Veerakesari 22:13
veerakesari.in
​ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದ ಮುಸ್ಲಿಂ ಯುವಕರೊಬ್ಬರು ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಸಿಮೆಂಟ್ ನೀಡುವುದಕ್ಕೆ ಮುಂದಾಗಿದ್ದಾರೆ.
ಯುವಕ ಶಂಸುದ್ದೀನ್ ನದಾಫ್ ಎಂಬುವರೇ ಸಿಮೆಂಟ್ ನೀಡಲು ಮುಂದಾಗಿದ್ದು, ಈ ಕುರಿತು ಬುಧವಾರ ಮಾತನಾಡಿ, ಭಾವೈಕ್ಯತೆ ಮೆರೆಯುವ ಕಾರಣಕ್ಕಾಗಿ ರಾಮಮಂದಿರ ನಿರ್ಮಾಣಕ್ಕಾಗಿ ಒಂದು ಚೀಲ ಸಿಮೆಂಟ್ ನೀಡಲಾಗುವುದು. ಏ. 27 ರಂದು ಬೆಳಗ್ಗೆ ತಿರುಪತಿ ಎಕ್ಸ್‍ಪ್ರೆಸ್ ರೈಲಿಗೆ ಪ್ರಯಾಣ ಬೆಳೆಸಲಿದ್ದು, ಅಲ್ಲಿಂದ ಲಖನೌಗೆ ತೆರಳಲಾಗುವುದು ಎಂದು ತಿಳಿಸಿದ್ದಾರೆ.
ಏ. 29 ರಂದು ಅಯೋಧ್ಯೆ ತಲುಪಲಾಗುವುದು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಒಂದು ಸಿಮೆಂಟ್ ಚೀಲದ ಮೊತ್ತದ ಹಣ ಪಾವತಿಸಿ ರಸೀದಿ ಪಡೆಯಲಾಗುವುದು. ಸಿಮೆಂಟ್ ನೀಡುವುದಕ್ಕೆ ಯಾರ ಒತ್ತಡವೂ ಇಲ್ಲ. ಸ್ವಯಂ ಪ್ರೇರಣೆಯಿಂದ ನೀಡಲಾಗುತ್ತಿದೆ. ತಮ್ಮ ಈ ಸೇವೆಗೆ ಕುಟುಂಬದ ಸಹಕಾರವೂ ಇದೆ. ಆದರೆ ಕೆಲವರು ವಿರೋಧ ವ್ಯಕ್ತಪಡಿಸಿದರು ಎಂದು ನದಾಫ್‌ ತಿಳಿಸಿದ್ದಾರೆ.
ಚಿತ್ರನಟರೂ ಆಗಿರುವ ನದಾಫ್ ಈಗಾಗಲೇ ಧೂಳಿಪಟ ಸೇರಿದಂತೆ ಮೂರು ಚಿತ್ರಗಳಲ್ಲಿ ಸಹಕಲಾವಿದನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕಲಾವಿದನಾಗಿ ಭಾವೈಕ್ಯತೆ ಮೆರೆಯಬೇಕಾಗಿದ್ದು ತಮ್ಮ ಕರ್ತವ್ಯ ಎಂದ ಅವರು, ನಗರದ ಗವಿಮಠಕ್ಕೆ ಸ್ನೇಹಿತರೊಂದಿಗೆ ಆಗಮಿಸಿ ಗವಿಸಿದ್ಧೇಶ್ವರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
Source - Vijaya Karnataka
loading...

Post a Comment

Powered by Blogger.