ಸಾಮಾಜಿಕ ಜಾಲತಾಣದಲ್ಲಾಗಲಿ ವೈಯಕ್ತಿಕ ನಿಂದನೆ ಮಾಡಬಾರದಂತೆ ತಾಕೀತು ಮಾಡಿದ್ದಾರೆ. ಕೊನೆಗೂ ಸ್ಪಷ್ಟ ನಿರ್ಧಾರವೊಂದಕ್ಕೆ ಬರಲಾರದೆ ಚರ್ಚೆ ಚರ್ಚೆಯಲ್ಲಿಯೇ ಕೊನೆಗೊಂಡಿದ್ದು, ಇದು ಮಗದೊಮ್ಮೆ ಬೇರೆ ರೂಪ ತಾಳುವ ಸಾಧ್ಯತೆಯೂ ಇಲ್ಲದಿಲ್ಲ.

ಈ ಸಂದರ್ಭ ಸುಳ್ಯ ತಾಲೂಕಿನ ವೃತ್ತ ನಿರೀಕ್ಷಕರಾದ ಕೃಷ್ಣಯ್ಯ, ಬೆಳ್ಳಾರೆ ಉಪ ನಿರೀಕ್ಷಕರಾದ ಚೆಲುವಯ್ಯ ಮತ್ತು ಇನ್ನೂ ಹಲವು ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಗೂ ಪಂಜದ ಪ್ರಮುಖರಾದ ಶ್ರೇಯಂಸ್ ಕುಮಾರ್ ಶೆಟ್ಟಿಮೂಲೆ, ಗುರುಪ್ರಸಾದ್ ಪಂಜ, ಆಶಿತ್ ಕಲ್ಲಾಜೆ, ಸುದ್ದಿ ಬಿಡುಗಡೆಯ ಸಂಪಾದಕರಾದ ಯು.ಪಿ ಶಿವಾನಂದ, ಹರೀಶ್ ಬಂಟ್ವಾಳ, ಪತ್ರಕರ್ತರಾದ ಈಶ್ವರ ವಾರಾಣಾಸಿ, ವಿಶ್ವನಾಥ ಮೋಟುಕಾನ ಮತ್ತು ಊರ ಪ್ರಮುಖರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
loading...
Post a Comment