Veerakesari 07:52
ಕ್ಯಾಪ್ಟನ್ ಸೌರಬ್ ಕಾಲಿಯಾ : ಕಾರ್ಗಿಲ್ ಯುದ್ಧದ ಪ್ರಾರಂಭವಾಗೋ ಮೊದಲೇ ಭಾರತ ಮಾತೆಯ ಪಾದಗಳಿಗೆ ತನ್ನ ಪ್ರಾಣವನ್ನು ಅರ್ಪಿಸಿದ ವೀರ ಸೇನಾನಿ ಕ್ಯಾಪ್ಟನ್ ಸೌರಬ್ ಕಾಲಿಯಾ.
ಭಾರತ ಎದುರಿಸಿದ ಯುದ್ದಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಕಾದಾಡಿದ ಕಾರ್ಗಿಲ್ ಯುದ್ದವೇ ದೊಡ್ಡ ಯುದ್ದವೆನ್ನಬಹುದು. ನಮ್ಮ ಸೈನಿಕರ ಕೆಚ್ಚೆದೆಯ ಹೋರಾಟ, ಸಾಹಸಗಳಿಂದ ಭಾರತ ಈ ಯುದ್ದದಲ್ಲಿ ಜಯಭೇರಿ ಬಾರಿಸಿತು. ನಿಯಮಗಳನ್ನು ಗಾಳಿಗೆ ತೂರಿ 1999ರಲ್ಲಿ ಪಾಪಿ ಪಾಕಿಸ್ತಾನ ನಮ್ಮ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಭಾರತೀಯ ನೆಲೆಗಳಿಗೆ ತನ್ನ ಸೈನ್ಯ ಮತ್ತು ಕಾಶ್ಮೀರಿ ಉಗ್ರರನ್ನು ನುಸುಳಿಸಿತು. ಇದೇ ಯುದ್ದದ ಕಾರಣ. ಕಾಶ್ಮೀರಿ ಉಗ್ರಗಾಮಿಗಳು ಮತ್ತು ಪಾಕ್ ಸೈನಿಕರು ನಮ್ಮ ಹಲವು ಭಾರತೀಯ ನೆಲೆಗಳನ್ನು ಆಕ್ರಮಿಸಿಕೊಂಡರು. ಈ ನೆಲೆಗಳನ್ನು ಮರುವಶ ಪಡೆದು ಕೊಳ್ಳಲು ಕಾರ್ಗಿಲ್ ಜಿಲ್ಲೆ ಮತ್ತು ಗಡಿ ಪ್ರದೇಶಗಳಲ್ಲಿ 1999ರ ಮೇ ಮತ್ತು ಜುಲೈ ನಡುವೆ ನಡೆದ ರೋಚಕ ಯುದ್ದವೇ ಕಾರ್ಗಿಲ್ ಯುದ್ದ.
ಕ್ಯಾಪ್ಟನ್ ಸೌರಬ್ ಕಾಲಿಯಾ  ಹಾಗೂ ಅವರ ಪ್ರೀತಿಯ ತಾಯಿ
ಪಾಕಿಸ್ತಾನದೊಂದಿಗೆ ಬಾಂಧವ್ಯ ವೃದ್ಧಿಸಿಕೊಳ್ಳಲು 1998ರಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಾಕಿಸ್ತಾನದ ನವಾಜ಼್ ಷರೀಫ್ ಎದುರು ಕುಳಿತು ಕೈಕುಲುಕಿದರು. ನಾವು ಪಾಕಿಸ್ತಾನಕ್ಕೆ ರೈಲು ಬಿಟ್ಟದ್ದಾಯಿತು. ಬಸ್ಸೂ ಓಡಿಸಿದ್ದಾಯಿತು, ಕೈಕುಲುಕಿದ್ದೂ ಆಯಿತು. ಆದರೆ ಪಾಕಿಸ್ತಾನ ಮಾತ್ರ ಬದಲಾಗಲಿಲ್ಲ. ತನ್ನ ನರಿಬುದ್ಧಿಯನ್ನು ಪ್ರದರ್ಶಿಸುವುದಕ್ಕೆ ಪಾಕಿಸ್ತಾನ ತಡ ಮಾಡಲೇ ಇಲ್ಲ.
ಜೋಜಿ ಲಾ ಪಾಸ್, ಅತ್ಯಂತ ಕಡಿದಾದ, ಅಷ್ಟೇ ಕಠಿಣವಾದ ಕೊರಕಲುಗಳು ದಾರಿಯುದ್ದಕ್ಕೂ. ಸ್ವಲ್ಪ ಎಡವಿದರೂ ಪ್ರಪಾತವೇ ಗತಿ. ಇನ್ನು ಮಂಜು ಸುರಿಯುವಾಗಲಂತೂ ಆ ದಾರಿಯಲ್ಲಿ ವಾಹನಗಳಿರಲಿ, ನಡೆದುಕೊಂಡು ಹೋಗುವುದೂ ಕಷ್ಟ. ಮೇ ತಿಂಗಳ ಕೊನೆಯವರೆಗೆ ಮಂಜು ಬೆಟ್ಟ ಪೂರ್ತಿ ಆವರಿಸಿಕೊಂಡಿರುತ್ತದೆ. ಹೀಗಾಗಿ ಆ ವೇಳೆಯಲ್ಲಿ ಸೈನಿಕರೂ ಇರುವುದಿಲ್ಲ. ಅವರಿಗೆ ಬೇಕಾದ ವಸ್ತುಗಳನ್ನು ತಲುಪಿಸುವುದಕ್ಕೂ ಆಗೋದಿಲ್ಲ. ಈ ವಿಚಾರವನ್ನು ಚೆನ್ನಾಗಿ ಅರಿತ ಸೇನಾ ನಾಯಕ ಪರ್ವೇಜ್ ಮುಷರ್ರಫ್ ಏಪ್ರಿಲ್ ಆರಂಭದಲ್ಲೇ ತನ್ನ ಸೈನಿಕರಿಗೆ ಆದೇಶ ನೀಡತೊಡಗಿದ.
ಕಾರ್ಗಿಲ್ ನಲ್ಲಿ ಅತಿ ಹಿಮ ಬೀಳುತ್ತಿದ್ದಂತೆ ಭಾರತೀಯ ಸೇನೆ ಹಿಂದೆ ಬರುತ್ತದೆ. ನಂತರ ಹಿಮ ಕರಗುತ್ತಲೇ ಮತ್ತೆ ಅಲ್ಲಿಗೆ ಹೋಗುತ್ತದೆ. ಇದು ಹಿಂದೆಯಿಂದ ನಡೆದು ಬಂದಿರುವಂಥ ಪದ್ದತಿಯಾಗಿತ್ತು.
ಮಂಜು ಕರಗುವುದನ್ನೆ ಕಾಯುತ್ತಿದ್ದ ಪಾಕಿಗಳು ಏಪ್ರಿಲ್ ಕೊನೆಕೊನೆಯಲ್ಲಿ ಕಾರ್ಗಿಲ್‌ನ, ಪೂರ್ವ ಬಟಾಲಿಕ್‌ನ ಮತ್ತು ದ್ರಾಸ್‌ನ ಉತ್ತರ ದಿಕ್ಕಿನ ಬೆಟ್ಟಗಳನ್ನು ಏರತೊಡಗಿದರು. ಗಟ್ಟಿಮುಟ್ಟಾದ ಬಂಕರ್‌ಗಳನ್ನು ಕಟ್ಟಿಕೊಂಡರು. ಮೇ ಆರಂಭದ ವೇಳೆಗೆ ಅವರ ತಯಾರಿ ಸಂಪೂರ್ಣಗೊಂಡಿತ್ತು. ಮೇ ಕೊನೆಯವರೆಗೂ ಮಂಜು ಕರಗದು, ಜೋಜಿ ಲಾ ತೆರೆದುಕೊಳ್ಳದು ಅಂದುಕೊಂಡಿದ್ದ ಪಾಕಿಗಳ ಲೆಕ್ಕಾಚಾರ ತಲೆಕೆಳಗಾಯಿತು. ಆ ವರ್ಷ ಮೇ ಆರಂಭದಲ್ಲಿಯೇ ಮಂಜು ಕರಗಿ ಜೋಜಿ ಲಾ ತೆರೆದುಕೊಂಡಿತ್ತು.
ಪಾಕ್ ಸೇನೆ ಬೆಟ್ಟದ ಮೇಲಿರುವ ಸುದ್ದಿ ದನಗಾಹಿಗಳ ಮೂಲಕ ಭಾರತೀಯ ಸೇನೆಗೆ ವಿಷಯ ತಲುಪಿತ್ತು. ವರದಿ ತರಲೆಂದು ಸೌರಭ್ ಕಾಲಿಯಾ ನೇತೃತ್ವದಲ್ಲಿ ಐವರನ್ನು ಗುಡ್ಡ ಹತ್ತಿಸಿತು. 
ಕಾರ್ಗಿಲ್ ನ ಆ ಪರ್ವತಗಳಲ್ಲಿ ಸುಮಾರು 20-25 ನುಸುಳುಕೋರರು ಬಜರಂಗ್ ಪೋಸ್ ನಲ್ಲಿ ಬಂದು ಕೂತಿದ್ದಾರೆಂಬ ಮಾಹಿತಿ ಇತ್ತು. ಈ ಮಾಹಿತಿಯ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ಹಾಗು ನುಸುಳುಕೋರರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಮೇ 15 ರಂದು ಕ್ಯಾಪ್ಟನ್ ಸೌರಬ್ ಕಾಲಿಯಾ ಮತ್ತು 5 ಜನ ಸಂಗಡಿರೊಂದಿಗೆ ಕಸ್ಕರ್ ಭಾಗದಲ್ಲಿದ್ದ ಬಜರಂಗ್ ಪೋಸ್ ಕಡೆಗೆ ಹೊರಟ.
ದಟ್ಟವಾದ ಕಾಡು, ಮೈಕೊರೆಯುವ ಛಳಿ, ಅಘಾದವಾದ ಹಿಮಪಾತವನ್ನು ಲೆಕ್ಕಿಸದೇ ಸೌರಬ್ ಮುನ್ನಡೆದ. ಬಜರಂಗ್ ಪೋಸ್ಟ್ ಹತ್ತಿರ ಹೋಗುತ್ತಿದ್ದಂತೆ ಸೌರಬ್ ಮತ್ತು ಅವನ ತಂಡದ ಮೇಲೆ ನೂರಾರು ಜನ ಪಾಪಿ ಪಾಕಿಸ್ತಾನಿಯರು ಗುಂಡಿನ ಮಳೆ ಸುರಿಸಲಿ ಶುರು ಮಾಡಿದರು. ಸೌರಬ್ ಮತ್ತು ಅವನ ಸಂಗಡಿಗರು ಕೆಚ್ಚೆದೆಇಂದ ಹೋರಾಡುತ್ತಿದ್ದರು. ಪಾಕಿಯರ ಗುಂಡಿನ ಮಳೆ ನಿಲ್ಲಲೇ ಇಲ್ಲ. ತಮ್ಮ ಬಳಿ ಇದ್ದ ಮದ್ದು-ಗುಂಡುಗಳು ಖಾಲಿಯಾಗುತ್ತಿರುವುದನ್ನು ಅರಿತ ಸೌರಬ್ ಅಲ್ಲಿಂದ ತಪ್ಪಿಸಿಕೊಂಡು ವಾಪಸ್ ಬರಲು ಪ್ರಯತ್ನಿಸಿದ.
ಆದರೆ ದುರದೃಷ್ಟವಷಾತ್ ಪಾಕಿಯರು ಈ 5 ಜನರನ್ನು ಸುತ್ತುವರೆದು  ಬಂಧಿಸಿದರು. ಇಲ್ಲಿಂದ ಮುಂದಿನ ಕಥೆ ದಾರುಣವಾದದ್ದು. ಈ ಐದು ಜನರನ್ನು ಪಾಕಿಯರು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಕರೆದೊಯ್ದು ಸುಮಾರು 25 ದಿನಗಳ ಕಾಲ ಅವರಿಗೆ ಚಿತ್ರಹಿಂಸೆ ಕೊಟ್ಟು ಕೊನೆಯಲ್ಲಿ ಗುಂಡಿಟ್ಟು ಕೊಂದರು. ಜೂನ್ 9 ರಂದು ಪಾಪಿಸ್ತಾನ ಸೌರಬ್ನ ದೇಹವನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿತು.
ದೆಹಲಿಯಲ್ಲಿ ಅವನ ದೇಹದ ಮರಣೋತ್ತರ ಪರೀಕ್ಷೆಯನ್ನು ಮಾಡಿದ ವೈದ್ಯರು ದಂಗುಬಡಿದರು. ಆ ಪರಿಯ ಚಿತ್ರಹಿಂಸೆಯ್ನು ಅವರು ಎಂದೂ ನೋಡಿರಲಿಲ್ಲ. ದೇಹವನ್ನು ಸಿಗರೇಟ್ ಇಟ್ಟು ಸುಟ್ಟಿದ್ದರು. ಕಬ್ಬಿಣದ ಕಂಬಿಗಳನ್ನು ಕಾಯಿಸಿ ಕಣ್ಣುಗುಡ್ಡೆಗಳನ್ನು ಅದರಲ್ಲಿ ಸುಟ್ಟು ಕಿತ್ತು ಹಾಕಿದ್ದರು. ಬೆರಳುಗಳನ್ನು ತುಂಡು ತುಂಡಾಗಿ ಕತ್ತರಿಸಿದ್ದರು. ಚಾಕುವಿನಿಂದ ಚರ್ಮ ಸುಲಿದಿದ್ದರು. ಪ್ರಾಣಿಗಳನ್ನು ಬಿಟ್ಟು ಕಚ್ಚಿಸಿದರು.ಮರ್ಮಾಂಗವನ್ನು ಕತ್ತರಿಸಿ ಬಿಸಾಡಿದರು. ಈ ಎಲ್ಲ ಚಿತ್ರಹಿಂಸೆಯನ್ನು ಕೊಟ್ಟು ಕೊನೆಗೆ ಗೊಂಡಿಟ್ಟುಕೊಂದರು.
ಕಾರ್ಗಿಲ್ ಉಳಿಸಿಕೊಳ್ಳುವುದಕ್ಕಾಗಿ ಅಂದು 527ಸೈನಿಕರು ತಮ್ಮ ಜೀವವನ್ನೇ ಬಲಿ ಕೊಟ್ಟರು. 1363ಸೈನಿಕರು ಊನಗೊಂಡರು, ಅಂಗಾಂಗ ಕಳೆದುಕೊಂಡರು. ಮೇಜರ್ ಪದ್ಮಪಾಣಿ ಆಚಾರ್ಯ ತೀರಿಕೊಂಡಾಗ ಅವರ ಪತ್ನಿಯ ಹೊಟ್ಟೆಯಲ್ಲಿ ಚೊಚ್ಚಲ ಮಗು ಬೆಳೆಯುತ್ತಿತ್ತು, ಕ್ಯಾಪ್ಟನ್ ವಿಕ್ರಂ ಬಾತ್ರಾ ಮಡಿದಾಗ ಅವರ ಭಾವಿ ಪತ್ನಿ ವಿವಾಹಕ್ಕೆ ತಯಾರಿ ನಡೆಸುತ್ತಿದ್ದಳು, ಲೆಫ್ಟಿನೆಂಟ್ ಹನೀಫುದ್ದೀನ್ ಹುತಾತ್ಮನಾಗುವುದರೊಂದಿಗೆ ಆತನ ವಿಧವೆ ತಾಯಿ ಇದ್ದ ಒಬ್ಬ ಮಗನನ್ನೂ ಕಳೆದುಕೊಂಡಳು,ಕ್ಯಾಪ್ಟನ್ ಕೆ. ಕ್ಲಿಫೋರ್ಡ್ ನೊಂಗ್ರುಮ್ ಮಡಿದಾಗ ಒಂದಿಡೀ ಮೇಘಾಲಯ ರಾಜ್ಯವೇ ಕಣ್ಣೀರ ಕಡಲಾಗಿತ್ತು.ದೇಶಕ್ಕಾಗಿ ತಮ್ಮೆಲ್ಲ ಸುಖ ಸಂತೋಷಗಳನ್ನು ಬದಿಗಿಟ್ಟು ಸೇವೆಗೈಯುವ ವೀರರನ್ನು, ದೇಶಕ್ಕಾಗಿ ಮಡಿದ ಹುತಾತ್ಮರನ್ನು ಸ್ಮರಿಸುವುದೇ ನಾವು ಅವರಿಗೆ ಸಲ್ಲಿಸಬಲ್ಲ ಕೃತಜ್ಞತೆ.ದೇಶ ಕಾಯುವ ವೀರ ಯೋಧರ ಕುರಿತು ಒಮ್ಮೆಯಾದರೂ ಚಿಂತಿಸುವ ಪ್ರಯತ್ನ ಮಾಡೋಣ. ಈ ದೇಶ ನಮ್ಮದು, ಅದನ್ನು ಪ್ರೀತಿಸೋಣ. 
ಜುಲೈ 26-ಕಾರ್ಗಿಲ್ ವಿಜಯ ದಿನ. ಇಡೀ ಭಾರತವನ್ನೇ ಭಾವನಾತ್ಮಕವಾಗಿ ಒಂದು ಮಾಡಿದ ಆ ಕದನ.
#ವೀರಜವಾನ್_ಅಮರ್_ರಹೇ
#ಜೈ_ಜವಾನ್
-By Mahesh Hiremath
Source : Blog Link
Contact : Facebook Gmail

Veerakesari 06:10
ಕೇರಳ : PFI ಭಯೋತ್ಪಾದಕರ ಉಪಟಳ ದೇಶಾದ್ಯಂತ ದಿನೇ ದಿನೇ ಹೆಚ್ಚಾಗುತ್ತಿದೆ. ದೇಶವಿರೋಧಿ ಉಗ್ರವಾದಿ ಚಟುವಟಿಕೆ, ಹಿಂದೂ ಸಂಘಟನೆ ಕಾರ್ಯಕರ್ತರ ಹತ್ಯೆ, ಹಿಂದೂ ಯುವತಿಯರ ಅಪಹರಣ, ಲವ್ ಜಿಹಾದ್ ಮುಂತಾದ ಕೃತ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ PFI (KFD) ದಕ್ಷಿಣ ಭಾರತದಲ್ಲಿ ಅತೀ ದೊಡ್ಡ ಭಯೋತ್ಪಾದಕ ಸಂಘಟನೆಯಾಗಿ ಬೆಳೆಯುತ್ತಿದೆ.

ಇಷ್ಟೇ ಅಲ್ಲದೆ ಕೇರಳ, ತಮಿಳುನಾಡು, ಕರ್ನಾಟಕದಲ್ಲಿ ಹಿಂದೂ ಕ್ರಿಶ್ಚಿಯನ್ ಜೈನ ಯುವತಿಯರನ್ನು ಲವ್ ಜಿಹಾದಿ ಬಲೆಗೆ ಬೀಳಿಸಿದ ಯುವಕರಿಗೆ ಬಲೆಗೆ ಬಿದ್ದ ಯುವತಿಯರ ಜಾತಿಗನುಗುಣವಾಗಿ ಹಣ ನೀಡಲು ದರವನ್ನೂ ನಿಗದಿ ಮಾಡಿದೆ. ಇದರ ಬಗ್ಗೆ ಈಗಾಗಲೇ ಹಲವು ಸುದ್ದಿವಾಹಿನಿಗಳು ಸುದ್ದಿ ಪ್ರಸಾರ ಮಾಡಿದೆ. ಅಲ್ಲದೆ ಇದೇ ಭಯೋತ್ಪಾದಕರು ಹಿಂದೂ,ಕ್ರಿಶ್ಚಿಯನ್ ಮಹಿಳೆಯರನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂ ಗೆ ಮತಾಂತರ ಮಾಡಿ ಐಸಿಸ್ ಉಗ್ರರಿಗೆ ಮಾರಾಟ ಮಾಡಿದ ಬಗ್ಗೆ ವರದಿಗಳಿವೆ.
ಇದೀಗ ಕಳೆದ ಎರಡು ಮೂರು ದಿನಗಳ ಹಿಂದೆ ಕೇರಳದ ಗಲ್ಲಿ ಗಲ್ಲಿಗಳಲ್ಲಿ ಪೋಸ್ಟರ್ ಒಂದನ್ನು ಇದೇ ಮತಾಂಧ ಸಂಘಟನೆ ಕಾರ್ಯಕರ್ತರು ಅಂಟಿಸಿದ್ದಾರೆ. ಶೃತಿ ಎಂಬ ಹಿಂದೂ ಯುವತಿಯನ್ನು ಅಪಹರಿಸಿ, ಇಸ್ಲಾಂಗೆ ಮತಾಂತರ ಮಾಡಿ ಐಸಿಸ್ ಗೆ ಮಾರಾಟ ಮಾಡಲು ಯತ್ನಿಸಿದ PFI ಉಗ್ರರ ಯತ್ನ ಕೇರಳದ ಹಿಂದೂ ಸಂಘಟನೆ ಹಾಗೂ ಪೋಲೀಸರ ಕಾರ್ಯಾಚರಣೆಯಿಂದ ವಿಫಲವಾಗಿದೆ.
ಯಾರಿದು ಶೃತಿ ??
ಕೇರಳದ ಕಣ್ಣೂರು ನಿವಾಸಿಯಾದ ಶೃತಿ ಎಂಬ ಯುವತಿಯನ್ನು ಅಪಹರಿಸುವಲ್ಲಿ ಸಫಲರಾಗಿದ್ದ PFI ಉಗ್ರರು ಆಕೆಯನ್ನು ಮತಾಂತರ ಗೊಳಿಸಿ ISIS ಗೆ ಮಾರಲು ಎಲ್ಲಾ ತಯಾರಿ ನಡೆಸಿದ್ದರು. ಆದರೆ ಶೃತಿಯ ಹೆತ್ತವರು ತೊಗಾಡಿಯಾ ನೇತೃತ್ವದ ಹಿಂದೂ ಹೆಲ್ಪ್ ಲೈನ್ ಹಾಗೂ ಕೇರಳ ಪೋಲೀಸರಿಗೆ ಶೃತಿ ಅಪಹರಣದ ವಿಷಯ ತಿಳಿಸಿದರು.ತಕ್ಷಣ ಕಾರ್ಯ ಪ್ರವೃತ್ತರಾದ ಹಿಂದೂ ಹೆಲ್ಪ್ ಲೈನ್ ಕಾರ್ಯಕರ್ತರು ಹಾಗೂ ಕೇರಳ ಪೋಲೀಸರು PFI ಭಯೋತ್ಪಾದಕರ ಕಪಿಮುಷ್ಟಿಯಲ್ಲಿದ್ದ ಶೃತಿಯನ್ನು ರಕ್ಷಿಸಿ ತರುವಲ್ಲಿ ಸಫಲರಾಗಿದ್ದರು.

ಶೃತಿಯನ್ನು ಅಪಹರಿಸುವ ಬಗ್ಗೆ ಎಲ್ಲೆಡೆ ಪೋಸ್ಟರ್.!!
ತಮ್ಮ ಯತ್ನ ವಿಫಲವಾಗಿದ್ದೇ ತಡ ಮುಖಭಂಗಕ್ಕೊಳಗಾದ PFI ಭಯೋತ್ಪಾದಕರು ಕೇರಳದ ಕಣ್ಣೂರಿನ ಗಲ್ಲಿಗಲ್ಲಿಗಳಲ್ಲಿ ಪೋಸ್ಟರ್ ಅಂಟಿಸಿ ಕೇರಳ ಪೋಲೀಸರಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ. ಏನಿದೆ ಪೋಸ್ಟರ್ ನಲ್ಲಿ.
ಓ ಸಂಘಿಗಳಿಗೆ ತಲೆಬಾಗುವ ಪೋಲೀಸರೆ.
ನಾವು ಶೃತಿಯನ್ನು ಅಪಹರಿಸಿಯೇ ತೀರುತ್ತೇವೆ.
ನಾವಾಕೆಯನ್ನು ಸಿರಿಯಾ ಯೆಮನ್ ಗೆ ಕೊಂಡು ಹೋಗಿ ISIS ಉಗ್ರರಿಗೆ ದಾನವಾಗಿ ನೀಡುತ್ತೇವೆ.
ನಿಮ್ಮಿಂದ ಏನು ಸಾಧ್ಯವೋ ಅದನ್ನು ಮಾಡಿ
ನಿಮ್ಮಿಂದ ನಮ್ಮನ್ನು ತಡೆಯಲು ಸಾಧ್ಯವೇ, ನೋಡೋಣ.
- Popular Front Of India
ಇಂಗ್ಲಿಷ್ ನಲ್ಲಿ -

“DEAR SPINELESS POLICE,
WHICH BOWS DOWN TO SANGHI FORCES,
WE HAVE DECIDED TO TAKE SHRUTI.
WE WILL TAKE HER TO SYRIA OR YEMEN
AND GIFT HER TO ISIS.
DO WHAT YOU CAN,
LET US SEE IF YOU CAN STOP US!”
-POPULAR FRONT OF INDIA
ISIS ರಕ್ತ ಪಿಶಾಚಿ ಇಸ್ಲಾಮಿಕ್ ಉಗ್ರರ ಜೊತೆ PFI ಉಗ್ರರಿಗೆ ಇರುವ ಅಕ್ರಮ ಸಂಬಂಧದ ಬಗ್ಗೆ ಹೀಗೆ ರಾಜಾರೋಷವಾಗಿ ಹೇಳಿಕೆ ಕೊಡುತ್ತಿದ್ದರು, ನಮ್ಮ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಈ ಭಯೋತ್ಪಾದಕ ಸಂಘಟನೆ ನಿಶೇಧಿಸದೆ ಕೈಕಟ್ಟಿ ಕುಳಿತಿದೆ. ಮುಂದೆ ಯಾವುದಾದರೂ ಮುಖ್ಯಮಂತ್ರಿಯೋ, ಪ್ರಧಾನ ಮಂತ್ರಿಯೋ ಅಥವಾ ಸಂಸದನ ಮಗಳ ಅಪಹರಣ ಮಾಡಿ ISIS ಗೆ ಮಾರಿದಾಗ ಎಚ್ಚರವಾಗಿ ಬಹುದೋ ಏನೋ.

ದಯವಿಟ್ಟು ಶೇರ್ ಮಾಡಿ, ನಮ್ಮ ಅಕ್ಕ ತಂಗಿಯಂದಿರನ್ನು ಈ ಭಯೋತ್ಪಾದಕ ಹಂದಿಗಳಿಂದ ರಕ್ಷಣೆ ಮಾಡೋಣ.
loading...

Veerakesari 22:26
ನೌಕಾಪಡೆಯ ಅತ್ಯುನ್ನತ ಶ್ರೇಣಿಯ ಮಾರ್ಕೋಸ್ ಸೈನಿಕರಿಂದ ನದಿಗಳಲ್ಲೂ ಗಸ್ತು
ನವದೆಹಲಿ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮಿತಿ ಮೀರಿರುವ ಭಯೋತ್ಪಾದನಾ ಚಟುವಟಿಕೆ ಮಟ್ಟಹಾಕಲು ಕಠಿಣ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರ, ಉಗ್ರ ನಿಗ್ರಹ ಕಾರ್ಯಕ್ಕೆ ಮತ್ತಷ್ಟು ಬಲ ನೀಡುವ  ಉದ್ದೇಶದಿಂದ ನೌಕಾಪಡೆಯ ಅತ್ಯುನ್ನತ ಶ್ರೇಣಿ ಮಾರ್ಕೋಸ್ ಕಮಾಂಡೊಗಳನ್ನು (ಮರೀನ್ ಕಮಾಂಡೋಸ್-ಮಾರ್ಕೋಸ್) ನಿಯೋಜಿಸಿದೆ.
ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ನದಿಗಳ ಗುಂಟ ನಡೆಯುತ್ತಿರುವ ಉಗ್ರರ ಚಟುವಟಿಕೆಗಳನ್ನು ನಿರ್ಮೂಲನೆ ಮಾಡಲು ಲೆಫ್ಟಿನೆಂಟ್ ಕಮಾಂಡರ್ ನೇತೃತ್ವದಲ್ಲಿ ಮೂವತ್ತು ಮಾರ್ಕೋಸ್ ಪಡೆಗಳನ್ನು ನಿಯೋಜನೆ ಮಾಡಲಾಗಿದ್ದು,  ಝೇಲಂ ಸಹಿತ ಕಾಶ್ಮೀರದ ಹಲವು ನದಿಗಳಲ್ಲಿ ಗಸ್ತು ತಿರುಗಿ, ಉಗ್ರರನ್ನು ಸದೆಬಡಿಯಲು ಈ ಕಮಾಂಡೊ ಪಡೆ ಸಮರ್ಥವಾಗಿದೆ. ನೀರೊಳಗೆ ಈಜಿ ಕಾರ್ಯಾಚರಣೆ ನಡೆಸಬಲ್ಲ ಸಾಮರ್ಥ್ಯವನ್ನು ಈ ಮಾರ್ಕೋಸ್ ಪಡೆ  ಹೊಂದಿದ್ದು, ಇದರಿಂದ ಭಯೋತ್ಪಾದಕರು ಭಾರತಕ್ಕೆ ನದಿಗಳ ಮೂಲಕ ಒಳನುಸುಳಲು ಸಾಧ್ಯವಾಗುವುದಿಲ್ಲ.
ನದಿಗಳ ಸುತ್ತ ಪೊದೆಗಳನ್ನೊಳಗೊಂಡ ಸಣ್ಣ ಅರಣ್ಯವಿದ್ದು, ಇಲ್ಲಿ ಉಗ್ರರು ಶಸ್ತ್ರಾಸ್ತ್ರ ಸಮೇತ ತಲೆಮರೆಸಿಕೊಳ್ಳುವ ಸಾಧ್ಯತೆ ಇರುವುದರಿಂದ ರಾಷ್ಟ್ರೀಯ ರೈಫಲ್ ಪಡೆಯೊಂದಿಗೆ ಮಾರ್ಕೋಸ್ ಪಡೆ ಕಾರ್ಯಾಚರಣೆ ನಡೆಸುತ್ತಿದೆ.
ಸಮುದ್ರ ಮಾರ್ಗ ಅನುಸರಿಸುವ ಉಗ್ರರು :
ಭೂ ಮಾರ್ಗವಾಗಿ ಬಂದರೆ ಭದ್ರತಾ ಪಡೆಗಳಿಗೆ ಸುಲಭವಾಗಿ ಸಿಕ್ಕಿಬೀಳಬಹುದು ಎಂಬ ಆತಂಕದಿಂದ ಉಗ್ರರು ನದಿ, ಸಮುದ್ರ ಮೂಲಕ ಭಾರತ ಪ್ರವೇಶಿಸಿ ದಾಳಿ ನಡೆಸಲು ಯತ್ನಿಸಿದ್ದಾರೆ. ಈ ಹಿಂದೆ 2008ರ ಮುಂಬೈ ದಾಳಿ  ವೇಳೆಯಲ್ಲೂ ಉಗ್ರ ಅಜ್ಮಲ್ ಕಸಬ್ ಸಹಿತ 10 ಉಗ್ರರು ಸಣ್ಣ ಬೋಟ್ ಮೂಲಕ ಸಮುದ್ರ ಮಾರ್ಗವಾಗಿ ಮುಂಬೈ ತಲುಪಿ ದಾಳಿ ನಡೆಸಿದ್ದರು. 2008ರ ಸೆಪ್ಟೆಂಬರ್​ ನಲ್ಲಿ ಉಗ್ರರು ಸಮುದ್ರ ಮಾರ್ಗದ ಮೂಲಕ ಬಂದು  ಭಾರತದಲ್ಲಿ ದಾಳಿ ನಡೆಸುವ ಸಂಚು ವಿಫಲವಾಗಿತ್ತು ಎಂದು ಜಾಗತಿಕ ಉಗ್ರ ಡೇವಿಡ್ ಹೆಡ್ಲಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ. ಇತ್ತೀಚೆಗೆ ಕಾಶ್ಮೀರದಲ್ಲಿ ಹಲವು ಉಗ್ರ ದಾಳಿಗಳು ನಡೆದಿದ್ದು, ಬಹುತೇಕ ಉಗ್ರರು ಪಾಕಿಸ್ತಾನದಿಂದ ನದಿ  ಮೂಲಕ ಕಾಶ್ಮೀರ ಪ್ರವೇಶಿಸಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಕೆಲ ತಿಂಗಳ ಹಿಂದೆ ಗುಜರಾತ್​ ನ ಕಡಲ ತೀರದಲ್ಲಿ ಪಾಕಿಸ್ತಾನದ ಬೋಟ್ ಒಂದು ಪತ್ತೆಯಾಗಿತ್ತು. ಕರಾವಳಿ ರಕ್ಷಣಾ ಪಡೆಗಳು ಇವರನ್ನು ಬಂಧಿಸಲು ಮುಂದಾದಾಗ  ಬೋಟ್​ ನಲ್ಲಿದ್ದ ಶಂಕಿತ ಉಗ್ರರು ತಮ್ಮನ್ನೇ ಸ್ಪೋಟಿಸಿಕೊಂಡಿದ್ದರು.
250 ಚದರ ಕಿ.ಮೀ ವಿಸ್ತೀರ್ಣದ ವೂಲ್ಲರ್ ನದಿ ಸುತ್ತಲಿನ ಪ್ರದೇಶವನ್ನು ಅಡಗುತಾಣವಾಗಿಸಿಕೊಂಡಿದ್ದ ಉಗ್ರರನ್ನು ಸದೆಬಡಿಯಲು 1995ರಲ್ಲಿ ಮಾರ್ಕೋಸ್​ ಪಡೆಗಳನ್ನು ನಿಯೋಜಿಸಲಾಗಿತ್ತು. ವೂಲ್ಲರ್​ನಿಂದ ಶ್ರೀನಗರಕ್ಕೆ  ಕೇವಲ 100 ಕಿ.ಮೀ. ಅಂತರ ಇರುವುದರಿಂದ ಇಲ್ಲಿ ಅವರ ಕಾರ್ಯಚಟುವಟಿಕೆ ಭದ್ರತಾ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಯಾವುದೇ ರೀತಿಯ ಅಪಾಯಕಾರಿ  ಸನ್ನಿವೇಶಗಳಲ್ಲಿ ಶತ್ರುಗಳ ವಿರುದ್ಧ ಹೋರಾಡಲು ಇವರಿಗೆ ಕಠಿಣ ತರಬೇತಿಯನ್ನು ನೀಡಲಾಗಿರುತ್ತದೆ. ಚಾಕು, ಬಿಲ್ಲು, ಆಧುನಿಕ ರೈಫಲ್, ಬಂದೂಕು, ಗನ್ ಸಹಿತ ಎಲ್ಲ ಶಸ್ತ್ರಾಸ್ತ್ರಗಳ ತರಬೇತಿ ನೀಡಲಾಗುತ್ತದೆ. ಮಾರ್ಕೋಸ್​ ನಲ್ಲಿ  ಅತ್ಯುತ್ತಮ ಈಜುಪಟುಗಳಾಗಿದ್ದು (ಡೈವರ್), ನೀರೊಳಗೆ ಹಲವು ಕಿ.ಮೀ. ಈಜ ಬಲ್ಲರು. ಇದರಿಂದ ಸಮುದ್ರ ಮಾರ್ಗದ ಮೂಲಕ ಉಗ್ರ ಚಟುವಟಿಕೆ ನಡೆಸಲು ಭಯೋತ್ಪಾದಕರಿಗೆ ಕಷ್ಟವಾಗಲಿದೆ.
Source - Kannada Prabha
loading...

Veerakesari 17:55
ವಾಷಿಂಗ್ಟನ್‌: ಭಯೋತ್ಪಾದಕರಿಗೆ 'ಸುರಕ್ಷಿತ ನೆಲೆ'ಗಳನ್ನು ಒದಗಿಸುವ ದೇಶಗಳ ಪಟ್ಟಿಗೆ ಪಾಕಿಸ್ತಾನ ಸೇರ್ಪಡೆಯಾಗಿದೆ.
ಲಷ್ಕರೆ ತಯ್ಬಾ (ಎಲ್‌ಇಟಿ) ಮತ್ತು ಜೈಷೆ ಮೊಹಮ್ಮದ್‌ (ಜೆಇಎಂ) ನಂತಹ ಉಗ್ರ ಸಂಘಟನೆಗಳು ಪಾಕಿಸ್ತಾನದಲ್ಲಿ 2016ರಿಂದೀಚೆಗೆ ಬಹಿರಂಗವಾಗಿಯೇ ಕಾರ್ಯಾಚರಿಸುತ್ತಿದ್ದು, ಭಯೋತ್ಪಾದಕರ ನೇಮಕ, ತರಬೇತಿ ಹಾಗೂ ವಿಧ್ವಂಸಕ ಕೃತ್ಯಗಳಿಗೆ ನಿಧಿ ಸಂಗ್ರಹಣೆಯಂತಹ ಚಟುವಟಿಕೆಗಳಲ್ಲಿ ತೊಡಗಿವೆ.
'ಭಯೋತ್ಪಾದನೆ ಕುರಿತ ದೇಶಗಳ ವಾರ್ಷಿಕ ವರದಿ'ಯಲ್ಲಿ ವಿದೇಶಾಂಗ ಇಲಾಖೆ ಈ ವಿಷಯವನ್ನು ದೃಢೀಕರಿಸಿದ್ದು, ಪಾಕಿಸ್ತಾನದೊಳಗೆ ಭಯೋತ್ಪಾದಕ ಕೃತ್ಯಗಳನ್ನು ನಡೆಸಿದ 'ತೆಹ್ರೀಕ್‌ ಎ ತಾಲಿಬಾನ್ ಪಾಕಿಸ್ತಾನ್‌' ನಂತಹ ಸಂಘಟನೆಗಳ ವಿರುದ್ಧ ಪಾಕ್ ಮಿಲಿಟರಿ ಹಾಗೂ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿವೆ ಎಂದು ತಿಳಿಸಿದೆ.
'ಆದರೆ ಅಫ್ಘಾನ್ ತಾಲಿಬಾನ್ ಅಥವಾ ಹಕ್ಕಾನಿ ನೆಟ್‌ವರ್ಕ್‌ನಂತಹ ಅನ್ಯ ದೇಶಗಳಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಉಗ್ರ ಸಂಘಟನೆಗಳ ವಿರುದ್ಧ ಪಾಕ್‌ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ಅವುಗಳನ್ನು ಪೋಷಿಸುತ್ತಿದೆ. ಅಫ್ಘಾನಿಸ್ತಾನದಲ್ಲಿ ಅಮೆರಿಕದ ಹಿತಾಸಕ್ತಿಗಳ ವಿರುದ್ಧ ಕಾರ್ಯಾಚರಿಸುವ ಉಗ್ರರ ನಿಗ್ರಹಕ್ಕೆ ಪಾಕ್‌ ನಿರ್ಲಕ್ಷ್ಯ ವಹಿಸಿದೆ' ಎಂದು ವಿದೇಶಾಂಗ ಇಲಾಖೆ ವರದಿ ತಿಳಿಸಿದೆ.
ಭಾರತ ಕೂಡ ಮಾವೋವಾದಿ ಉಗ್ರರು ಮತ್ತು ಪಾಕ್‌ ಮೂಲದ ಉಗ್ರರಿಂದ ಪದೇ ಪದೇ ದಾಳಿಗೆ ಗುರಿಯಾಗುತ್ತಿದೆ ಎಂದು ವರದಿ ಹೇಳಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ಪ್ರಾಯೋಜಿತ ಗಡಿಯಾಚೆಗಿನ ಭಯೋತ್ಪಾದನೆ ಕುರಿತ ಭಾರತದ ಆರೋಪ ನಿಜವಾಗಿದೆ ಎಂದು ಅಮೆರಿಕ ಹೇಳಿದೆ.
'ಜನವರಿಯಲ್ಲಿ ಭಾರತದ ಪಂಜಾಬ್‌ನ ಪಠಾಣ್‌ಕೋಟ್‌ ಸೇನಾ ನೆಲೆಯ ಮೇಲೆ ಜೈಷೆ ಮೊಹಮ್ಮದ್‌ ಉಗ್ರರು ದಾಳಿ ನಡೆಸಿದ್ದಾರೆ. 2016ರ ಬಳಿಕ ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಭಾರತ ಅಮೆರಿಕದೊಂದಿಗಿನ ಸಹಕಾರವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ' ಎಂದು ವಿದೇಶಾಂಗ ಇಲಾಖೆ ವರದಿ ಹೇಳಿದೆ.
ಐಸಿಸ್‌ನೊಂದಿಗೆ ಸಂಪರ್ಕ ಹೊಂದಿದ ಹಲವು ಉಗ್ರರನ್ನು ಭಾರತ ಬಂಧಿಸಿದ್ದು, ದೇಶದೊಳಗೆ ಐಸಿಸ್ ಜಾಲ ಬೆಳೆಯದಂತೆ ನಿಗಾವಹಿಸಿದೆ.
'ಪಾಕಿಸ್ತಾನ ಉಗ್ರರ ಸ್ವರ್ಗ' ಎಂಬ ಪ್ರತ್ಯೇಕ ಅಧ್ಯಾಯವನ್ನೇ ಈ ವರದಿ ಒಳಗೊಂಡಿದೆ. ಹಕ್ಕಾನಿ ನೆಟ್‌ವರ್ಕ್‌ (ಎಚ್‌ಕ್ಯುಎನ್‌), ಎಲ್‌ಇಟಿ ಮತ್ತು ಜೆಇಎಂ ಸೇರಿದಂತೆ ಹಲವು ಉಗ್ರ ಸಂಘಟನೆಗಳು 2016ರ ಬಳಿಕವೂ ಪಾಕಿಸ್ತಾನದೊಳಗೆ ಸುರಕ್ಷಿತ ನೆಲೆ ಕಂಡುಕೊಂಡಿವೆ.
'ಎಲ್‌ಇಟಿಯನ್ನು ಪಾಕಿಸ್ತಾನದೊಳಗೆ ನಿಷೇಧಿಸಿದ್ದರೂ, ಅದರ ಉಪ ಸಂಘಟನೆಗಳಾದ ಜಮಾತ್‌ ಉದ್‌ ದಾವಾ (ಜೆಯುಡಿ) ಮತ್ತು ಫಲಾಹ್‌ ಇ-ಇನ್ಸಾನಿಯತ್‌ ಫೌಂಡೇಶನ್‌ (ಎಫ್‌ಐಎಫ್‌) ಈಗಲೂ ಬಹಿರಂಗವಾಗಿಯೇ ಇಸ್ಲಾಮಾಬಾದ್‌ನಲ್ಲಿ ನಿಧಿ ಸಂಗ್ರಹಿಸುತ್ತಿವೆ' ಎಂದು ವರದಿ ಹೇಳಿದೆ.
'ಎಲ್ಇಟಿ ಮುಖ್ಯಸ್ಥ ಹಫೀಜ್‌ ಸಯೀದ್‌ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕನೆಂದು ವಿಶ್ವಸಂಸ್ಥೆ ಘೋಷಿಸಿದ್ದರೂ, ಈತ ಪಾಕಿಸ್ತಾನದಲ್ಲಿ ಅಲ್ಲಲ್ಲಿ ಬಹಿರಂಗ ರ‍್ಯಾಲಿಗಳನ್ನು ನಡೆಸುತ್ತಿದ್ದಾನೆ' ಎಂದು ಅಮೆರಿಕ ತಿಳಿಸಿದೆ.
Source - Vijaya Karnataka
loading...
Powered by Blogger.